ನವದೆಹಲಿ: ಹಲವು ರಾಜ್ಯಗಳಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳ ಆಗುತ್ತಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಕೊರೊನಾ ವೈರಸ್ ಲಸಿಕೆಗಳ ದೇಶೀಯ ಬೇಡಿಕೆ ಈಡೇರಿಸುವತ್ತ ಭಾರತ ಗಮನ ಹರಿಸಲಿದೆ. ಮುಂದಿನ ಕೆಲವು ತಿಂಗಳವರೆಗೆ ಲಸಿಕೆಗಳ ರಫ್ತು ವಿಸ್ತರಣೆ ಆಗುವುದಿಲ್ಲ ಎಂದು ಈ ಬಗ್ಗೆ ಬಲ್ಲ ಮೂಲಗಳು ತಿಳಿಸಿವೆ.
ಎಲ್ಲ ವಾಣಿಜ್ಯ ಒಪ್ಪಂದಮತ್ತು ರಫ್ತು ಬದ್ಧತೆಗಳನ್ನು ಗೌರವಿಸಲಾಗುವುದು. ಸಾಂಕ್ರಾಮಿಕ ರೋಗ ಎದುರಿಸಲು ಭಾರತವು ವಿಶ್ವದಾದ್ಯಂತದ ಹಲವು ದೇಶಗಳಿಗೆ ಸಹಾಯ ಮಾಡುವುದನ್ನು ಮುಂದುವರಿಸಲಿದೆ. ಇಲ್ಲಿಯವರೆಗೆ, ಭಾರತವು ಸುಮಾರು 80 ದೇಶಗಳಿಗೆ 60.4 ಮಿಲಿಯನ್ ಕೊರೊನಾ ವೈರಸ್ ಪ್ರತಿರೋಧಕ ಡೋಸ್ ಪೂರೈಸಿದೆ ಎಂದು ಹೇಳಿದರು.
ಇದನ್ನೂ ಓದಿ: ರಾಕೇಶ್ ಟಿಕಾಯತ್ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸಿ: ಎಚ್ಡಿಕೆ ಆಗ್ರಹ
ಒಟ್ಟು ಸರಬರಾಜುಗಳಲ್ಲಿ ವಾಣಿಜ್ಯ ಒಪ್ಪಂದದಡಿ ಕೋವಾಕ್ಸಿನ್ ಮೂಲಕ ಕಳುಹಿಸಲಾದ ಲಸಿಕೆ ಪ್ರಮಾಣ ಸೇರಿವೆ. ಕೋವಿಡ್-19 ಲಸಿಕೆಗಳಿಗೆ ಸಮನಾಗಿ ಪ್ರವೇಶಿಸುವ ಗುರಿ ಹೊಂದಿರುವ ಜಾಗತಿಕ ನಡೆಯಾಗಿದೆ.
ಭಾರತವು ವಿವಿಧ ದೇಶಗಳಿಗೆ ಮಾಡಿರುವ ಬದ್ಧತೆಗಳನ್ನು ಈಡೇರಿಸಲಿದೆ. ರಫ್ತು ದೇಶೀಯ ಬೇಡಿಕೆಯನ್ನು ಅವಲಂಬಿಸಿರುತ್ತದೆ. ಮುಂದಿನ ಕೆಲವು ತಿಂಗಳವರೆಗೆ ರಫ್ತು ವಿಸ್ತರಣೆ ಇರುವುದಿಲ್ಲ. ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ನಾವು ಗಮನ ಹರಿಸುತ್ತಿರುವುದರಿಂದ ಸುಮಾರು 2-3 ತಿಂಗಳ ನಂತರ ಪರಿಸ್ಥಿತಿ ಪರಿಶೀಲಿಸಲಾಗುವುದು ಎಂದು ಹೇಳಿದರು.