ನವದೆಹಲಿ: ಇತ್ತೀಚಿನ ದಿನಗಳಲ್ಲಿನ ಹಲವು ಕೈಗಾರಿಕಾ ಅವಘಡಗಳ ಉದಾಸೀನತೆಯನ್ನು ವಿಶಾಖಪಟ್ಟಣಂನ ಪಾಲಿಮರ್ ರಾಸಾಯನಿಕ ಕಾರ್ಖಾನೆಯ ದುರಂತ ಎತ್ತಿ ತೋರಿಸಿದೆ.
ಗುರುವಾರ ಸಂಭವಿಸಿದ ಈ ಅವಘಡದಲ್ಲಿ ಕನಿಷ್ಠ 11 ಜನರು ಮೃತಪಟ್ಟಿದ್ದು, ನೂರಾರು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಭವಿಷ್ಯದ ಇಂತಹ ವಿಪತ್ತುಗಳನ್ನು ಕಡಿಮೆ ಮಾಡಲು ಬಹುದಿನಗಳ ಹಿಂದೆ ಧೂಳು ಹಿಡಿದಿದ್ದ 'ರಾಸಾಯನಿಕ ಅಪಘಾತ ನಿಯಮಗಳ ತಿದ್ದುಪಡಿ’ ಕಾಯ್ದೆಯನ್ನು ಸರ್ಕಾರ ಅಂತಿಮಗೊಳಿಸುವ ಹಂತದಲ್ಲಿದೆ.
1984ರ ಭೋಪಾಲ್ ಅನಿಲ ದುರಂತದ ಬಳಿಕ ಪರಿಸರ ಮತ್ತು ಅರಣ್ಯ ಸಚಿವಾಲಯವು (ಎಂಇಎಫ್) ಅಪಾಯಕಾರಿ ರಾಸಾಯನಿಕಗಳ ಉತ್ಪಾದನೆ, ಸಂಗ್ರಹಣೆ ಮತ್ತು ಆಮದು (ಎಂಎಸ್‌ಐಎಚ್‌ಸಿ) ನಿಯಮಗಳು, 1989 ಮತ್ತು ರಾಸಾಯನಿಕ ಅಪಘಾತಗಳು (ತುರ್ತು ಯೋಜನೆ, ಸಿದ್ಧತೆ ಮತ್ತು ಪ್ರತಿಕ್ರಿಯೆ), (ಸಿಎಇಪಿಪಿಆರ್) ನಿಯಮಗಳು, 1996-ಅಪಾಯಕಾರಿ ರಾಸಾಯನಿಕಗಳ ಉತ್ಪಾದನೆ, ಬಳಕೆ ಮತ್ತು ನಿರ್ವಹಣೆ ನಿಯಂತ್ರಣದ ಹೊಸ ಕಾಯ್ದೆ ಜಾರಿಗೆ ತಂದಿತ್ತು.
2016ರಲ್ಲಿ ಎಂಇಎಫ್, ಸಮಯಕ್ಕೆ ಅನುಗುಣವಾಗಿ ನಿಯಮಗಳನ್ನು ನವೀಕರಿಸಲು ಪ್ರಸ್ತಾಪಿಸಿತ್ತು. ರಾಸಾಯನಿಕ ಉದ್ಯಮಗಳಲ್ಲಿ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಬಯಸುವ ನಿಯಮಗಳಿಗೆ ಕರಡು ತಿದ್ದುಪಡಿಯನ್ನು ಮಧ್ಯಸ್ಥಗಾರರ ಸಮಾಲೋಚನೆಗೆ ರೂಪಿಸಲಾಗಿತ್ತು. ಆದರೆ ಈ ನಿಯಮಗಳನ್ನು ಅಂತಿಮಗೊಳಿಸಲು ಸಾಧ್ಯವಾಗಿರಲಿಲ್ಲ ಎಂದು ಈ ಬಗ್ಗೆ ಮಾಹಿತಿ ಇರುವ ಅಧಿಕಾರಿಗಳು ತಿಳಿಸಿದ್ದಾರೆ.
ತಿದ್ದುಪಡಿಯನ್ನು ಸಮಿತಿಗೆ ಉಲ್ಲೇಖಿಸಿ, ಅದರ ಶಿಫಾರಸುಗಳನ್ನು ಅಂತಿಮಗೊಳಿಸಲು ಸಾಕಷ್ಟು ಸಮಯ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ. ರಾಸಾಯನಿಕ ಮತ್ತು ಪೆಟ್ರೋ ಕೆಮಿಕಲ್ಸ್ ಇಲಾಖೆ (ಡಿಸಿಪಿಸಿ), ಜಗತ್ತಿನಾದ್ಯಂತ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು ಎಲ್ಲಾ ರಾಸಾಯನಿಕಗಳ ಬಳಕೆಯನ್ನು ನಿಯಂತ್ರಿಸಲು ಒಂದು ಶಕ್ತಿಯುತವಾದ ಕಾಯ್ದೆ ಬಯಸಿತ್ತು. ಪೂರ್ವ ಬಳಕೆಯ ನೋಂದಣಿ ಮತ್ತು ದಾಸ್ತಾನು ನಿರ್ವಹಣೆಯಲ್ಲಿ ಡಿಸಿಪಿಸಿ ಉತ್ಸುಕವಾಗಿದೆ. ಇದು ಒಂದು ರೀತಿಯಲ್ಲಿ ಪರವಾನಗಿಯಂತಿದೆ ಎಂದು ಹೇಳಿದರು.
ಇಂತಹ ದುರಂತ ಬೇರೆ ಕಡೆ ಮರುಕಳಿಸುವ ಮುನ್ನ ಕಠಿಣ ನಿಯಮಗಳು ಅಲ್ಪಾವಧಿಯಲ್ಲಿಯೇ ಹೊರಬರಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೈಗಾರಿಕಾ ಚಟುವಟಿಕೆಗಳಿಂದ ಉಂಟಾಗುವ ರಾಸಾಯನಿಕ ಅಪಘಾತಗಳನ್ನು ತಡೆಗಟ್ಟುವುದು ಮತ್ತು ರಾಸಾಯನಿಕ (ಕೈಗಾರಿಕಾ) ಅಪಘಾತಗಳ ಪರಿಣಾಮಗಳನ್ನು ಮಿತಿಗೊಳಿಸುವುದು ಎಂಎಸ್‌ಐಹೆಚ್‌ಸಿ ನಿಯಮಗಳ ಮುಖ್ಯ ಉದ್ದೇಶವಾಗಿದೆ.
ಸಿಎಇಪಿಪಿಆರ್ ನಿಯಮಗಳು, 1996ರ ಬಿಕ್ಕಟ್ಟು ನಿರ್ವಹಣಾ ಸ್ಥಾಪನೆಗೆ ಶಾಸನಬದ್ಧ ಬೆಂಬಲ ಒದಗಿಸುತ್ತದೆ. ಪ್ರಮುಖ ಅಪಘಾತ ಅಪಾಯದ (ಎಂಎಹೆಚ್) ಸ್ಥಾಪನೆಗಳನ್ನು ಗುರುತಿಸುವ ಮಾನದಂಡಗಳನ್ನು ಸಹ ಸೂಚಿಸುತ್ತದೆ. ಇಂತಹ ಸ್ಥಾವರಗಳನ್ನು ಹೊಂದಿರುವ ಎಲ್ಲಾ ಜಿಲ್ಲೆಗಳು ಬಿಕ್ಕಟ್ಟು ನಿರ್ವಹಣಾ ಗುಂಪುಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂಬುದನ್ನು ಒತ್ತಿ ಹೇಳುತ್ತದೆ.