ETV Bharat / business

6 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದ ಭಾರತದ ಜಿಡಿಪಿ ಬೆಳವಣಿಗೆ ದರ - ಭಾರತದ ಬೆಳವಣಿಗೆ

ತಯಾರಿಕಾ ವಲಯದ ಬೆಳವಣಿಗೆ ಕುಸಿತ ಮತ್ತು ಕೃಷಿ ಕ್ಷೇತ್ರದ ಉತ್ಪಾದಕತೆ ಇಳಿಕೆಯೇ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. 2012-13ರಲ್ಲಿ ಶೇ 4.9ರಷ್ಟು ಇದದ್ದು ಇದುವರೆಗಿನ ಕನಿಷ್ಠ ಮಟ್ಟದಾಗಿತ್ತು. ಆದರೆ, ಕಳೆದ ವರ್ಷ ಇದೇ ಅವಧಿಯಲ್ಲಿ (2018-19) ಶೇ 8ರಷ್ಟಿತ್ತು.

ಸಾಂದರ್ಭಿಕ ಚಿತ್ರ
author img

By

Published : Aug 30, 2019, 8:15 PM IST

ನವದೆಹಲಿ: ಪ್ರಸಕ್ತ ಸಾಲಿನ 2019-20ರ ಏಪ್ರಿಲ್​- ಜೂನ್​ ತ್ರೈಮಾಸಿಕದ ನಿವ್ವಳ ದೇಶಿ ಉತ್ಪನ್ನ (ಜಿಡಿಪಿ) ಬೆಳವಣಿಗೆ ದರವು ಆರು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದು ಶೇ 5ರಷ್ಟಿದೆ ಎಂದು ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ.

ತಯಾರಿಕಾ ವಲಯದ ಬೆಳವಣಿಗೆ ಕುಸಿತ ಮತ್ತು ಕೃಷಿ ಕ್ಷೇತ್ರದ ಉತ್ಪಾದಕತೆ ಇಳಿಕೆಯೇ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. 2012-13ರಲ್ಲಿ ಶೇ 4.9ರಷ್ಟು ಇದದ್ದು ಇದುವರೆಗಿನ ಕನಿಷ್ಠ ಮಟ್ಟದಾಗಿತ್ತು. ಆದರೆ, ಕಳೆದ ವರ್ಷ ಇದೇ ಅವಧಿಯಲ್ಲಿ (2018-19) ಶೇ 8ರಷ್ಟಿತ್ತು.

ರಿಸರ್ವ್ ಬ್ಯಾಂಕ್ 2019-20ರ ಜಿಡಿಪಿ ಬೆಳವಣಿಗೆಯು ಜೂನ್ ತಿಂಗಳ ವಿತ್ತೀಯ ನೀತಿ ಪರಾಮರ್ಶೆಯಲ್ಲಿ ಶೇ 7 ಪ್ರತಿಶತದಿಂದ ಶೇ 6.9ಕ್ಕೆ ಇಳಿಸಿತ್ತು. ದೇಶಿ ಮಾರುಕಟ್ಟೆಯ ಉತ್ಪನ್ನಗಳ ಬೇಡಿಕೆಯನ್ನು ಹೆಚ್ಚಿಸುವ ಮೂಲಕ ಬೆಳವಣಿಗೆಯ ಕಳವಳಗಳನ್ನು ಪರಿಹರಿಸುವ ಅಗತ್ಯವನ್ನು ಆರ್​ಬಿಐ ಒತ್ತಿಹೇಳಿತು.

2019-20ರ ನೈಜ ಜಿಡಿಪಿ ಬೆಳವಣಿಗೆಯು ಜೂನ್ ನೀತಿಯಲ್ಲಿ ಶೇ 7 ರಿಂದ ಶೇ 6.9ಕ್ಕೆ ಇಳಿಸಲಾಗಿದೆ. 2019-20ರ ಮೊದಲ ಅರ್ಧದ ಅವಧಿಯಲ್ಲಿ ಶೇ 5.8- ಶೇ 6.6 ಮತ್ತು ದ್ವಿತೀಯಾರ್ಧದಲ್ಲಿ ಶೇ 7.3-7.5 ಮಟ್ಟದಲ್ಲಿ ಬೆಳವಣಿಗೆ ದರ ಇರಿಸಿಕೊಂಡು ಎದುರಾಗಲಿರುವ ವಿತ್ತೀಯ ಅಪಾಯಗಳು ಹಂತ- ಹಂತವಾಗಿ ತಗ್ಗಿಸುವ ಗುರಿ ಹೊಂದಿತ್ತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.