ETV Bharat / business

'ಸಿಎಎ, ಕೊರಾನಾದಿಂದ ಆರ್ಥಿಕತೆ ಹತಾಶೆಯಲ್ಲಿದೆ, ಇನ್ನಾದರೂ ಎಚ್ಚೆತ್ತುಕೊಳ್ಳಿ' - ಭಾರತದ ಆರ್ಥಿಕತೆ ಮೇಲೆ ಕೋವಿಡ್ ಪ್ರಭಾವ

ಸಾಮಾಜಿಕ ಅಸಂಗತತೆ, ಆರ್ಥಿಕ ಕುಸಿತ ಮತ್ತು ಜಾಗತಿಕ ಆರೋಗ್ಯ ಸಾಂಕ್ರಾಮಿಕತೆ ಎಂಬ ತ್ರಿಮೂರ್ತಿಗಳಿಂದ ಭಾರತ ಸಂಭವನೀಯ ಅಪಾಯ ಎದುರಿಸುತ್ತಿದೆ ಎಂದು ನ್ಯಾಷನಲ್​ ಡೈಲಿ ಅಂಕಣದಲ್ಲಿ ಡಾ. ಮನಮೋಹನ್ ಸಿಂಗ್​ ಕಳವಳ ವ್ಯಕ್ತಪಡಿಸಿದ್ದಾರೆ.

Former Prime Minister Manmohan Singh
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್
author img

By

Published : Mar 6, 2020, 5:13 PM IST

ನವದೆಹಲಿ: ಆರ್ಥಿಕ ಹತಾಶೆಯಲ್ಲಿ ದೇಶವು ಬಹುಸಂಖ್ಯಾತರ ರಾಷ್ಟ್ರವಾಗಿ ಮಾರ್ಪಟ್ಟಿದೆ. ಆರ್ಥಿಕ ಬೆಳವಣಿಗೆಯ ಕುಸಿತಕ್ಕೆ ಕೊರೊನಾ ವೈರಸ್ ಕಾರಣವಾಗುವ ಸಾಧ್ಯತೆ ಇದೆ ಎಂದು ಮಾಜಿ ಪ್ರಧಾನಿ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಕಳವಳ ವ್ಯಕ್ತಪಡಿಸಿದರು.

ಇಂತಹ ಪರಿಸ್ಥಿತಿಯಲ್ಲಿ ಸಮರ್ಪಕ, ವಿವರ ಮತ್ತು ನಿಖರವಾದ ಯೋಜನೆಯನ್ನು ಒಟ್ಟುಗೂಡಿಸುವ ಅಗತ್ಯವಿದೆ. ಇದು ಅನುಷ್ಠಾನಕ್ಕೆ ಬಂದ ಬಳಿಕ ಉಪಭೋಗದ ಬೇಡಿಕೆ ಮತ್ತು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ಸಲಹೆ ನೀಡಿದರು.

'ಸಾಮಾಜಿಕ ಅಸಂಗತತೆ, ಆರ್ಥಿಕ ಕುಸಿತ ಮತ್ತು ಜಾಗತಿಕ ಆರೋಗ್ಯ ಸಾಂಕ್ರಾಮಿಕತೆಯಂತಹ ತ್ರಿಮೂರ್ತಿಗಳಿಂದ ಭಾರತ ಸಂಭವನೀಯ ಅಪಾಯ ಎದುರಿಸುತ್ತಿದೆ. ಸಾಮಾಜಿಕ ಅಶಾಂತಿ ಮತ್ತು ಆರ್ಥಿಕ ನಾಶವು ಸ್ವಯಂ-ಹಾನಿಗೊಳಗಾಗಿದ್ದರೆ ಕೊರೊನಾ ವೈರಸ್​ನಿಂದ ಆರೋಗ್ಯದ ಬಾಹ್ಯ ಆಘಾತಕ್ಕೆ ಒಳಗಾಗಿದೆ. ಈ ಅಪಾಯಗಳು ಪ್ರಬಲವಾಗಿ ಸಂಯೋಜನೆಗೊಂಡ ಭಾರತದ ಆತ್ಮವನ್ನು ಛಿದ್ರಗೊಳಿಸುವುದಲ್ಲದೆ, ವಿಶ್ವದ ಆರ್ಥಿಕ ಮತ್ತು ಪ್ರಜಾಪ್ರಭುತ್ವ ಶಕ್ತಿಯಾಗಿರುವ ನಮ್ಮ ಜಾಗತಿಕ ಸ್ಥಿತಿಯನ್ನು ಕುಂಠಿತಗೊಳಿಸಬಹುದು ಎಂದು ನಾನು ಚಿಂತಿಸುತ್ತಿದ್ದೇನೆ' ಎಂದು ನ್ಯಾಷನಲ್​ ಡೈಲಿ ಅಂಕಣದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಸಿಎಎಯಿಂದಾಗಿ ಭಾರತಕ್ಕೆ ಕಡಿಮೆ ಹೂಡಿಕೆ ಬರುವುದರಿಂದ ಉಂಟಾಗುವ ಸಾಮಾಜಿಕ ಅಶಾಂತಿಯನ್ನು ಉಲ್ಲೇಖಿಸಿದ ಸಿಂಗ್​, 'ನಮ್ಮ ಆರ್ಥಿಕತೆ ಕ್ಷೀಣಿಸುತ್ತಿರುವ ಸಮಯದಲ್ಲಿ ಇಂತಹ ಸಾಮಾಜಿಕ ಅಶಾಂತಿಯ ವಾತಾವರಣ ಆರ್ಥಿಕ ಕುಸಿತವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಭಾರತವು ಈಗಾಗಲೇ ಉತ್ತಮವಾದ ಖಾಸಗಿ ಬಂಡವಾಳವನ್ನು ಸ್ವೀಕರಿಸಿದೆ. ಇಂತಹ ಘಟನೆಗಳು ನಡೆದರೆ ಪ್ರಸ್ತುತ ಖಾಸಗಿ ವಲಯದ ಹೊಸ ಹೂಡಿಕೆಯ ಕೊರತೆ ಎದುರಿಸಲಿದೆ. ಹೂಡಿಕೆದಾರರು, ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳು ಹೊಸ ಯೋಜನೆಗಳನ್ನು ಕೈಗೊಳ್ಳಲು ಸಿದ್ಧರಿಲ್ಲ. ಅವರು ತಮ್ಮನ್ನು ತಾವು ಅಪಾಯದ ಹಸಿವಿಗೆ ಒಳಪಡಿಸಿಕೊಳ್ಳುವುದಿಲ್ಲ. ಸಾಮಾಜಿಕ ಅಡೆತಡೆಗಳು ಮತ್ತು ಕೋಮು ಉದ್ವಿಗ್ನತೆಗಳು ಅವರಲ್ಲಿನ ಭಯ ಮತ್ತು ಅಪಾಯ ನಿವಾರಣೆ ಹೆಚ್ಚಿಸುತ್ತವೆ' ಎಂದು ಎಚ್ಚರಿಸಿದ್ದಾರೆ.

ಆರ್ಥಿಕ ಅಭಿವೃದ್ಧಿಯ ತಳಪಾಯವಾದ ಸಾಮಾಜಿಕ ಸಾಮರಸ್ಯ ಸದ್ಯ ಅಪಾಯದಲ್ಲಿದೆ. ತೆರಿಗೆ ದರಗಳ ತಿರುಚುವಿಕೆ, ಸಾಂಸ್ಥಿಕ ಪ್ರೋತ್ಸಾಹ ಅಥವಾ ಯಾವುದೇ ಪ್ರಮಾಣದ ಭಾರತೀಯ ಅಥವಾ ವಿದೇಶಿ ವ್ಯವಹಾರಗಳನ್ನು ಹೂಡಿಕೆ ಮಾಡಲು ಪ್ರೇರೇಪಿಸುವುದಿಲ್ಲ. ಒಬ್ಬರಿಗೊಬ್ಬರ ನೆರೆಹೊರೆಯಲ್ಲಿ ಹಠಾತ್ ಹಿಂಸಾಚಾರ ಸಂಭವಿಸುವ ಅಪಾಯವು ಹೆಚ್ಚಾಗುತ್ತಿರುವಾಗ ವ್ಯವಹಾರಗಳು ಹಿಂದೆ ಬೀಳುತ್ತವೆ. ಹೂಡಿಕೆಯ ಕೊರತೆ ಎಂದರೆ ಉದ್ಯೋಗಗಳ ಮತ್ತು ಆದಾಯದ ಕೊರತೆ. ಅಂದರೆ ಆರ್ಥಿಕತೆಯಲ್ಲಿ ಬಳಕೆ ಮತ್ತು ಬೇಡಿಕೆಯ ಕೊರತೆ. ಬೇಡಿಕೆಯ ಕೊರತೆಯು ಖಾಸಗಿ ಹೂಡಿಕೆಗಳನ್ನು ಮತ್ತಷ್ಟು ನಿಗ್ರಹಿಸುತ್ತದೆ. ಇದು ನಮ್ಮ ಆರ್ಥಿಕತೆಯು ಸಿಲುಕಿರುವ ಕೆಟ್ಟ ಚಕ್ರವಾಗಿದೆ ಎಂದು ಎಚ್ಚರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.