ನವದೆಹಲಿ : ವ್ಯಾಕ್ಸಿನೇಷನ್ ನಿರ್ಣಾಯಕ ಹಂತ ತಲುಪಿದ ನಂತರ ಭಾರತದ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಜಾಗತಿಕ ಚೇತರಿಕೆ ಮತ್ತು ಸುಲಲಿತ ಆರ್ಥಿಕ ಸ್ಥಿತಿಗಳು ಚಟುವಟಿಕೆಗಳನ್ನು ಹೆಚ್ಚಿಸುತ್ತವೆ ಎಂದು ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸದಸ್ಯೆ ಆಶಿಮಾ ಗೋಯಲ್ ಹೇಳಿದ್ದಾರೆ.
ಭಾರತವು ಭಯಂಕರವಾದ ಎರಡನೇ ಕೋವಿಡ್ ಅಲೆಯೊಂದುಗೆ ಹೋರಾಡುತ್ತಿರುವಾಗ, ಲಾಕ್‌ಡೌನ್‌ಗಳಿಂದಾಗಿ ಆರ್ಥಿಕತೆಗೆ ಆಗುವ ಹಾನಿ ತೀರಾ ಕಡಿಮೆ. ಪ್ರಸಕ್ತ ಹಣಕಾಸಿನ ಮೊದಲ ತ್ರೈಮಾಸಿಕವನ್ನು ಮೀರಿ ವಿಸ್ತರಿಸುವ ಸಾಧ್ಯತೆಯಿಲ್ಲ ಎಂದರು.
ಭಾರತವು ಲಸಿಕೆ ಉತ್ಪಾದನೆಯ ಕೇಂದ್ರವಾಗಬಲ್ಲ ಸಾಮರ್ಥ್ಯ ಹೊಂದಿದೆ. ಶೀಘ್ರದಲ್ಲೇ ಅದನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ವ್ಯಾಕ್ಸಿನೇಷನ್ ನಿರ್ಣಾಯಕ ಮಟ್ಟ ತಲುಪಿದ ನಂತರ, ಆರ್ಥಿಕತೆಯು ಬೇಡಿಕೆ, ಜಾಗತಿಕ ಚೇತರಿಕೆ ಮತ್ತು ಸುಲಭವಾದ ಆರ್ಥಿಕ ಪರಿಸ್ಥಿತಿಗಳೊಂದಿಗೆ ಉತ್ತಮ ಸ್ಥಾನದಲ್ಲಿ ಇರಲಿದೆ ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಸೋಂಕಿಗೆ ಬ್ಯಾಂಕಿಂಗ್ ಕ್ಷೇತ್ರದ 1,200 ನೌಕರರ ಸಾವು
ಖ್ಯಾತ ಅರ್ಥಶಾಸ್ತ್ರಜ್ಞರು, ಈಗಿನ ಸ್ಥಳೀಯ ಅನ್‌ಲಾಕ್‌ಗಳು ವಕ್ರತೆಯನ್ನು ಹಿಮ್ಮುಖವಾಗಿ ಬಾಗಿಸಿವೆ. ಇದು ಸರಬರಾಜು ಸರಪಳಿಗಳಿಗೆ ಅಡ್ಡಿಪಡಿಸುವಿಕೆ ಕಡಿಮೆಯಾಗಿದೆ. ಇದು ಸ್ಥಳೀಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತಿದ್ದು, ಪೂರ್ಣ ಲಾಕ್‌ಡೌನ್‌ಗೆ ಹೋಗಬೇಕಾಗಿಲ್ಲ ಎಂದಿದ್ದಾರೆ.
ಇತ್ತೀಚೆಗೆ ಎಸ್ & ಪಿ ಗ್ಲೋಬಲ್ ರೇಟಿಂಗ್ಸ್, ಪ್ರಸಕ್ತ ಹಣಕಾಸು ವರ್ಷದ ಭಾರತದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇ 9.8ಕ್ಕೆ ಇಳಿಸಿದೆ. ಎರಡನೇ ಕೋವಿಡ್ ಅಲೆಯು ಆರ್ಥಿಕತೆ ಮತ್ತು ಸಾಲ ಪರಿಸ್ಥಿತಿಗಳಲ್ಲಿ ಉದಯೋನ್ಮುಖ ಚೇತರಿಕೆಗೆ ಕಾರಣವಾಗಬಹುದು ಎಂದು ಹೇಳಿದೆ. ಫಿಚ್ ಪ್ರಕಾರ, ಭಾರತದ ನೈಜ ಜಿಡಿಪಿ 2021-22ರಲ್ಲಿ (ಏಪ್ರಿಲ್ 2021ರಿಂದ ಮಾರ್ಚ್ 2022ರವರೆಗೆ) ಶೇ 9.5ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಅಂದಾಜಿಸಿದೆ.