ನವದೆಹಲಿ: ಭಾರತದ ಔಷಧೀಯ ಉದ್ಯಮವು ತನ್ನ ದೇಶಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಬೇಕಾಗುವಷ್ಟು ಕೋವಿಡ್-19 ಲಸಿಕೆಗಳನ್ನು ಉತ್ಪಾದಿಸಿ ವಿತರಣೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಬಣ್ಣಿಸಿದ್ದಾರೆ.
ಭಾರತದಲ್ಲಿ ಯಥೇಚ್ಛವಾಗಿ ಬಹು ಮುಖ್ಯವಾದ ಕೆಲಸಗಳು ನಡೆದಿವೆ. ಇಲ್ಲಿನ ಔಷಧ ಉದ್ಯಮವು ಇತರ ಕಾಯಿಲೆಗಳಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಔಷಧಿ ತಯಾರಿಸಿದೆ. ಇದು ಕೊರೊನಾ ವೈರಸ್ ಲಸಿಕೆ ಶೋಧನೆಗೂ ನೆರವಾಗಲಿದೆ ಎಂದಿದ್ದಾರೆ.
ಡಿಸ್ಕವರಿ ಪ್ಲಸ್‌ನಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಳ್ಳಲಿರುವ ಕೋವಿಡ್-19: ವೈರಸ್ ವಿರುದ್ಧ ಭಾರತದ ಯುದ್ಧ ಎಂಬ ಸಾಕ್ಷ್ಯಚಿತ್ರದಲ್ಲಿ ಮಾತನಾಡಿದ ಗೇಟ್ಸ್, ಆರೋಗ್ಯದ ಬಿಕ್ಕಟ್ಟಿನಿಂದಾಗಿ ಭಾರತವೂ ಒಂದು ದೊಡ್ಡ ಸವಾಲು ಎದುರಿಸುತ್ತಿದೆ. ದೊಡ್ಡ ಗಾತ್ರ ಮತ್ತು ನಗರ ಪ್ರದೇಶಗಳಲ್ಲಿ ಸಾಕಷ್ಟು ಜನಸಂಖ್ಯಾ ಸಾಂದ್ರತೆ ಹೊಂದಿದೆ ಎಂದು ಹೇಳಿದ್ದಾರೆ.
ಭಾರತದ ಫಾರ್ಮಾ ಉದ್ಯಮದ ಸಾಮರ್ಥ್ಯದ ಬಗ್ಗೆ ಪ್ರತಿಕ್ರಿಯಿಸಿದ ಬಿಲ್ ಗೇಟ್ಸ್, ಭಾರತವು ಸಾಕಷ್ಟು ಸಾಮರ್ಥ್ಯ ಹೊಂದಿದೆ. ಇಡೀ ಜಗತ್ತಿಗೆ ದೊಡ್ಡ ಪೂರೈಕೆದಾರರಾಗಿರುವ ಔಷಧ ಮತ್ತು ಲಸಿಕೆ ಕಂನಿಗಳು ಇಲ್ಲಿವೆ. ಭಾರತದಲ್ಲಿ ಎಲ್ಲಕ್ಕಿಂತ ಹೆಚ್ಚು ಲಸಿಕೆಗಳನ್ನು ತಯಾರಿಸಲಾಗುತ್ತದೆ ಎಂಬುದು ಜಗತ್ತಿದೆ ತಿಳಿದಿದೆ ಎಂದರು.