ತಿರುವನಂತಪುರಂ: ಹಣ್ಣುಗಳಿಂದ ವೈನ್ ಮತ್ತು ಕಡಿಮೆ ಆಲ್ಕೋಹಾಲ್ ಅಂಶದ ಮದ್ಯ ತಯಾರಿಸುವ ವಿಧಾನವನ್ನು ಕೇರಳ ಕೃಷಿ ವಿಶ್ವವಿದ್ಯಾನಿಲಯ ಸಲ್ಲಿಸಿದ ವರದಿಯನ್ನು ಕೇರಳ ರಾಜ್ಯ ಸರ್ಕಾರವು ಅಂಗೀಕರಿಸಿದೆ.
ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಸಚಿವ ಸಂಪುಟ ಸಮಿತಿಯು ಕೃಷಿ ವಿಶ್ವವಿದ್ಯಾನಿಲಯ ವರದಿ ಅಂಗೀಕರಿಸಿದೆ. ಈ ಉತ್ಪನ್ನಗಳನ್ನು ತಯಾರಿಸಲು ಅನುಕೂಲವಾಗುವಂತೆ ಅಬಕಾರಿ ಕಾಯ್ದೆಯಲ್ಲಿ ಸೂಕ್ತ ಬದಲಾವಣೆಗಳು ತರಲು ಸಹ ಸಮಿತಿ ನಿರ್ಧರಿಸಿದೆ.
ಕೇರಳ ಹಣ್ಣುಗಳಾದ ಜಾಕ್‌ಫ್ರೂಟ್, ಗೋಡಂಬಿ ಮತ್ತು ಬಾಳೆಹಣ್ಣುಗಳಿಂದ ವೈನ್ ಹಾಗೂ ಕಡಿಮೆ ಆಲ್ಕೋಹಾಲ್ ಅಂಶದ ಮದ್ಯವನ್ನು ಈಗ ತಯಾರಿಸಲಾಗುವುದು. ಈ ಉತ್ಪನ್ನಗಳನ್ನು ತಯಾರಿಸಲು ಸಮರ್ಥವಾಗಿರುವ ಘಟಕಗಳಿಗೆ ಉತ್ಪಾದನಾ ಪರವಾನಗಿ ನೀಡಲು ಅಬಕಾರಿ ಕಾಯ್ದೆಯಲ್ಲಿ ಸೂಕ್ತ ಬದಲಾವಣೆಗಳು ತರಲು ಸಂಪುಟ ಸಮಿತಿ ನಿರ್ಧರಿಸಿದೆ.