ನವದೆಹಲಿ : ನೂತನ ಕೃಷಿ ಮಸೂದೆಗಳ ವಿರುದ್ಧ ದೇಶಾದ್ಯಂತ ವ್ಯಾಪಕ ರೈತರ ಪ್ರತಿಭಟನೆ ಮಧ್ಯೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖರೀದಿಯ ಬಗ್ಗೆ ರೈತರು ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಸರ್ಕಾರ ಅಭಯ ನೀಡಿದ ಬಳಿಕ ಕಳೆದ 48 ಗಂಟೆಗಳಲ್ಲಿ ಭತ್ತದ ಸಂಗ್ರಹದ ಮಾಹಿತಿ ಹಂಚಿಕೊಂಡಿದೆ.
ಹೊಸ ಕೃಷಿಕ ಮಸೂದೆಯಡಿ ಬೇಸಿಗೆಯಲ್ಲಿ ಬಿತ್ತನೆ ಮಾಡಿದ ಭತ್ತ ಹಾಗೂ ಈ ವರ್ಷದ ದ್ವಿದಳ ಧಾನ್ಯ ಮತ್ತು ಎಣ್ಣೆಬೀಜಗಳ ಸಂಗ್ರಹಕ್ಕೆ ಚಾಲನೆ ನೀಡಿದೆ. ಪಂಜಾಬ್ ಮತ್ತು ಹರಿಯಾಣ ಮತ್ತು ಇತರ ಹಲವು ರಾಜ್ಯಗಳಲ್ಲಿ ರೈತರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಎಂಎಸ್‌ಪಿ ಕಾರ್ಪೊರೇಟ್‌ಗಳ ಕೈಗೆ ಸಿಲುಕಿ ಅದರ ಆಡಳಿತ ಕೊನೆಗೊಳ್ಳಲಿದೆ ಎಂಬುದು ಕೃಷಿಕರ ವಾದ.
ಸೆಪ್ಟೆಂಬರ್ 27ರವರೆಗೆ ಹರಿಯಾಣ ಮತ್ತು ಪಂಜಾಬ್‌ನ ರೈತರಿಂದ ಪ್ರತಿ ಕ್ವಿಂಟಲ್‌ಗೆ 1,868 ರೂ. ಎಂಎಸ್‌ಪಿಯಲ್ಲಿ ಸುಮಾರು 5,637 ಟನ್ ಭತ್ತ ಸಂಗ್ರಹಿಸಲಾಗಿದೆ. ಉಳಿದ ರಾಜ್ಯಗಳಿಗೆ ಭತ್ತದ ಖರೀದಿ ಇಂದಿನಿಂದ ಪ್ರಾರಂಭವಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.
ಕಳೆದ 48 ಗಂಟೆಗಳಲ್ಲಿ ಹರಿಯಾಣ ಮತ್ತು ಪಂಜಾಬ್‌ನ 390 ರೈತರಿಂದ 10.53 ಕೋಟಿ ರೂ.ಗಳ ಎಂಎಸ್‌ಪಿ ಮೌಲ್ಯದ ಭತ್ತ ಸಂಗ್ರಹಿಸಲಾಗಿದೆ. 2020-21ರ ಖಾರಿಫ್ ಮಾರ್ಕೇಟಿಂಗ್ ಸೀಸನ್‌ನಲ್ಲಿ ಭತ್ತದ ಸಂಗ್ರಹವು ಸೆಪ್ಟೆಂಬರ್ 26ರಿಂದ ಪ್ರಾರಂಭವಾಗಿದೆ.
2020-21ರ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ ಸರ್ಕಾರವು 495.37 ಲಕ್ಷ ಟನ್ ಭತ್ತ ಖರೀದಿ ಗುರಿ ಇಟ್ಟುಕೊಂಡಿದೆ. ಭತ್ತದ ಹೊರತಾಗಿ ಸರ್ಕಾರವು ತನ್ನ ನೋಡಲ್ ಏಜೆನ್ಸಿಗಳ ಮೂಲಕ ಸೆಪ್ಟೆಂಬರ್ 24ರವರೆಗೆ ತಮಿಳುನಾಡಿನ 40 ರೈತರಿಂದ 25 ಲಕ್ಷ ರೂ. ಮೌಲ್ಯದ 34.20 ಟನ್ ಬೆಳೆ ಖರೀದಿಸಿದೆ.
52.40 ಕೋಟಿ ರೂ. ಎಂಎಸ್‌ಪಿ ಮೌಲ್ಯ ಹೊಂದಿರುವ 5,089 ಟನ್ ಕೊಬ್ಬರಿ (ದೀರ್ಘಕಾಲಿಕ ಬೆಳೆ) ಸಂಗ್ರಹಿಸಲಾಗಿದೆ. ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಕೇರಳಕ್ಕೆ 95.75 ಲಕ್ಷ ಟನ್ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡಿನ 3,961 ರೈತರಿಗೆ ಲಾಭವಾಗಿದೆ ಎಂದು ಹೇಳಿದೆ.
ರಾಜ್ಯಗಳ ಪ್ರಸ್ತಾವನೆಯ ಆಧಾರದ ಮೇಲೆ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಹರಿಯಾಣ ರಾಜ್ಯಗಳಿಂದ ಒಟ್ಟು 13.77 ಲಕ್ಷ ಟನ್ ಖಾರಿಫ್ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳು ಖರೀದಿಸಲು ಅನುಮತಿ ನೀಡಿದೆ ಎಂದು ಸಚಿವಾಲಯ ತಿಳಿಸಿದೆ.