ನವದೆಹಲಿ:ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುತ್ತಿದ್ದಂತೆ ಮಧ್ಯಮ ಅವಧಿಯ ವಿತ್ತೀಯ ಬಲವರ್ಧನೆ ಗುರಿ ತಲುಪಲು ರಾಜ್ಯಗಳ ಅನುದಾನದಲ್ಲಿ ಕೊರತೆ ಮಾಡಿದ್ದಲ್ಲಿ ಎಲ್ಲ ರಾಜ್ಯಗಳು ಹಣಕಾಸಿನ ತೊಂದರೆಗಳನ್ನು ಎದುರಿಸಲಿವೆ ಎಂದು ರೇಟಿಂಗ್ ಏಜೆನ್ಸಿ ಮೂಡಿಸ್ ಇನ್ವೆಸ್ಟರ್ಸ್ ಸರ್ವೀಸ್ ಎಚ್ಚರಿಸಿದೆ.
ಭಾರತದ ರಾಜ್ಯಗಳ ತಮ್ಮ ಖರ್ಚು-ವೆಚ್ಚಗಳು ನೋಡಿಕೊಳ್ಳಲು ಸ್ವಂತವಾದ ಆದಾಯದ ಮೂಲಗಳನ್ನು ಹೊಂದಿಲ್ಲ. 2017ರಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಚಯದ ಬಳಿಕ ಕೇಂದ್ರ ಸರ್ಕಾರದ ಮೇಲೆ ರಾಜ್ಯಗಳ ಅವಲಂಬನೆ ಮತ್ತಷ್ಟು ಹೆಚ್ಚಳವಾಗಿದೆ ಎಂದು ಮೂಡಿಸ್‌ನ ಸಹಾಯಕ ಉಪಾಧ್ಯಕ್ಷ/ ವಿಶ್ಲೇಷಕ ಗೋರ್ಜ್ಜಿ ಜೋಸಿಫೊವ್ ಹೇಳಿದರು.
ನಿಧಾನಗತಿಯ ಬೆಳವಣಿಗೆ ಮತ್ತು ಮೂಲಸೌಕರ್ಯ ವೆಚ್ಚಗಳು ರಾಜ್ಯಮಟ್ಟದ ಕೊರತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವು ತನ್ನ ಹಣಕಾಸಿನ ಬಲವರ್ಧನೆ ಗುರಿ ಸಾಧಿಸುವ ಹಾದಿಗಳಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಲಿದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದಿದ್ದಾರೆ.
2017ರ ಜುಲೈನಲ್ಲಿನ ಜಿಎಸ್‌ಟಿ ಅನುಷ್ಠಾನವು ರಾಜ್ಯಗಳು ವಿಧಿಸುವ ಅನೇಕ ಪರೋಕ್ಷ ತೆರಿಗೆಗಳನ್ನು ಕೇಂದ್ರೀಕೃತ ಜಿಎಸ್ಟಿಯೊಂದಿಗೆ ಬದಲಾದವು. ಇದರ ಪರಿಣಾಮವಾಗಿ ರಾಜ್ಯಗಳು ಈಗ ಕೇಂದ್ರ ಸರ್ಕಾರದ ಮೇಲೆ ಹೆಚ್ಚು ಅವಲಂಬಿತವಾಗಿವೆ. ನಿರಂತರವಾದ ಖರ್ಚಿನ ಒತ್ತಡಗಳು ಮತ್ತು ಆರ್ಥಿಕ ಬೆಳವಣಿಗೆಯ ಕುಂಠಿತದಿಂದ 2020ರ ಮಾರ್ಚ್ಗೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಜಿಡಿಪಿಯ ಶೇ 3ರಷ್ಟ ರಾಜ್ಯಮಟ್ಟದ ಕೊರತೆ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರಕ್ಕೆ ಶೇ 3.7ರಷ್ಟು ಕೊರತೆ ಉಂಟಾಗಲಿದೆ ಎಂದು ನಿರೀಕ್ಷಿಸಿದೆ.