ನವದೆಹಲಿ: ಎಮ್ಮೆ ಮಾಂಸ ಅಥವಾ ಮೀನು ರಫ್ತು ನಿಷೇಧಿಸುವಂತಹ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಹೇಳಿದೆ.
ಭಾರತ ವಿದೇಶಕ್ಕೆ 70,000 ಕೋಟಿ ರೂ. ವಹಿವಾಟಿನಷ್ಟು ಎಮ್ಮೆ ಮಾಂಸ ಮತ್ತು ಮೀನುಗಳನ್ನು ರಫ್ತು ಮಾಡುತ್ತಿದೆ. ಇದನ್ನು ನಿಷೇಧಿಸುವ ಪ್ರಶ್ನೆಯೆ ನಮ್ಮ ಮುಂದೆ ಇಲ್ಲ ಎಂದು ಸಚಿವ ಸಂಜೀವ್ ಕುಮಾರ್ ಸಂಸತ್ತಿನ ಮೇಲ್ಮನೆಗೆ ತಿಳಿಸಿದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಹಸುಗಳ ಪಾಲನೆ ರಾಜ್ಯಗಳ ವ್ಯಾಪ್ತಿಗೆ ಬರುತ್ತದೆ. ಪ್ರಾಣಿ ಕಲ್ಯಾಣ ಮಂಡಳಿಗೆ ಬಜೆಟ್ನಲ್ಲಿ 4 ಕೋಟಿ ರೂ. ಕೌಶೆಡ್ ನಿರ್ಮಾಣಕ್ಕಾಗಿ ಮೀಸಲಿರಿಸಲಾಗಿದೆ. ಇದಕ್ಕಿಂತ ಹೆಚ್ಚಿನ ಸಹಾಯಧನ ನೀಡಲಾಗುವುದಿಲ್ಲ. ಈ ಹಣ ನೌಕರರ ವೇತನ ಮತ್ತು ಕೂಲಿಯನ್ನೂ ನೋಡಿಕೊಳ್ಳುತ್ತದೆ ಎಂದು ಹೇಳಿದರು.