ನವದೆಹಲಿ: ಆಗಸ್ಟ್ ಮಾಸಿಕದ ಆರ್ಥಿಕ ದತ್ತಾಂಶಗಳು ಚೇತರಿಕೆಯ ವ್ಯಾಪ್ತಿಯಲ್ಲಿ ಮಿಶ್ರವಾದ ಸಂಕೇತಗಳನ್ನು ತೋರಿಸಿದ್ದರಿಂದ ಭಾರತೀಯ ಆರ್ಥಿಕತೆಯ ಅಲ್ಪಾವಧಿಯ ದೃಷ್ಟಿಕೋನವು ಹೆಚ್ಚು ಅನಿಶ್ಚಿತವಾಗಿದೆ ಎಂಬುದು ತಿಳಿದುಬಂದಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗುರುವಾರ 'ಅನ್ಲಾಕ್ ನಂತರದ ಮೂರು ತಿಂಗಳು' ಎಂಬ ಸಂಶೋಧನಾ ವರದಿ ಬಿಡುಗಡೆ ಮಾಡಿದೆ. ದೈನಂದಿನ ಸೂಚಕಗಳು ಆರ್ಥಿಕತೆಯಲ್ಲಿ ಹೆಚ್ಚಿನ ಚಲನಶೀಲತೆ ಮತ್ತು ಚಟುವಟಿಕೆಯನ್ನು ಬಹಿರಂಗಪಡಿಸಿವೆ. ಆದರೂ ಕೆಲವು ಪ್ರಮುಖ ಸೂಚಕಗಳು ಆಗಸ್ಟ್‌ನಲ್ಲಿ ವೇಗ ಕಳೆದುಕೊಂಡಿವೆ ಎಂದು ತಿಳಿದುಬಂದಿದೆ.
ಎಸ್‌ಬಿಐ ಬಿಸಿನೆಸ್ ಅಡೆತಡೆ ಸೂಚ್ಯಂಕವು ಏಪ್ರಿಲ್‌ನಲ್ಲಿ ಏರಿಕೆಯಾದ ಬಳಿಕ ಹಿಂದಿನ ತಿಂಗಳಿಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಮೇಲ್ಮುಖವಾಗಿದೆ. ಇದು ‘ಅನ್ಲಾಕ್’ ಪ್ರಕ್ರಿಯೆ ಪ್ರಾರಂಭವಾದ ನಂತರ ಆರ್ಥಿಕ ಚಟುವಟಿಕೆಗಳಲ್ಲಿ ಪುನರಾರಂಭ ಸೂಚಿಸುತ್ತಿದೆ.
ಗೂಗಲ್ ಮೊಬಿಲಿಟಿ ಸೂಚ್ಯಂಕವು ಜುಲೈನಿಂದ ಆಗಸ್ಟ್‌ನಲ್ಲಿ ಎಲ್ಲಾ ವಿಭಾಗಗಳಲ್ಲಿ ಸುಧಾರಣೆ ಕಂಡಿದೆ. ರೈಲ್ವೆ ಸರಕುಗಳ ಆದಾಯ ತಿಂಗಳಲ್ಲಿ ಹೆಚ್ಚಾಗಿದೆ. ಆದರೆ ಆಟೋ ಮಾರಾಟದ ದತ್ತಾಂಶ ಒಂದು ತಿಂಗಳ ಹಿಂದಿನ ಬೆಳವಣಿಗೆ ತೋರಿಸಿದೆ.
ಡಿಜಿಟಲ್ ಪಾವತಿಗಳು ಹೆಚ್ಚಾಗಿದ್ದು, ಯುಪಿಐ ವಹಿವಾಟು ಮೌಲ್ಯ ಮತ್ತು ಪರಿಮಾಣ ಎರಡರಲ್ಲೂ ಆಗಸ್ಟ್‌ನಲ್ಲಿ ಪೂರ್ವ-ಕೋವಿಡ್ ಮಟ್ಟವನ್ನು ಮೀರಿದೆ. ಕಾರ್ಮಿಕರ ಭಾಗವಹಿಸುವಿಕೆಯ ಪ್ರಮಾಣ, ಆರ್‌ಟಿಒ (ಪ್ರಾದೇಶಿಕ ಸಾರಿಗೆ ಕಚೇರಿ) ವಹಿವಾಟು, ಸಾಪ್ತಾಹಿಕ ಆಹಾರ ಎಲ್ಲವೂ ಜುಲೈಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಕಡಿಮೆಯಾಗಿವೆ.