ಇಸ್ಲಾಮಾಬಾದ್: ಭಾರತದ ವಿರುದ್ಧ ಸದಾ ಕತ್ತಿ ಮಸೆಯುವ ಪಾಕಿಸ್ತಾನ ಅವಕಾಶ ಸಿಕ್ಕಾಗಲೆಲ್ಲ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸುತ್ತಲ್ಲೇ ಇರುತ್ತದೆ. ವಾಯು ಗಡಿ ಪ್ರವೇಶಕ್ಕೆ ಸಂಬಂಧಿಸಿದಂತೆ ಭಾರತದ ಮನವಿಯನ್ನು ಪಾಕ್ ಸರ್ಕಾರ ತಿರಸ್ಕರಿಸಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ಸ್ಥಾನಮಾನವನ್ನು ಭಾರತ ಸರ್ಕಾರ ರದ್ದು ಪಡಿಸಿದ ನಂತರ ಪಾಕ್ ಭಾರತದ ಮೇಲೆ ವಿಷಕಾರುತ್ತಿದೆ. ಪ್ರಧಾನಿ ಮೋದಿ ಸೌದಿ ಅರೇಬಿಯಾ ಪ್ರವಾಸ ಹಮ್ಮಿಕೊಂಡಿದ್ದು, ಪ್ರಧಾನಿ ವಿಮಾನಕ್ಕೆ ಪಾಕ್ ತನ್ನ ವಾಯು ಪ್ರದೇಶದಲ್ಲಿ ಪ್ರಯಾಣಿಸಲು ಅವಕಾಶ ನೀಡದಿರಲು ನಿರ್ಧರಿಸಿದೆ.
ಭಾರತದ ಮನವಿಗೆ ಇಲ್ಲವೆಂದ ಪಾಕ್ ಇದಕ್ಕೆ ಕೊಟ್ಟ ಕಾರಣ ಅದರ ನರಿ ಬುದ್ಧಿಯ ನಡೆ ಪ್ರದರ್ಶಿಸಿದಂತಿದೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಕಾರಣವೆಂದು ಉಲ್ಲೇಖಿಸಿದೆ. 'ಭಾರತದ ಪ್ರಧಾನಿ ಪಾಕಿಸ್ತಾನದ ವಾಯುಗಡಿ ಪ್ರದೇಶ ಬಳಕೆಗೆ ನಿರ್ಬಂಧ ಹೇರಿರುವುದನ್ನು ಭಾರತದ ಹೈಕಮಿಷನರ್ಗೆ ಲಿಖಿತ ರೂಪದಲ್ಲಿ ಸಲ್ಲಿಸುವುದಾಗಿ' ಪಾಕ್ ವಿದೇಶಾಂಗ ಸಚಿವ ಷಾ ಮೊಹಮ್ಮದ್ ಖುರೇಷಿ ಹೇಳಿದ್ದಾರೆ.