ಮುಂಬೈ: ಜನರ ಬಳಿ ಇರುವ ಭೌತಿಕ ಚಿನ್ನದಿಂದ ಹಣಗಳಿಕೆಯ ಸಹಾಯಕ್ಕಾಗಿ ದೇಶದಲ್ಲಿ ಚಿನ್ನದ ಬ್ಯಾಂಕ್ (Gold Bank) ಸ್ಥಾಪಿಸುವ ಅಗತ್ಯವಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಡೆಪ್ಯುಟಿ ಗವರ್ನರ್ ರಾಮ ಸುಬ್ರಮಣ್ಯಂ ಗಾಂಧಿ ಹೇಳಿದ್ದಾರೆ.
ಡಿಜಿಟಲ್ ಸಾಲ ನೀಡುವ ಫಿನ್‌ಟೆಕ್ ಸಂಸ್ಥೆ ರುಪೇಕ್ ಆಯೋಜಿಸಿದ್ದ ವರ್ಚುಯಲ್‌ನಲ್ಲಿ ಮಾತನಾಡಿದ ಅವರು, ಭಾರತದಲ್ಲಿನ ಮನೆಗಳು ಹಾಗೂ ಧಾರ್ಮಿಕ ಸಂಸ್ಥೆಗಳಲ್ಲಿ ಸುಮಾರು 23,000-24,000 ಟನ್‌ಗಳಷ್ಟು ಚಿನ್ನವಿದೆ ಎಂದು ಅಂದಾಜಿಸಲಾಗಿದೆ. ಆದರೆ, ಜನರ ಮನಸ್ಸನ್ನು ಬದಲಾಯಿಸುವುದು ಸುಲಭವಲ್ಲ ಎಂದು ಅವರು ಹೇಳಿದರು.
ಇದು ಚಿನ್ನದ ಬ್ಯಾಂಕ್ ಪರಿಕಲ್ಪನೆಯನ್ನು ಪುನರುತ್ಥಾನಗೊಳಿಸುವ ಸಮಯವಾಗಿರಬಹುದು. ಚಿನ್ನದ ಸಾಲಗಳನ್ನು ಪ್ರತ್ಯೇಕವಾಗಿ ಅಥವಾ ಪ್ರಧಾನವಾಗಿ ನೀಡುವ ಚಿನ್ನದ ಠೇವಣಿಗಳನ್ನು ಈ ಬ್ಯಾಂಕ್ ಸ್ವೀಕರಿಸುತ್ತದೆ ಎಂದು ವಿವರಿಸಿದರು.
ಭಾರತದಂತಹ ಉದಯೋನ್ಮುಖ ಆರ್ಥಿಕತೆಗಳಿಗೆ ಸ್ಥಿರವಾದ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಲು ಸಾಕಷ್ಟು ಬಂಡವಾಳದ ಅಗತ್ಯವಿದೆ. ಇದು ಜನಸಂಖ್ಯೆಯ ಉನ್ನತ ಜೀವನಮಟ್ಟಕ್ಕೆ ಕಾರಣವಾಗುತ್ತದೆ. ಬ್ಯಾಂಕ್ ಪರವಾನಗಿ ನೀತಿಯ ವಿಷಯದಲ್ಲಿ ಕೆಲವು ನಿಯಂತ್ರಕ ಸೌಲಭ್ಯ ಮತ್ತು ಸಕ್ರಿಯಗೊಳಿಸುವಿಕೆ, ಅದರ ನಗದು ಮೀಸಲು ಅನುಪಾತ ಮತ್ತು ಚಿನ್ನದ ವಿಷಯದಲ್ಲಿ ಶಾಸನಬದ್ಧ ದ್ರವ್ಯತೆ ಅನುಪಾತದ ಅಗತ್ಯವಿದೆ ಎಂದು ಆರ್. ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ ಗ್ರಾಹಕರ ಗಮನಕ್ಕೆ : ಡಿಸೆಂಬರ್ನಲ್ಲಿ 12 ದಿನ ಬ್ಯಾಂಕ್ ಬಂದ್