ನವದೆಹಲಿ: ಕೊರೊನಾ ಸೋಂಕಿನ 2020 ಕ್ಯಾಲೆಂಡರ್ ವರ್ಷ ಮುಗಿದು ಲಸಿಕೆ ಆಶಾ ಭಾವದ 2021ರ ಕಾಲಘಟಕ್ಕೆ ಕಾಲಿಡಲು ಇನ್ನೇನು ಬೆರಳೆಣಿಕೆಯ ದಿನಗಳಷ್ಟೇ ಬಾಕಿಯಿದೆ. ಭಾರತ ಸೇರಿ ಜಾಗತಿಕ ಅರ್ಥವ್ಯವಸ್ಥೆಯನ್ನು ಕೊರೊನಾ ಸೋಂಕು ಹೊಸಕಿಹಾಕಿ ಉದ್ಯೋಗಿಗಳನ್ನು ಬೆಂಬಿಡದೆ ಕಾಡಿತ್ತು, ಕಾಡುತ್ತಿದೆ, ಕಾಡಲಿದೆ.
ಕೊರೊನಾ ವೈರಸ್ ಅನ್ನು ಮಣಿಸಲು ಪಣತೊಟ್ಟ ಘಟಾನುಘಟಿ ರಾಷ್ಟ್ರಗಳು ತಮ್ಮ- ತಮ್ಮ ಅರ್ಥ ವ್ಯವಸ್ಥೆಗೆ ಬೀಗ ಹಾಕಿ ಮೂಲೆಯಲ್ಲಿ ಇರಿಸಿದವು. ಪ್ರಧಾನಿ ಮೋದಿ ಕೂಡ ಭಾರತವನ್ನು 68 ದಿನಗಳ ಲಾಕ್ಡೌನ್ನಲ್ಲಿ ಇರಿಸಿ ಹಂತ - ಹಂತವಾಗಿ ಅನ್ಲಾಕ್ ಮಾಡಿದರು.
ಮಾರಕ ವೈರಾಣು ಪ್ರೇರಿತ ಲಾಕ್ಡೌನ್ಗೆ ಸಿಲುಕಿದ ಜಾಗತಿಕ ಆರ್ಥಿಕತೆ ವರ್ಷಪೂರ್ವತಿ ಕುಸಿತ ಕಂಡು ಬಂತು. ಕಳೆದ ವರ್ಷವೂ ಕೂಡ ನಿಧಾನಗತಿಯ ವಿತ್ತೀಯ ಹೊಡತಕ್ಕೆ ಸಿಲಿದ್ದು, ಈ ವರ್ಷ ಗಾಯದ ಮೇಲೆ ಬರೆ ಎಳೆದಂತೆ ಕೊರೊನಾ ವೈರಸ್ ಘಾಸಿಗೊಳಿಸಿತು. ಅಮೆರಿಕ, ರಷ್ಯಾ, ಚೀನಾ, ಜಪಾನ್, ಫ್ರಾನ್ಸ್, ಇಂಗ್ಲೆಂಡ್, ಭಾರತ ಸೇರಿ ಘಟಾನುಘಟಿ ರಾಷ್ಟ್ರಗಳು ಸಹ ಆರ್ಥಿಕ ಹಿಂಜರಿತದಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ.
ಜಾಗತಿಕ ಅರ್ಥವ್ಯವಸ್ಥೆ ಕುಸಿತದ ಪರಿಣಾಮ ಭಾರತದ ಜಿಡಿಪಿ ಸ್ವಾತಂತ್ರ್ಯದ ಬಳಿಕ ಮೈನಸ್ ಶೇ 23ರಷ್ಟು ಕುಸಿತ ತುತ್ತಾಯಿತು. ಕೈಗಾರಿಕಾ ಉತ್ಪಾದನೆ ಸ್ಥಗಿತಗೊಂಡು ಬೆಳವಣಿಗೆ ದರ ನೆಲಕಚ್ಚಿ, ಎಂಟು ಕೋರ್ ಸೆಕ್ಟರ್ಗಳು ಮೈನಸ್ ವೃದ್ಧಿ ತೋರಿಸಿದವು. ವಸತಿ, ಪ್ರವಾಸೋದ್ಯಮ, ಆತಿಥ್ಯ, ತಯಾರಿಕಾ, ಸಾರಿಗೆ - ಸಂಪರ್ಕ, ವಾಯುಯಾನ, ವಾಹನೋದ್ಯಮ, ಮೂಲ ಸೌಕರ್ಯ, ಸರಕು ಉತ್ಪನ್ನಗಳ ಮಾರುಕಟ್ಟೆ ಸೇರಿ ಇಡೀ ಆರ್ಥಿಕತೆಯ ಎಲ್ಲ ಕ್ಷೇತ್ರಗಳು ಕಳಾಹೀನವಾದವು. ಇಂತಹ ಸಂಕಷ್ಟದಲ್ಲಿ ಅಲ್ಪ ಭರವಸೆ ನೀಡಿದ್ದು ಕೃಷಿ ಕ್ಷೇತ್ರವೇ ಮಾತ್ರ.
ಕೇಂದ್ರದ ಜಿಎಸ್ಟಿ ನಷ್ಟ ಪರಿಹಾರ: 8ನೇ ಕಂತಿನಡಿ ರಾಜ್ಯಗಳಿಗೆ 6,000 ಕೋಟಿ ರೂ. ಬಿಡುಗಡೆ
ಕೊರೊನಾದಿಂದ ವಿಪರೀತಕ್ಕೇರಿದ ನಿರುದ್ಯೋಗ ಸೋಂಕಿಗಿಂತ ಮಹಾರೋಗವಾಯಿತು. ಈ ಮಹಾರೋಗ ಉಲ್ಬಣಿಸಿ ಅಮೆರಿಕದಂತ ದೊಡ್ಡಣ್ಣನಿಂದ ಹಿಡಿದು ಸೋಮಾಲಿಯ ತನಕ ಬೆಂಬಿಡದಂತೆ ಕಾಡಿತು. ಇದಕ್ಕೆ ಭಾರತವೂ ಹೊರತಾಗಲಿಲ್ಲ. ಲಾಕ್‌ಡೌನ್-ಪ್ರೇರಿತ ಹಿನ್ನಡೆಯ ಬಳಿಕ ಕಳೆದ ಕೆಲವು ತಿಂಗಳಲ್ಲಿ ಭಾರತದ ಉದ್ಯೋಗ ಪ್ರಮಾಣ ನವೆಂಬರ್ ಮಾಸಿಕದಲ್ಲಿ ಮತ್ತೆ ಕುಸಿದಿದೆ.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಮಾಹಿತಿ ಪ್ರಕಾರ, ನವೆಂಬರ್ನಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ ಸತತ ಎರಡನೇ ತಿಂಗಳ ಸಂಕೋಚನವಾಗಿದೆ. ಅಕ್ಟೋಬರ್ನಲ್ಲಿ ಉದ್ಯೋಗಿಗಳ ಸಂಖ್ಯೆ 0.1ರಷ್ಟು ಕಡಿಮೆಯಾಗಿದ್ದರೇ ನವೆಂಬರ್ನಲ್ಲಿನ ಕುಸಿತವು 0.9 ಪ್ರತಿಶತದಷ್ಟು ದೊಡ್ಡದಾಗಿದೆ. ನವೆಂಬರ್ ಮಾಸಿಕದಲ್ಲಿ ನಿರುದ್ಯೋಗ ಪ್ರಮಾಣ 3.5 ಮಿಲಿನ್ಗೆ ಏರಿಕೆಯಾಗಿದೆ.
ಲಾಕ್‌ಡೌನ್ ಸಮಯದಲ್ಲಿ ಕುಸಿದು ಈ ಬಳಿಕ ಕಂಡು ಬಂದ ಉದ್ಯೋಗದಲ್ಲಿ ಚೇತರಿಕೆ ಪೂರ್ಣಗೊಳ್ಳುವ ಮೊದಲೇ ಮತ್ತೆ ನಿಧಾನದತ್ತ ಮುಖಮಾಡಿದೆ ಎಂಬುದನ್ನು ಡೇಟಾ ತೋರಿಸುತ್ತಿದೆ. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಚೇತರಿಕೆ ತ್ವರಿತವಾಗಿ ನಂತರ ಹಂತಹಂತವಾಗಿ ನಿಧಾನವಾಯಿತು. ಆದರೆ, ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ವ್ಯತಿರಿಕ್ತವಾಗಿದೆ. 2020ರ ನವೆಂಬರ್ನಲ್ಲಿ ಉದ್ಯೋಗ ಪ್ರಮಾಣವು 393.6 ಮಿಲಿಯನ್ ಆಗಿತ್ತು. ವರ್ಷದ ಹಿಂದೆ ಇದ್ದಕ್ಕಿಂತ ಶೇ 2.4ರಷ್ಟು ಕಡಿಮೆಯಾಗಿದೆ.
ಕೋವಿಡ್ ನಂತರ ನಿರುದ್ಯೋಗ ದರ
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ದತ್ತಾಂಶದ ಅನ್ವಯ, ಮಾರ್ಚ್ ಅಂತ್ಯದಿಂದ ಮೇ ಕೊನೆಯ ತನ ನಿರುದ್ಯೋಗ ದರವು ಶೇ 20ಕ್ಕಿಂತ ಹೆಚ್ಚಾಗಿದೆ ಎಂದು ಸೂಚಿಸುತ್ತದೆ. ಕೋವಿಡ್ ಸಾಂಕ್ರಾಮಿಕ ರೋಗ ಹಬ್ಬುವುದನ್ನು ನಿಯಂತ್ರಿಸಲು ಲಾಕ್‌ಡೌನ್ ಘೋಷಣಯೇ ಮುಖ್ಯ ಕಾರಣ ಇದು ಹೇಳಿತ್ತು. ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಳಿಸಿ ಜನರನ್ನು ಮನೆಯಲ್ಲಿ ಇರಿಸಬೇಕಾಯಿತು. ಮೇ ನಂತರ ಅಲ್ಪ ಸುಧಾರಣೆ ಕಂಡು ನಿರುದ್ಯೋಗ ದರವು ಜೂನ್ 21ರಿಂದ ಶೇ 8.48 ರಷ್ಟಾಯಿತು. ನವೆಂಬರ್ 15 ರಂದು ಇದು ಶೇ 5.45ರಷ್ಟಾಗಿದ್ದು, 2020ರಲ್ಲಿ ಅತ್ಯಂತ ಕಡಿಮೆಯಾಗಿದೆ.
2020ರಲ್ಲಿ ಭಾರತದಲ್ಲಿನ ಉದ್ಯೋಗದ ಮೇಲೆ ಕೋವಿಡ್-19 ಪ್ರಭಾವ ವ್ಯಾಪಕವಾಗಿ ಸಣ್ಣ ವ್ಯಾಪಾರಿಗಳಿಂದ ಹಿಡಿದು ವಲಸೆ ಕಾರ್ಮಿಕರ ತನಕ ಆಕ್ರಮಿಸಿಕೊಂಡಿತು. 2020ರ ಏಪ್ರಿಲ್‌ನಲ್ಲಿ 91 ದಶಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡರು. ಲಾಕ್‌ಡೌನ್ ಬಳಿಕ ಉದ್ಯಮಿಗಳು ಮತ್ತು ಸಂಬಳ ಪಡೆಯುವ ಕಾರ್ಮಿಕರು ಸೇರಿ 119 ದಶಲಕ್ಷಕ್ಕೂ ಅಧಿಕ ಜನರ ಕೆಲಸ ಕತ್ತರಿ ಬಿತ್ತು. ಕಳೆದ ಆರ್ಥಿಕ ವರ್ಷ ಹೋಲಿಸಿದರೆ ಕೃಷಿಕ ರೈತರಿಂದ ಐದು ಪ್ರತಿಶತದಷ್ಟು ಸೇರ್ಪಡೆ ಕಂಡು ಬಂದಿದೆ.
ಕಾರ್ಮಿಕ ಭಾಗವಹಿಸುವಿಕೆ ದರದ ಮೇಲೆ ಕೋವಿಡ್-19 ಪ್ರಭಾವ: ಕೊರೊನಾ ವೈರಸ್ ಲಾಕ್‌ಡೌನ್ ಏಪ್ರಿಲ್‌ನಲ್ಲಿ ಸುಮಾರು 35 ಪ್ರತಿಶತದಷ್ಟು ಕಾರ್ಮಿಕರು ಮಾತ್ರವೇ ಭಾಗವಹಿಸಿದರು. ಆ ಸಮಯದಲ್ಲಿ ಅನೇಕರು ಉದ್ಯೋಗ ಕಳೆದುಕೊಂಡರು. ಉದ್ಯೋಗ ಭಾಗವಹಿಸುವಿಕೆಯ ಪ್ರಮಾಣ ನಿಧಾನವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಶೇ 40.6ಕ್ಕೆ ಏರಿತು.
ಭಾರತದಲ್ಲಿ ನಿರುದ್ಯೋಗ ದರದ ಮೇಲೆ ಕೋವಿಡ್-19 ಪರಿಣಾಮ:
2020ರ ಸೆಪ್ಟೆಂಬರ್‌ನಲ್ಲಿ ಭಾರತವು ನಿರುದ್ಯೋಗ ದರ ಆರು ಪ್ರತಿಶತಕ್ಕಿಂತಲೂ ಹೆಚ್ಚಾಯಿತು. ಹಿಂದಿನ ತಿಂಗಳಿಗಿಂತ ಇದು ಗಮನಾರ್ಹ ಸುಧಾರಣೆಯಾಗಿದೆ. ಒಟ್ಟು ಲಾಕ್‌ಡೌನ್ ಕಾರಣದಿಂದಾಗಿ ಭಾರತದಷ್ಟು ದೊಡ್ಡದಾದ ಆರ್ಥಿಕತೆಯ ಮೇಲೆ ಹಾನಿಕಾರಕ ಪರಿಣಾಮದ ಸನ್ನಿಹಿತ ಬಂದಿತು. 2020ರ ಮೇನಲ್ಲಿ ನಿರುದ್ಯೋಗವು ಶೇ 24ಕ್ಕೆ ಏರಿತು.