ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಸ್ಮರಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 2020-21ನೇ ಸಾಲಿನ ಆಯವ್ಯಯ ಮಂಡನೆ ಆರಂಭಿಸಿದರು.
ಬಜೆಟ್ ಮಂಡನೆಯ ಪ್ರತಿಯನ್ನು ಭಾಷಣಕ್ಕೂ ಮುನ್ನ ನೀಡುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದವು. ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ 'ಬಜೆಟ್ ಪ್ರತಿ ಮೊದಲೇ ಕೊಡಲು ಸಾಧ್ಯವಿಲ್ಲ. ಕಳೆದ ವರ್ಷ ಬಜೆಟ್ ಮಂಡಿಸುವಾಗ ಈ ರೀತಿ ಮಾಡಿದ ಉದಾಹರಣೆ ಇದೆ. ಲೋಕಸಭೆಯಲ್ಲೂ ಹೀಗೆ ಮಾಡಲಾಗಿದೆ' ಎಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಸಿಎಂ ಯಡಿಯೂರಪ್ಪ, ಬಜೆಟ್ ಪ್ರತಿಗಳ ವಿತರಣೆಗೆ ಮನವಿಮ ಮಾಡಿ ಮಾಧ್ಯಮ ಪ್ರತಿನಿಧಿಗಳಿಗೂ ತಕ್ಷಣ ವಿತರಿಸುವುದಾಗಿ ಹೇಳಿದರು.
ಪ್ರಧಾನಿ ಮಂತ್ರಿ ಕಿಸಾನ್ ಸಮೃದ್ಧಿ ಯೋಜನೆಯ ರೈತರಿಗೆ ವಾರ್ಷಿಕ 6,000 ರೂ. ನೀಡುವುದರ ಜೊತೆಗೆ ರಾಜ್ಯ ಸರ್ಕಾರದಿಂದ 4 ಸಾವಿರ ರೂ. ನೀಡಲಾಗುವುದು ಎಂದು ಬಿಎಸ್ವೈ ಘೋಷಿಸಿದರು.