ETV Bharat / business

ಜಿಎಸ್​ಟಿ ಜಾರಿ, ಕೊರೊನಾ ಕಾರಣಕ್ಕೆ ರಾಜ್ಯಗಳಿಗೆ ಸಿಗಬೇಕಾದ ಪರಿಹಾರದ ಮೊತ್ತ ತಿರಸ್ಕರಿಸಲ್ಲ: ಸೀತಾರಾಮನ್​ - 42 GST council

ಜಿಎಸ್​​ಟಿ ಅನುಷ್ಠಾನದಿಂದಾಗಿ ಅಥವಾ ಕೋವಿಡ್​ 19 ಕಾರಣದಿಂದಾಗಿ ಉಂಟಾದ ಪರಿಹಾರ ಕೊರತೆಯ ಎಲ್ಲವನ್ನೂ ರಾಜ್ಯಗಳಿಗೆ ಹಿಂದಿರುಗಿಸಲಾಗುವುದು. ಜಿಎಸ್​​ಟಿ ಅನುಷ್ಠಾನ ಅಥವಾ ಕೋವಿಡ್​19 ಪ್ರಭಾವದಿಂದಾಗಿ ಯಾರಿಗೂ ಪರಿಹಾರ ನಿರಾಕರಿಸಲಾಗುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.

GST
ಜಿಎಸ್​ಟಿ
author img

By

Published : Oct 5, 2020, 8:57 PM IST

Updated : Oct 5, 2020, 9:14 PM IST

ನವದೆಹಲಿ: ಜಿಎಸ್​ಟಿ ಪರಿಹಾರ ಸಂಬಂಧ ಕೇಂದ್ರ ಇರಿಸಿರುವ ಎರಡು ಆಯ್ಕೆಗಳ ಬಗ್ಗೆ ಬಿಜೆಪಿಯೇತರ ರಾಜ್ಯ ಸರ್ಕಾರಗಳ ವಿರೋಧದ ನಡುವೆಯೂ 42ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಸಭೆಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ಬಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸೀತಾರಾಮನ್, ಜಿಎಸ್​ಟಿ ಮತ್ತು ಕೋವಿಡ್​ ಪರಿಣಾಮ ಅನುಷ್ಠಾನದಿಂದ ಉಂಟಾದ ಪರಿಹಾರವನ್ನು ಯಾರಿಗೂ ನಿರಾಕರಿಸಲು ಆಗುವುದಿಲ್ಲ. ರಾಜ್ಯಗಳೊಂದಿಗೆ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸುಮಾರು 20 ರಾಜ್ಯಗಳು ಆಯ್ಕೆ ಒಂದನ್ನು ಆಯ್ದುಕೊಂಡಿದ್ದಾರೆ. ಆ 20 ರಾಜ್ಯಗಳು ತಾವು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಪತ್ರ ಬರೆದಿದ್ದಾರೆ ಎಂದು ಹಣಕಾಸು ಸಚಿವೆ ಹೇಳಿದರು.

ಸುಮಾರು 20 ರಾಜ್ಯಗಳು ಆಯ್ಕೆ ಒಂದನ್ನು ಆರಿಸಿಕೊಂಡಿದ್ದರೆ, ಕೆಲವು ರಾಜ್ಯಗಳು ಯಾವುದೇ ಆಯ್ಕೆ ಮಾಡಿಕೊಂಡಿಲ್ಲ. ಅವು ಕೇಂದ್ರವೇ ಸಾಲ ಪಡೆಯಬೇಕು ಎಂದು ಬಯಸಿವೆ. ಈ ಕುರಿತು ಈಗಾಗಲೇ ಸಾಕಷ್ಟು ಚರ್ಚೆ ನಡೆಯಿತು. ನಾವು ಮತ್ತಷ್ಟು ಮಾತನಾಡಬೇಕಾಗಿದೆ ಎಂದು ಭಾವಿಸಲಾಯಿತು. ಅದರಂತೆ ಅಕ್ಟೋಬರ್ 12ರಂದು ಮತ್ತೆ ಸಭೆ ಸೇರಿ ಈ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಪರಿಹಾರ ಅಂತರದ ಕೊರತೆ ಪೂರೈಸುವ ಆಯ್ಕೆಗಳಿಗೆ ರಾಜ್ಯಗಳ ಒಳಹರಿವಿನ ಆಧಾರದ ಮೇಲೆ ಕೆಲವು ಬದಲಾವಣೆಗಳನ್ನು ಈಗಾಗಲೇ ಮಾಡಲಾಗಿದೆ. ಉದಾ: ಆಯ್ಕೆ 1ರಲ್ಲಿ ಸಾಲ ಪಡೆಯಬೇಕಾದ 97,000 ಕೋಟಿ ರೂ. ಆಗಿದ್ದು, ಆಗಿನ ಮೊತ್ತವನ್ನು 1.1 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದ್ದೇವೆ ಎಂದರು.

ಮರುಪಾವತಿಯಲ್ಲಿ ಸಾಲ ಪಡೆದ ಮೊತ್ತದ ಮೇಲಿನ ಬಡ್ಡಿ 5 ವರ್ಷಗಳ ಬಳಿಕ ಸಂಗ್ರಹವಾಗುವ ಸೆಸ್​ನ ಪ್ರಾಥಮಿಕ ಶುಲ್ಕವಾಗಿರುತ್ತದೆ. ಸಾಲ ಪಡೆಯುವ ಪ್ರಿನ್ಸ್​ಪಲ್ ಮೊತ್ತದ ಮೇಲೆ ಮುಂದಿನ ಶುಲ್ಕ ಶೇ 50ರಷ್ಟು ಆಗಿರಬಹುದು ಎಂದರು.

ಕೋವಿಡ್​ 19 ಬಿಕ್ಕಟ್ಟಿನ ಉಂಟಾದ ಅಸಾಧಾರಣ ಪರಿಸ್ಥಿತಿಯ ಪರಿಹಾರದ ಅಂತರವನ್ನು 5 ವರ್ಷಗಳ ಬಳಿಕ ಸಂಗ್ರಹಿಸುವ ಸೆಸ್‌ನಿಂದ ಪಾವತಿಸಲಾಗುತ್ತದೆ. 5 ವರ್ಷಗಳ ಬಳಿಕ ಸಂಗ್ರಹವಾಗುವ ಸೆಸ್​ಗೆ ಮೊದಲು ಎರವಲು ಪಡೆದ ಮೊತ್ತದ ಬಡ್ಡಿಗೆ ಶುಲ್ಕವಿರುತ್ತದೆ. ಶೇ 50ರಷ್ಟು ಉಳಿದಿರುವುದು ಅಸಲು ಮೊತ್ತ ಪಾವತಿಸಬಹುದು. ಕೋವಿಡ್​-19 ಪೀಡಿತ ಪರಿಹಾರದ ಅಂತರಕ್ಕೆ ಮುಂದಿನ ಶೇ 50ರಷ್ಟು ಪಾವತಿಸಬೇಕಾಗುತ್ತದೆ ಎಂದರು.

ಜಿಎಸ್​ಟಿ ಪರಿಹಾರದ ಅಂತರ ಪೂರೈಸಲು ರಾಜ್ಯಗಳಿಗೆ ನೀಡಲಾದ ಸಾಲವು ಶೇ 5ರಷ್ಟು ಜಿಎಸ್​​ಡಿಪಿಯ ಸಾಲ ಮಿತಿ ಮೀರಿದೆ. ಜಿಎಸ್​​ಡಿಪಿ ವಿರುದ್ಧವಾಗಿ ರಾಜ್ಯ ಸಾಲಗಳ ಹಣಕಾಸು ಆಯೋಗದ ಮೌಲ್ಯಮಾಪನದಲ್ಲಿ ಸಾಲವನ್ನು ಪರಿಗಣಿಸಲಾಗುವುದಿಲ್ಲ. ಇದು 15ನೇ ಹಣಕಾಸು ಆಯೋಗದ ದೃಷ್ಟಿಯಲ್ಲಿ ರಾಜ್ಯಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

ರಾಜ್ಯದ ಇತರ ಸಂಪನ್ಮೂಲಗಳಿಂದ ಬಡ್ಡಿ ಅಥವಾ ಅಸಲು ಪಾವತಿಸಬೇಕಾಗಿಲ್ಲ. ಸೆಸ್​ ಮೊತ್ತವೇ ಅದನ್ನು ನೋಡಿಕೊಳ್ಳುತ್ತದೆ. ಆದ್ದರಿಂದ ಇದು ರಾಜ್ಯಗಳ ಮೇಲೆ ಹೊರೆಯಾಗುವುದಿಲ್ಲ. ಸಂಪೂರ್ಣ ಪರಿಹಾರವನ್ನು ರಾಜ್ಯಗಳಿಗೆ ಹಿಂದಿರುಗಿಸಲಾಗುವುದು. ಜಿಎಸ್​​ಟಿ ಅನುಷ್ಠಾನದಿಂದಾಗಿ ಅಥವಾ ಕೋವಿಡ್​ 19 ಕಾರಣದಿಂದಾಗಿ ಉಂಟಾದ ಪರಿಹಾರ ಕೊರತೆಯ ಎಲ್ಲವನ್ನೂ ರಾಜ್ಯಗಳಿಗೆ ಹಿಂದಿರುಗಿಸಲಾಗುವುದು. ಜಿಎಸ್​​ಟಿ ಅನುಷ್ಠಾನ ಅಥವಾ ಕೋವಿಡ್​19 ಪ್ರಭಾವದಿಂದಾಗಿ ಯಾರಿಗೂ ಪರಿಹಾರ ನಿರಾಕರಿಸಲಾಗುವುದಿಲ್ಲ ಎಂದು ಹಣಕಾಸು ಸಚಿವೆ ಭರವಸೆ ನೀಡಿದರು.

Last Updated : Oct 5, 2020, 9:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.