ETV Bharat / business

ಸ್ವಾತಂತ್ರ್ಯ ಭಾರತದ ಘೋರ ಆರ್ಥಿಕ ಹಿಂಜರಿತ ಎದುರಿಸಲು ಇವತ್ತಿನಿಂದ ಸಿದ್ಧರಾಗಿ..! - ವಾಣಿಜ್ಯ ಸುದ್ದಿ

ಸ್ವಾತಂತ್ರ್ಯೋತ್ತರ ಭಾರತದ ನಾಲ್ಕನೇ ಆರ್ಥಿಕ ಹಿಂಜರಿತವು ಉದಾರೀಕರಣದ ಬಳಿಕದ ಅವಧಿಯಲ್ಲಿ ತೀರಾ ಕೆಟ್ಟದ್ದಾಗಿರಲಿದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ತಿಳಿಸಿದೆ.

Economy
ಆರ್ಥಿಕತೆ
author img

By

Published : May 27, 2020, 4:37 PM IST

ನವದೆಹಲಿ: ಭಾರತದಲ್ಲಿ 2008ರಲ್ಲಿ ಕೊನೆಯ ಬಾರಿ ಆರ್ಥಿಕ ಹಿಂಜರಿತ ಸಂಭವಿಸಿತ್ತು. ದಶಕದ ಬಳಿಕ ಈಗ ಮತ್ತೊಂದು ತೀವ್ರ ಬಿಕ್ಕಟ್ಟು ತಲೆದೋರಿದೆ. ಕೇವಲ ಭಾರತಕ್ಕೆ ಮಾತ್ರವಲ್ಲದೇ ಇಡೀ ವಿಶ್ವದ ಮೇಲೆ ಪರಿಣಾಮ ಬೀರಿದೆ. ಈ ಸಲದ ಮಹಾ ಬಿಕ್ಕಟ್ಟು ಈ ಹಿಂದಿಗಿಂತಲೂ ಗಂಭೀರ ಮಟ್ಟದಲ್ಲಿದೆ ಎನ್ನುತ್ತಾರೆ ಆರ್ಥಿಕ ತಜ್ಞರು.

ಸ್ವಾತಂತ್ರ್ಯೋತ್ತರ ಭಾರತದ ನಾಲ್ಕನೇ ಆರ್ಥಿಕ ಹಿಂಜರಿತವು ಉದಾರೀಕರಣದ ಬಳಿಕದ ಅವಧಿಯಲ್ಲಿ ತೀರಾ ಕೆಟ್ಟದ್ದಾಗಿರಲಿದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ತಿಳಿಸಿದೆ.

ಕೊರೊನಾ ಮಹಾಮಾರಿ ಭಾರತದ ಹಣಕಾಸು ಸ್ಥಿತಿಯ ಮೇಲೆ ದುಷ್ಪರಿಣಾಮ ಬೀರಲಿದೆ. ಸ್ವಾತಂತ್ರ್ಯಾನಂತರ ದೇಶ ಅತಿ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ. 2008-09ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಬಂದಿದ್ದರೂ ಭಾರತ ದೃಢವಾಗಿತ್ತು. ಹಣಕಾಸು ವ್ಯವಸ್ಥೆಗೆ ಅಷ್ಟೇನೂ ತೊಂದರೆಯಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್​ನ ಮಾಜಿ ಗವರ್ನರ್​ ರಘುರಾಮ್​ ರಾಜನ್​ ಅವರು ಲಿಂಕ್ಡ್​ ಇನ್​ನ ನೋಟ್​ನಲ್ಲಿ ಈ ಹಿಂದೆ ಎಚ್ಚರಿಕೆ ನೀಡಿದ್ದರು.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 2021ರ ಆರ್ಥಿಕ ವರ್ಷದಲ್ಲಿ (ವರ್ಷ) ಭಾರತೀಯ ಆರ್ಥಿಕತೆಯು ಶೇ 5ರಷ್ಟು ಕುಗ್ಗುತ್ತಿದೆ. ಮೊದಲ ತ್ರೈಮಾಸಿಕವು ಶೇ 25ರಷ್ಟು ಸಂಕೋಚನ ಅನುಭವಿಸುತ್ತದೆ ಎಂದು ಕ್ರಿಸ್ಸಿಲ್ ಅಂದಾಜಿಸಿದೆ.

ನೈಜ ಪರಿಭಾಷೆಯಲ್ಲಿ ಹೇಳುವುದಾದರೇ ಒಟ್ಟು ದೇಶಿಯ ಉತ್ಪನ್ನದಲ್ಲಿ (ಜಿಡಿಪಿ) ಶೇ 10ರಷ್ಟು ಶಾಶ್ವತವಾಗಿ ನಷ್ಟವಾಗಬಹುದು. ಸಾಂಕ್ರಾಮಿಕ ರೋಗದ ನಂತರದಲ್ಲಿ ಕಂಡುಬರುವ ಬೆಳವಣಿಗೆಯ ದರಗಳು ಮುಂದಿನ ಮೂರು ಹಣಕಾಸಿನ ವರ್ಷಗಳಲ್ಲಿ ಕಂಡುಬರುವುದು ಅಸಂಭವ ಎಂದು ಕ್ರಿಸ್ಸಿಲ್ ಹೇಳಿದೆ.

ಕ್ರಿಸಿಲ್ ತನ್ನ ಈ ಹಿಂದಿನ ಮುನ್ಸೂಚನೆ ದರವನ್ನು ಕೆಳಕ್ಕೆ ಪರಿಷ್ಕರಿಸಿದೆ. ಈ ಮೊದಲು ಏಪ್ರಿಲ್ 28ರಂದು, ನಾವು ಭವಿಷ್ಯದ ಶೇ 3.5ರಷ್ಟು ಬೆಳವಣಿಗೆಯನ್ನು 1.8 ಪ್ರತಿಶತದಷ್ಟು ಕಡಿತಗೊಳಿಸಿದ್ದೇವೆ. ಕೃಷಿಯೇತರ ಜಿಡಿಪಿ ಶೇ 6ರಷ್ಟು ಸಂಕುಚಿತಗೊಳ್ಳುತ್ತದೆ. ಕೃಷಿಯು ಶೇ 2.5ರಷ್ಟು ಬೆಳೆಯುವ ಮೂಲಕ ಹೊಡೆತವನ್ನು ತಗ್ಗಿಸಬಹುದು ಎಂದಿದೆ.

ಕಳೆದ 69 ವರ್ಷಗಳಲ್ಲಿ ಹಣಕಾಸಿನ ವರ್ಷ 1958, 1966 ಮತ್ತು 1980ರಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಭಾರತವು ಕೇವಲ ಮೂರು ಬಾರಿ ಆರ್ಥಿಕ ಹಿಂಜರಿತವನ್ನು ಕಂಡಿದೆ. ಪ್ರತಿ ಬಾರಿಯೂ ಮಾನ್ಸೂನ್ ಋತುವಿನ ವೇಳೆ ಕೃಷಿಯ ಮೇಲೆ ಅಪ್ಪಳಿಸಿ, ಬಳಿಕ ಆರ್ಥಿಕತೆಯ ಮೇಲೆ ಗಣನೀಯಗಾಗಿ ಪ್ರಭಾವಿಸಿದೆ.

ಇಂದು ನಾವು ನೋಡುತ್ತಿರುವ ಆರ್ಥಿಕ ಹಿಂಜರಿತವು ವಿಭಿನ್ನವಾಗಿದೆ. ಮೊದಲನೇಯದ್ದು; ಸಾಮಾನ್ಯ ಮಾನ್ಸೂನ್ ಹತ್ತಿರ ಇರುವ ವೇಳೆ ಕೃಷಿಯ ಮೇಲೆ ಮೃದುವಾದ ಹೊಡೆತ ನೀಡಬಹುದು. ಎರಡನೇಯದ್ದು; ಕೋವಿಡ್​ 19 ಪ್ರೇರಿತ ಲಾಕ್‌ಡೌನ್‌ಗಳು ಹೆಚ್ಚಾಗಿ ಕೃಷಿಯೇತರ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿವೆ. ಮೂರನೇಯದ್ದು; ಜಾಗತಿಕ ಅಡ್ಡಿಗಳು ಭಾರತವು ರಫ್ತು ವಲಯವನ್ನು ಮುಂಚೂಣಿಗೆ ತರುವ ಅವಕಾಶಗಳನ್ನು ಒದಗಿಸಿದೆ.

2021ರ ಆರ್ಥಿಕ ವರ್ಷಕ್ಕೆ (ಬೇಸ್‌ಲೈನ್) ಶೇ 1.8ರಷ್ಟು ಜಿಡಿಪಿ ಬೆಳವಣಿಗೆ ಆಗಲಿದ್ದು, ಏಪ್ರಿಲ್ ಅಂತ್ಯದ ಮುನ್ಸೂಚನೆಯ ಬಳಿಕ ಆರ್ಥಿಕ ಪರಿಸ್ಥಿತಿಗಳು ತೀವ್ರವಾಗಿ ಕುಸಿದಿವೆ ಎಂದು ಕ್ರಿಸಿಲ್ ಅಂದಾಜಿಸಿದೆ.

ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕವು ಹೆಚ್ಚು ಪರಿಣಾಮ ಅನುಭವಿಸಲಿದೆ. ಕೋವಿಡ್ -19 ಪೀಡಿತರ ರೇಖೆ ಭಾರತದಲ್ಲಿ ಇನ್ನೂ ಚಪ್ಪಟೆ (ಇಳಿಕೆ) ಆಗಿರದ ಕಾರಣ ಜೂನ್ ವೇಳೆ ವಿರಾಮ ಪಡೆಯುವ ಸಾಧ್ಯತೆಯಿಲ್ಲ.

ಮೊದಲ ತ್ರೈಮಾಸಿಕವು ಕೃಷಿಯೇತರ ಆರ್ಥಿಕತೆ ಮಾತ್ರವಲ್ಲ ಶಿಕ್ಷಣ, ಪ್ರಯಾಣ ಮತ್ತು ಪ್ರವಾಸೋದ್ಯಮದಂತಹ ಸೇವೆ ಕ್ಷೇತ್ರಗಳು ಮುಂಬರುವ ತ್ರೈಮಾಸಿಕಗಳಲ್ಲಿ ದೊಡ್ಡ ಹೊಡೆತಕ್ಕೆ ಇಡಾಗಲಿವೆ. ಉದ್ಯೋಗ ಮತ್ತು ಆದಾಯದಲ್ಲಿ ಸಾಕಷ್ಟು ನಷ್ಟವನ್ನು ಕಾಣಲಿವೆ ಎಂದು ಕ್ರಿಸ್ಸಿಲ್ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.