ದೇಶವು ಅತ್ಯಂತ ಕೆಟ್ಟ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಸೆಣಸಾಡುತ್ತಾ ನಿಧಾನವಾಗಿ ವಿತ್ತೀಯ ವೇಗ ಪಡೆದುಕೊಳ್ಳುತ್ತಿದೆ. ಕೋವಿಡ್ -19 ಸೋಂಕಿತರ ಪ್ರಮಾಣ ಇಳಿಕೆ ಮತ್ತು ದೇಶಾದ್ಯಂತ ಲಸಿಕೆ ವಿತರಣೆ ಚುರುಕು ಆರ್ಥಿಕ ಪುನರುಜ್ಜೀವನಕ್ಕೆ ಹೊಸ ಭರವಸೆಯಾಗಿ ಕಾಣುತ್ತಿದೆ.
ವಾಸ್ತವದಲ್ಲಿಯೂ ಆರ್ಥಿಕ ಬೆಳವಣಿಗೆಯ ಕೆಲವು ಸೂಚಕಗಳ ಅಂಕಿ-ಅಂಶಗಳು ಗೋಚರಿಸುತ್ತಿವೆ. ಉದಾಹರಣೆ: 2020ರ ಡಿಸೆಂಬರ್‌ನಲ್ಲಿ ಉತ್ಪಾದನಾ ಚಟುವಟಿಕೆಯು ಬಲಗೊಳ್ಳುತ್ತಲಿದೆ. ದಾಸ್ತಾನು ಮರು ಪುನರ್ ನಿರ್ಮಾಣದ ಪ್ರಯತ್ನಗಳ ಮಧ್ಯೆ ವ್ಯವಹಾರಗಳು ಉತ್ಪಾದನೆ ಹೆಚ್ಚಿಸಿದವು. ಉತ್ಪಾದನಾ ಖರೀದಿ ವ್ಯವಸ್ಥಾಪಕ ಸೂಚ್ಯಂಕವು ಶೇ 56.4ರಷ್ಟಿದ್ದು, ನವೆಂಬರ್‌ನ ಶೇ 56.3ಗಿಂತ ತುಸು ಹೆಚ್ಚಾಗಿದೆ.
ಆರ್ಥಿಕತೆಯ ಬೇಡಿಕೆಯ ಪ್ರಮುಖ ಸೂಚಕಗಳಲ್ಲಿ ಒಂದಾದ ಪ್ರಯಾಣಿಕ ವಾಹನಗಳ ಮಾರಾಟವು 2020ರ ಡಿಸೆಂಬರ್‌ನಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 14 ಪ್ರತಿಶತದಷ್ಟು ಹೆಚ್ಚಾಗಿದೆ.
2021ರ ಜನವರಿ 21ರಂದು ಮೊದಲ ಬಾರಿಗೆ ಸೆನ್ಸೆಕ್ಸ್ ತನ್ನ ಸಾರ್ವಕಾಲಿಕ ಗರಿಷ್ಠ 50,000 ಅಂಕಗಳ ಗಡಿ ದಾಟಿದ್ದು, ಮಾರುಕಟ್ಟೆಗಳು ಪ್ರವೃತ್ತಿಗೆ ಸಾಕ್ಷಿಯಾಯಿತು. 2020ರ ಏಪ್ರಿಲ್ ಮಟ್ಟಕ್ಕೆ ಹೋಲಿಸಿದರೆ ಇದು ಸುಮಾರು 70 ಪ್ರತಿಶತದಷ್ಟು ಹೆಚ್ಚಾಗಿದೆ. ರಿಸರ್ವ್ ಬ್ಯಾಂಕ್ ತನ್ನ ಇತ್ತೀಚಿನ ಮಾಸಿಕ ಬುಲೆಟಿನ್ನಲ್ಲಿ ಭಾರತೀಯ ಆರ್ಥಿಕತೆಯ ಬಗ್ಗೆ ಸಕಾರಾತ್ಮಕ ಭರವಸೆ ವ್ಯಕ್ತಪಡಿಸಿ, ‘ವಿ’ ಆಕಾರದ ಚೇತರಿಕೆಯತ್ತ ಸಾಗುತ್ತಿದೆ ಎಂದಿದೆ.
ಮೇಲೆ ಸೂಚಿತ ಕಾರ್ಯಕ್ಷಮತೆ ಮತ್ತು ಮಾರುಕಟ್ಟೆಗಳ ಪ್ರತಿಕ್ರಿಯೆ ಹೊರತಾಗಿಯೂ 2020ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ 23.9ರಷ್ಟು ಕುಸಿತ ಕಂಡಿದೆ. ಇದು ಸ್ವಾತಂತ್ರ್ಯ ಭಾರತದ ಅತ್ಯಂತ ಕಳಪೆ ಆರ್ಥಿಕ ಸಾಧನೆಯಾಗಿದೆ.
ಆರ್ಥಿಕತೆ ಕಾರ್ಯಕ್ಷಮತೆ ತೋರಿಸುವ ಯಾವುದೇ ಸಕಾರಾತ್ಮಕ ಸುದ್ದಿಗಳು ಸ್ವಾಗತಾರ್ಹ. ಬೆಳವಣಿಗೆಯನ್ನು ಮುಂಚೂಣಿಗೆ ತರಲು ನಾವು ಪ್ರಾರಂಭಿಸಿದ ಪ್ರಗತಿಯನ್ನು ಹದಗೆಡಿಸುವಂತಹ ಶಕ್ತಿಗಳ ವಿರುದ್ಧದ ಹೋರಾಟವನ್ನು ನೀತಿ ನಿರೂಪಕರು ಸಡಿಲಗೊಳಸಬಾರದು. ಒಂದೆರಡು ದಿನಗಳಲ್ಲಿ ಹಣಕಾಸು ಸಚಿವರು ತಮ್ಮ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಗುಪ್ತಗಾಮಿನಿಯಂತಿರುವ ಆರ್ಥಿಕ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವ ಸಮಯ ಇದಾಗಿದೆ. ಇದಕ್ಕೆ ಆದ್ಯತೆಯ ಆಧಾರದ ಮೇಲೆ ಪರಿಹಾರ ಕಂಡುಕೊಳ್ಳಬೇಕಿದೆ.
ಸವಾಲುಗಳು ಇನ್ನೂ ಜೀವಂತ:
ಮೊದಲ ಮತ್ತು ಪ್ರಮುಖ ಸವಾಲು ಕೋವಿಡ್ -19 ಸೋಂಕು ರಾಷ್ಟ್ರವನ್ನು ಆವರಿಸಿದ ನಂತರ ಆದಾಯದ ಅಸಮಾನತೆಗಳು ಗಾಢವಾಗಬಹುದು ಮತ್ತು ವಿಸ್ತರಿಸಬಹುದು. ಸಾಂಕ್ರಾಮಿಕ ಮತ್ತು ಆದಾಯದ ಪರಿಣಾಮಗಳನ್ನು ನಿಭಾಯಿಸುವ ಸಾಮರ್ಥ್ಯವು ಸಮಾಜದಲ್ಲಿ ನಾನಾ ವರ್ಗಗಳ ಸಮುದಾಯದ ಜನರಲ್ಲಿ ಏಕಮುಖವಾಗಿ ಇರುವುದಿಲ್ಲ.
ಕಾರ್ಮಿಕ ವರ್ಗದವರು ತಮ್ಮ ಉದ್ಯೋಗ ಕಳೆದುಕೊಂಡು ಉಳಿತಾಯ ಪ್ರಮಾಣ ಕ್ಷೀಣಿಸುತ್ತಿದ್ದರೆ, ಅದೇ ಸಮಯದಲ್ಲಿ ಪ್ರವರ್ಧಮಾನಕ್ಕೆ ಬಂದ ಮತ್ತೊಂದು ವರ್ಗವಿದೆ. ಆಕ್ಸ್‌ಫ್ಯಾಮ್‌ನ ವರದಿಯಿಂದ ಇದು ಸ್ಪಷ್ಟವಾಗಿದೆ. ಕಳೆದ 10 ತಿಂಗಳಲ್ಲಿ ಭಾರತೀಯ ಬಿಲಿಯನೇರ್‌ಗಳ ಸಂಪತ್ತು 35 ಪ್ರತಿಶತದಷ್ಟು ಹೆಚ್ಚಾಗಿದೆ. ಈ ವರದಿಯ ಪ್ರಕಾರ, ಈ ಅವಧಿಯಲ್ಲಿ ಅಗ್ರ 100 ಶತಕೋಟ್ಯಧಿಪತಿಗಳ ಸಂಪತ್ತಿನ ಹೆಚ್ಚಳವು ಎಂಜಿಎನ್‌ಆರ್‌ಇಜಿಎ ಯೋಜನೆ ಹತ್ತು ವರ್ಷಗಳವರೆಗೆ ನಡೆಸಿಕೊಂಡು ಹೋಗಬಹುದು.
ಮತ್ತೊಂದೆಡೆ ಕಾರ್ಪೊರೇಟ್‌ಗಳ ಸಂಪತ್ತಿನ ಹೆಚ್ಚಳದಂತೆ ಉದ್ಯೋಗ ಭವಿಷ್ಯದಲ್ಲಿ ಅದೇ ರೀತಿಯಲ್ಲಿ ಸುಧಾರಣೆ ಕಾಣುತ್ತಿಲ್ಲ. ಇದಕ್ಕೆ ಕಾರಣ, ಹೊಸ ನೇಮಕಾತಿಗಳು ವೇಗ ಪಡೆದುಕೊಳ್ಳುತ್ತಿಲ್ಲ. ಅನೇಕ ಕ್ಷೇತ್ರಗಳಲ್ಲಿ ಅಸ್ತಿತ್ವದಲ್ಲಿರುವ ಉದ್ಯೋಗಿಗಳು ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಒಟ್ಟಾರೆ ಬೇಡಿಕೆಯ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಆರ್ಥಿಕ ಬೆಳವಣಿಗೆ ಸಾಧಿಸಲು ಮತ್ತು ಅದನ್ನು ಉಳಿಸಿಕೊಳ್ಳಲು ಹಾನಿಕಾರಕವಾಗಿದೆ.
ಮತ್ತೊಂದು ವಿಷಯವೆಂದರೆ 2014-15 ರಿಂದ 2018-19ರ ನಡುವೆ ಕೃಷಿ ಕ್ಷೇತ್ರದ ಕಡಿಮೆ ಬೆಳವಣಿಗೆಯ ದರದಿಂದಾಗಿ ಗ್ರಾಮೀಣ ವೇತನದಲ್ಲಿನ ನಿಶ್ಚಲತೆಯಿದೆ. ದೇಶದಲ್ಲಿ ಸುಮಾರು ಶೇ 43ರಷ್ಟು ಉದ್ಯೋಗಿಗಳಿಗೆ ವಸತಿ, ಗ್ರಾಮೀಣ ಭಾರತದಲ್ಲಿ ವೇತನದಲ್ಲಿನ ನಿಶ್ಚಲತೆಯು ಒಟ್ಟಾರೆ ಬೇಡಿಕೆಯಲ್ಲಿ ಇಳಿಕೆಗೆ ಕಾರಣವಾಗಿದೆ. ತತ್ಪರಿಣಾಮ ಕೈಗಾರಿಕಾ ವಸ್ತುಗಳ ಬೇಡಿಕೆಯ ಕುಸಿತಕ್ಕೂ ಕಾರಣವಾಯಿತು. ಇವೆಲ್ಲ ಹೆಚ್ಚಾಗಿ ನಗರ ಪ್ರದೇಶಗಳಲ್ಲಿನ ಕೈಗಾರಿಕೆಗಳಿಂದ ಉತ್ಪತ್ತಿಯಾಗುತ್ತವೆ. ನಗರ ಭಾರತದಲ್ಲಿ ಮತ್ತು ಎಂಎಸ್‌ಎಂಇಗಳಲ್ಲಿ ಉತ್ಪಾದನೆ ಮತ್ತು ವಜಾ ಪ್ರಮಾಣ ತಗ್ಗಿಸಲು ಕಾರಣವಾವಾಯಿತು. ಈ ಎಲ್ಲದರ ಪರಿಣಾಮವಾಗಿ ಆದಾಯದ ನಷ್ಟ ಸಂಭವಿಸಿ ಬೇಡಿಕೆ ಮತ್ತಷ್ಟು ಕುಸಿದು ನಿಧಾನಗತಿಯತ್ತ ಸಾಗಿತು. ಕೊರೊನಾ ವೈರಸ್ ಈ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು.
ಇದನ್ನೂ ಓದಿ: ಕೊರೊನಾ ಕಾಲದಲ್ಲೂ ಭಾರತದಲ್ಲಿ ಆ್ಯಪಲ್ ಮೊಬೈಲ್ ಮಾರಾಟ ದ್ವಿಗುಣ
ಮೇಲಿನ ಈ ಪರಿಸ್ಥಿತಿಯನ್ನು ಅವಲೋಕಿಸಿದರೇ ಕೃಷಿ ಮತ್ತು ಎಂಎಸ್‌ಎಂಇ ವಲಯವನ್ನು ಆದ್ಯತೆಯ ಆಧಾರದ ಮೇಲೆ ಪುನರುಜ್ಜೀವನಗೊಳಿಸುವುದು ನಮ್ಮ ಮುಂದೆ ಇರುವ ತಕ್ಷಣದ ಕಾರ್ಯವಾಗಿದೆ. ದೇಶದ ಶೇ 80ರಷ್ಟು ಉದ್ಯೋಗಿಗಳಿಗೆ ಈ ವಲಯಗಳೇ ಅನ್ನ, ಆಶ್ರಯ ನೀಡುತ್ತಿವೆ.
ಮುಂದೆ ಏನು ಮಾಡಬಹುದು?
ಆದಾಯದ ಅಸಮಾನತೆಗಳ ಸಮಸ್ಯೆಯನ್ನು ಪರಿಹಾರವಾಗಿ ಹೆಚ್ಚಿನ ಉದ್ಯೋಗ ಸೃಷ್ಟಿಸಿ ಜನರ ಗಳಿಕೆ ಏರಿಕೆಮಾಡುವುದೇ ಸೂಕ್ತವಾಗಿದೆ. ನಮ್ಮ ಮುಂದಿ ಸಾಕ್ಷಿಯಾಗಿ ನಿಂತ್ತಿರುವ ನಿರುದ್ಯೋಗವು ಕೋವಿಡ್ನಿಂದ ಮಾತ್ರವಲ್ಲ ಎಂಬುದನ್ನು ಅರಿಯಬೇಕು.
ವಾಸ್ತವದಲ್ಲಿ ಇದೊಂದು ಕಠೋರ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ. ಚಕ್ರದ ಸಮಸ್ಯೆಯ ಬದಲು ಇದು ರಚನಾತ್ಮಕ ಸಮಸ್ಯೆಯಾಗಿದೆ. ಇಂತಹ ಸನ್ನಿವೇಶದಲ್ಲಿ ಅಸ್ತಿತ್ವದಲ್ಲಿರುವ ಉದ್ಯೋಗಿಗಳ ಮೇಲೆ ಉದ್ಯೋಗದಾತರಿಗೆ ವೇತನ ಸಹಾಯಧನ ನೀಡುವ ಆಯ್ಕೆ ಹಾಗೂ ಹೊಸ ನೇಮಕಾತಿಗಳನ್ನು ನಿರ್ದಿಷ್ಟ ಅವಧಿಗೆ ಪರಿಗಣಿಸಬಹುದು. ಅಂತಹ ಉಪಕಾರವು ಉದ್ಯೋಗ ನಷ್ಟ ತಪ್ಪಿಸುತ್ತದೆ. ಸಾಂಕ್ರಾಮಿಕ ಸಮಯದಲ್ಲಿ ಉದ್ಯೋಗಿಗಳಿಗೆ ಸ್ಥಿರವಾದ ಆದಾಯ ಖಾತ್ರಿಗೊಳಿಸುತ್ತದೆ.
ಮೊದಲನೆಯದಾಗಿ, ಅಸಂಘಟಿತ ಕಾರ್ಮಿಕರ ಅವಸ್ಥೆಯನ್ನು ತುರ್ತಾಗಿ ಪರಿಹರಿಸಬೇಕಾಗಿದೆ. ಶೇ 97ರಷ್ಟು ಉದ್ಯೋಗಿಗಳು ಅಸಂಘಟಿತ ವಲಯದಲ್ಲಿದ್ದಾರೆ. ಅವರೆಲ್ಲ ದತ್ತಾಂಶ ಸಂಪೂರ್ಣ ಕಲೆಹಾಕುವ ಪ್ರಯತ್ನಗಳನ್ನು ನಡೆಸಿ, ನಗದು ವರ್ಗಾವಣೆ ಬೇಗನೆ ಪಡೆಯುಂತೆ ಮಾಡಬೇಕಿದೆ. ಅದು ಅವರ ಜೀವನವನ್ನು ಸ್ಥಿರಗೊಳಿಸುವುದಲ್ಲದೆ, ಮುಂದಿನ ಸಮಯದಲ್ಲಿ ಆರ್ಥಿಕತೆಗೂ ನೆರವಾಗುತ್ತದೆ.
ಎರಡನೆಯದಾಗಿ ಎಂಎನ್‌ಆರ್‌ಇಜಿಎಸ್ ಮತ್ತು ಕೃಷಿ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದ ಹಂಚಿಕೆಗಳನ್ನು ನೀಡಬೇಕಿದೆ. ಇದು ಗ್ರಾಮೀಣ ಬೇಡಿಕೆ ಹೆಚ್ಚಿಸಬಲ್ಲದು, ಮತ್ತು ಬೇಡಿಕೆಯ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಈ ಸಮಯದಲ್ಲಿ ಇದು ತುಂಬಾ ಅಗತ್ಯವಾಗಿರುತ್ತದೆ. 2020-21ರ ಹಣಕಾಸಿನ ಕೊರತೆಯು ಶೇ 6.2ರಿಂದ 6.5ರ ವ್ಯಾಪ್ತಿಯಲ್ಲಿರಲಿದೆ ಎಂದು ನಿರೀಕ್ಷಿಸಲಾಗಿದೆ. ನಾವು ಅಸಾಧಾರಣ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಅದಕ್ಕೆ ಹೆಚ್ಚುವರಿ ಸಾಮಾನ್ಯ ನೀತಿಗಳು ಬೇಕಾಗುತ್ತವೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಹೆಚ್ಚು ಖರ್ಚು ಮಾಡುವುದರಿಂದ ಹಿಂದೆ ಸರಿಯಬಾರದು.
-ಡಾ. ಮಹೇಂದ್ರ ಬಾಬು ಕುರುವಾ, ಉತ್ತರಾಖಂಡ ಎಚ್ಎನ್ಬಿ ಗರ್ವಾಲ್ ಕೇಂದ್ರೀಯ ವಿವಿಯ ವ್ಯವಹಾರ ನಿರ್ವಹಣಾ ವಿಭಾಗದ ಸಹಾಯಕ ಪ್ರಾಧ್ಯಾಪಕರು