ನವದೆಹಲಿ: ಜಾಗತಿಕ ವಿಮಾನಯಾನ ಉದ್ಯಮವು ನಾಗಲೋಟದಲ್ಲಿ ಓಡುತ್ತಿದ್ದರೇ ಇತ್ತ ಭಾರತೀಯ ವಿಮಾನಯಾನ ಕ್ಷೇತ್ರವು 4 ವರ್ಷದಿಂದ ಹಣಕಾಸು ಸ್ಥಿರತೆ ಕಾಯ್ದುಕೊಳ್ಳಲು ಪರದಾಟ ನಡೆಸುತ್ತಾ ತೆವಳುತ್ತಾ ಸಾಗುತ್ತಿದೆ.
2019ರಲ್ಲಿ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಜೆಟ್ ಏರ್ವೇಸ್ ಕಾರ್ಯಾಚರಣೆಯಿಂದ ಭಾಗಶಃ ಸ್ಥಗಿತಗೊಂಡಿದೆ. ಇನ್ನೊಂದು ಕಡೆ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ, ತೀವ್ರವಾದ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು ಖಾಸಗಿ ಒಡತನಕ್ಕೆ ಸೇರ್ಪಡೆಗೊಳ್ಳಲು ದಿನಗಣನೆ ಎಣಿಸುತ್ತಿದೆ. ಈ ವರ್ಷ ವಿಮಾನಯಾನ ಉದ್ಯಮಕ್ಕೆ ಹೇಳಿಕೊಳ್ಳವಂತಹ ಬೆಳವಣಿಗೆಯನ್ನು ಕಾಣಲಿಲ್ಲ. ಆದರೆ, ಬರುವ ವರ್ಷದಲ್ಲಿ ಉದ್ಯಮ ಚೇತರಿಸಿಕೊಳ್ಳಲಿದೆ ಎಂಬುದು ಉದ್ಯಮಿಗಳ ಆಶಯ.
ಶ್ರೀಮಂತ ಸಾರಿಗೆಯಾಗಿದ್ದ ವಿಮಾನಯಾನ ಸೇವೆಯು ಟೈರ್- II ಮತ್ತು ಟೈ -III ನಗರಗಳಿಗೂ ವಿಸ್ತರಿಸಿ ಸಾಮಾನ್ಯ ಜನರು ಪ್ರಯಾಣಿಸುವಂತೆ ಮಾಡಿಲಾಯಿತು. ತತ್ಪರಿಣಾಮ ಜನವರಿ-ನವೆಂಬರ್ ಅವಧಿಯಲ್ಲಿ ದೇಶೀಯ ವಾಯು ಸಂಚಾರವು ಶೇ 3.68 ರಷ್ಟು ಏರಿಕೆಯಾಗಿದೆ. ಆದರೆ, ಸ್ಥೂಲ ಸೂಚಕಗಳು ಋಣಾತ್ಮಕವಾಗಿ ಉಳಿದುಕೊಂಡವು. 2024ರ ವೇಳೆಗೆ ಜಾಗತಿಕವಾಗಿ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗುವ ಹಾದಿಯಲ್ಲಿದೆ ಎಂಬ ವರದಿ ಮಾತ್ರ ಉದ್ಯಮಕ್ಕೆ ಆಶಾದಾಯಕವಾಗಿದೆ.
ಪ್ರ್ಯಾಟ್ ಮತ್ತು ವಿಟ್ನಿ (ಪಿಡಬ್ಲ್ಯೂ) ಚಾಲಿತ ಎ -320 ನೇಯೊ ಮತ್ತು ಬಿ 737 ಮ್ಯಾಕ್ಸ್ ವಿಮಾನವನ್ನು ನಿರಂತರವಾಗಿ ಹಾರಾಟ ನಿಲ್ಲಿಸಿದ್ದು ಉದ್ಯಮಕ್ಕೆ ತೊಂದರೆಯಾಯಿತು. 2019ರ ವರ್ಷದಲ್ಲಿ ಪಿಡಬ್ಲ್ಯೂ ಎಂಜಿನ್ ಅಳವಡಿಸಿದ ಎ 320 ನಿಯೋಸ್‌ನಲ್ಲಿನ ತಾಂತ್ರಿಕ ದೋಷದಿಂದ ಇಂಡಿಗೊ ಮತ್ತು ಗೋ -ಏರ್‌ಗೆ ತೀವ್ರ ಪೆಟ್ಟು ಬಿತ್ತು. ಬಿ 737 ಮ್ಯಾಕ್ಸ್ ಸ್ಥಗಿತದಿಂದ ಕಡಿಮೆ ವೆಚ್ಚದ ಸ್ಪೈಸ್‌ಜೆಟ್ ಭಾರಿ ನಷ್ಟ ಅನುಭವಿಸಿತು ಎಂದು ವಿಮಾನಯಾನ ತಜ್ಞರು ಹೇಳಿದರು.
2019ರ ವರ್ಷದ ಹಿನ್ನಡೆ ಮುಕ್ತಾಯವಾಯಿತು ಎಂದು ಸಂತೋಷ ಪಡಬಹುದು. 2020ರಲ್ಲಿ ಉತ್ತಮ ಸಮಯ ಒದಗಿ ಬರಲಿದೆ ಎಂಬ ಆಸೆಯ ಇದೆ. ಆದರೆ, 2019ರ ಆ ಒಂದು ಅಷ್ಟು ಒಳ್ಳೆಯದಾಗಿ ಇರಲಿಲ್ಲ ಎಂದು ಕ್ಲಬ್ ಒನ್ ಏರ್ ಸಿಇಒ ರಾಜನ್ ಮೆಹ್ರಾ ಹೇಳಿದ್ದಾರೆ.
2020ರಲ್ಲಿ ಎಟಿಎಫ್ ಬೆಲೆಯು ಉದ್ಯಮದ ಗೇಮ್ ಚೇಂಜರ್ ಆಗಿಲಿದೆ. ಎಟಿಎಫ್ ಮೇಲೆ ವಿಧಿಸಲಾಗುತ್ತಿರುವ ಹೆಚ್ಚಿನ ತೆರಿಗೆ ದರ ಕಡಿತಗೊಳಿಸಲು ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಬೇಕು. ಇದರಿಂದಾಗಿ ನಿರ್ವಾಹಕರಿಗೆ ಒಂದಿಷ್ಟು ಆರ್ಥಿಕ ಹೊರೆ ತಗ್ಗಲಿದೆ ಎಂದು ಬರ್ಡ್ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಅಂಕುರ್ ಭಾಟಿಯಾ ಹೇಳಿದ್ದಾರೆ.
ಇದು ಉತ್ತಮ ವ್ಯಾಪಾರ ವಾತಾವರಣ ಸೃಷ್ಟಿಸಲು ಹಾಗೂ ವೆಚ್ಚ ಕಡಿತದ ಲಾಭವನ್ನು ಗ್ರಾಹಕರಿಗೆ ರವಾನಿಸಲು ಸಹಾಯಕ್ಕೆ ಬರಲಿದೆ ಎಂದರು.