ನವದೆಹಲಿ: ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈವೇಟ್ ಲಿಮಿಟೆಡ್ (ಸಿಎಂಐಇ ) ಪ್ರಕಾರ, ಮಾರ್ಚ್‌ನಲ್ಲಿ ನಿರುದ್ಯೋಗ ದರವು ಶೇ 23.8 ರಷ್ಟಿದ್ದು, ಇದು ಈಗ ಶೇ 24.6ಕ್ಕೆ ಏರಿಕೆ (2020ರ ಮೇ 8) ಆಗಿದೆ ಎಂದು ಹೇಳಿದೆ.
ದಿಗ್ಬಂಧನದಿಂದ ಕೃಷಿ ಚಟುವಟಿಕೆಗಳು ಸ್ಥಗಿತವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿನ ನಿರುದ್ಯೋಗ ದರವು ಶೇ 13.08ಕ್ಕೆ ಏರಿದೆ. ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರವು ಶೇ 14.53ಕ್ಕೆ ತಲುಪಿದೆ. ಇದರ ಜೊತೆಗೆ ಉದ್ಯೋಗಿಗಳ ಸಂಖ್ಯೆ ಕುಸಿಯುತ್ತಿದೆ ಎಂದು ಸಿಎಂಐಇ ವರದಿ ಮಾಡಿದೆ. ವಾಯುಯಾನ, ಪ್ರಯಾಣ, ಆತಿಥ್ಯ, ಚಿಲ್ಲರೆ ವ್ಯಾಪಾರ, ಉತ್ಪಾದನೆ ಮತ್ತು ವಾಹನ ಕ್ಷೇತ್ರಗಳು ಮೇಲು ಹೆಚ್ಚು ಪರಿಣಾಮ ಬೀರುತ್ತಿದೆ.
ಪ್ರಯಾಣ ಮತ್ತು ಆತಿಥ್ಯ
ಈ ವಲಯವು ಶೇ 12.75ರಷ್ಟು ಉದ್ಯೋಗ ಹೊಂದಿದೆ. ಇದರಲ್ಲಿ ಶೇ 5.56ರಷ್ಟು ನೇರ ಮತ್ತು ಶೇ 7.19ರಷ್ಟು ಪರೋಕ್ಷ. ಪ್ರವಾಸೋದ್ಯಮ ಸಚಿವಾಲಯದ 2019-20ರ ವಾರ್ಷಿಕ ವರದಿಯ ಪ್ರಕಾರ, 2018-19ರಲ್ಲಿ 87 ದಶಲಕ್ಷಕ್ಕೂ ಹೆಚ್ಚು ಜನರು ಪ್ರವಾಸೋದ್ಯಮದಲ್ಲಿ ದುಡಿಯುತ್ತಿದ್ದಾರೆ ಎಂದು ಹೇಳಿತ್ತು.
ಭಾರತೀಯ ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮವು ಸುಮಾರು 38 ಮಿಲಿಯನ್ ಉದ್ಯೋಗ ನಷ್ಟ ಎದುರಿಸುತ್ತಿದೆ. ಒಟ್ಟಾರೆ ಉದ್ಯೋಗಿಗಳಲ್ಲಿ ಶೇ 70ರಷ್ಟಿದೆ. ಎಂದು ಹಣಕಾಸು ಸೇವೆ ಮತ್ತು ವ್ಯವಹಾರ ಸಲಹಾ ಸಂಸ್ಥೆ ಕೆಪಿಎಂಜಿ ತನ್ನ ವರದಿಯಲ್ಲಿ ತಿಳಿಸಿದೆ.
ವಾಯುಯಾನ
ಕೋವಿಡ್ -19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ವಾಯುಯಾನ ಚಟುವಟಿಕೆಗಳು ಶೇ 66ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಸ್ತಬ್ಧವಾಗಿದೆ. ಎಂದು ಸಿಎಪಿಎ ಇಂಡಿಯಾ ಕಳೆದ ತಿಂಗಳು ನೀಡಿದ ವರದಿಯಲ್ಲಿ ತಿಳಿಸಿದೆ. ಏಪ್ರಿಲ್ 15ರಂದು ಜಾಗತಿಕ ವಿಮಾನಯಾನ ಸಂಸ್ಥೆಗಳ ಅಂತಾರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆ (ಐಎಟಿಎ) ಭಾರತದ ವಾಯುಯಾನ ಕ್ಷೇತ್ರದಲ್ಲಿ 20ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಅಪಾಯದಲ್ಲಿದೆ ಎಂದಿದೆ.
ಆಟೋಮೊಬೈಲ್
ಭಾರತದ ವಾಹನ ವಲಯವು ಉತ್ಪಾದನಾ ಚಟುವಟಿಕೆಯ ಮತ್ತು ಮಾರಾಟದ ಸ್ಥಗಿತದಿಂದಾಗಿ ತೀವ್ರ ಕುಸಿತ ಕಂಡಿದೆ. ಬಹುತೇಕ ಘಟಕಗಳು ಮುಚ್ಚಿದ ಬಳಿಕ ದೊಡ್ಡ ವಾಹನ ಉತ್ಪಾದನಾ ಕಂಪನಿಗಳು ವೇತನ ಕಡಿತ ಘೋಷಿಸಿವೆ. ಮಾರಾಟಗಾರರ ಪುನರಾರಂಭದ ನಿರ್ಧಾರಕ್ಕೆ ಎದುರುನೋಡುತ್ತಿವೆ.
ರಿಯಲ್ ಎಸ್ಟೇಟ್
ಲಾಕ್‌ಡೌನ್‌ನಿಂದಾಗಿ ರಿಯಲ್ ಎಸ್ಟೇಟ್ ಕ್ಷೇತ್ರ ಸಹ ಅಪಾರ ನಷ್ಟ ಅನುಭವಿಸಿದೆ ಎಂದು ಅನಾರಾಕ್ ಗ್ರೂಪ್ ವರದಿಯಲ್ಲಿ ತಿಳಿಸಿದೆ. ವಸತಿ ಮಾರಾಟವು ಶೇ 25-35ರಷ್ಟು ಕುಸಿಯುತ್ತದೆ. ಕಚೇರಿ ಖರೀದಿ ವರ್ಷದಿಂದ ವರ್ಷಕ್ಕೆ ಶೇ 13-30ರಷ್ಟು ಕುಸಿಯುತ್ತದೆ.
ಎಂಎಸ್ಎಂಇ
ಸರ್ಕಾರದಿಂದ ಬೆಂಬಲ ಪಡೆದ ನಂತರವೂ ಬಹುತೇಕ ಉದ್ಯಮಗಳು ನಷ್ಟಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳುವ ಹಾದಿಯಲ್ಲಿವೆ. ಆದಾಯ ಗಳಿಕೆ ಸಾಧ್ಯವಾಗುತ್ತಿಲ್ಲ. ಉದ್ಯಮಿಗಳು ಉಳಿವಿಗಾಗಿ ಹರಸಾಹಸ ಪಡುತ್ತಿದ್ದಾರೆ. ಸರ್ಕಾರಿ ಚಾಲಿತ ಪ್ರಚೋದಕ ಪ್ಯಾಕೇಜ್ ಇಲ್ಲದಿದ್ದರೆ ಇಡೀ ಜವಳಿ ಸರಪಳಿಯಲ್ಲಿ 10 ಮಿಲಿಯನ್ ಉದ್ಯೋಗಗಳು ಅಪಾಯದಲ್ಲಿದ್ದವು.
ರಫ್ತು
ಕೈಗಾರಿಕಾ ಸಂಸ್ಥೆ, ಫೆಡರೇಷನ್ ಆಫ್ ಇಂಡಿಯನ್ ರಫ್ತು ಸಂಸ್ಥೆ ಕೋವಿಡ್ 19 ಕಾರಣದಿಂದ ಜಾಗತಿಕ ವ್ಯಾಪಾರ ಪ್ರವೃತ್ತಿಗಳ ಹಿನ್ನೆಲೆಯಲ್ಲಿ ಭಾರತದಲ್ಲಿ 1.5 ಕೋಟಿಗೂ ಹೆಚ್ಚು ಜನರು ಉದ್ಯೋಗ ಕಳೆದುಕೊಳ್ಳಬಹುದು ಎಂದಿದೆ. ಆದೇಶ ರದ್ದತಿಯಿಂದಾಗಿ ಜವಳಿ ರಫ್ತು ವಲಯವೇ 2.5-3 ಮಿಲಿಯನ್ ಉದ್ಯೋಗ ನಷ್ಟ ಅಂದಾಜಿಸಿದೆ.
ಐಟಿ
ಮನಿಕಂಟ್ರೋಲ್‌ನ ಏಪ್ರಿಲ್ 3ರ ವರದಿಯ ಪ್ರಕಾರ, ಭಾರತದ ವಿವಿಧ ಐಟಿ ಸಂಸ್ಥೆಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನರು ಮುಂಬರುವ ತಿಂಗಳುಗಳಲ್ಲಿ ಉದ್ಯೋಗ ಕಳೆದುಕೊಳ್ಳುವ ನಿರೀಕ್ಷೆಯಿದೆ.
ಅನೌಪಚಾರಿಕ ವಲಯ
ಲಾಕ್ಡೌನ್ ಜಾರಿಯಾದ ಎರಡು ವಾರಗಳಲ್ಲಿ ಸುಮಾರು 119 ಮಿಲಿಯನ್ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ ಸುಮಾರು 93 ಮಿಲಿಯನ್ ಅನೌಪಚಾರಿಕ ಕಾರ್ಮಿಕರು ಐದು ಕ್ಷೇತ್ರಗಳಲ್ಲಿ ಹಂಚಿದ್ದಾರೆ; ಉತ್ಪಾದನೆ (28 ಮಿಲಿಯನ್), ವ್ಯಾಪಾರ, ಹೋಟೆಲ್ ಮತ್ತು ರೆಸ್ಟೋರೆಂಟ್ (32 ಮಿಲಿಯನ್), ನಿರ್ಮಾಣ (15 ಮಿಲಿಯನ್), ಸಾರಿಗೆ, ಸಂಗ್ರಹಣೆ ಮತ್ತು ಸಂವಹನ (11 ಮಿಲಿಯನ್) ಮತ್ತು ಹಣಕಾಸು, ವ್ಯವಹಾರ ಮತ್ತು ರಿಯಲ್ ಎಸ್ಟೇಟ್ (7 ಮಿಲಿಯನ್).
ತಾಂತ್ರಿಕ ವಿಶ್ಲೇಷಣೆಯಡಿ ಹೆಚ್ಚು ಪರಿಣಾಮ ಬೀರುವ ಅನೌಪಚಾರಿಕ ಕಾರ್ಮಿಕರ ಸಂಖ್ಯೆ ಸುಮಾರು 40 ಮಿಲಿಯನ್ ಎಂದು ಹೇಳುತ್ತಿದೆ. ಅವುಗಳೆಂದರೆ: ಅಂಗಡಿ ವರ್ತಕರು (13 ಮಿಲಿಯನ್), ನಿರ್ಮಾಣ ಕಾರ್ಮಿಕರು (7 ಮಿಲಿಯನ್), ಉತ್ಪಾದನೆ ವಲಯದ ಕಾರ್ಮಿಕರು (3 ಮಿಲಿಯನ್), ಸಾರಿಗೆ (2 ಮಿಲಿಯನ್), ದೇಶಿಯ ಸಹಾಯಕರು (4 ಮಿಲಿಯನ್), ವಸತಿ ಕೀಪಿಂಗ್ ಮತ್ತು ರೆಸ್ಟೋರೆಂಟ್ ಸೇವಾ ಕಾರ್ಯಕರ್ತರು (3 ಮಿಲಿಯನ್), ಪೇಂಟರ್ ಮತ್ತು ಕಟ್ಟಡ ಕ್ಲೀನರ್‌ಗಳು (3 ಮಿಲಿಯನ್), ಸ್ಟಾಲ್ ಮತ್ತು ಮಾರುಕಟ್ಟೆ ಮಾರಾಟಗಾರರು (2 ಮಿಲಿಯನ್), ರಸ್ತೆ ಬದಿ ಮಾರಾಟಗಾರರು (2 ಮಿಲಿಯನ್) ಮತ್ತು ಕಸ ಸಂಗ್ರಹಕಾರರು (1 ಮಿಲಿಯನ್) ಇದ್ದಾರೆ.
ನೇಮಕಾತಿಯಲ್ಲಿನ ಕುಸಿತ
ಪ್ರಯಾಣ ಮತ್ತು ಆತಿಥ್ಯಶೇ -56ರಷ್ಟು, ಚಿಲ್ಲರೆ ಶೇ -50ರಷ್ಟು, ಆಟೋಮೊಬೈಲ್ ಮತ್ತು ಪೂರಕ ಉದ್ಯಮ ಶೇ -38ರಷ್ಟು, ಔಷಧ ಉದ್ಯಮ ಶೇ -26ರಷ್ಟು, ವಿಮೆ ಶೇ -11ರಷ್ಟು, ಸಾಫ್ಟ್‌ವೇರ್ ಶೇ -11ರಷ್ಟು, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು ಶೇ -9ರಷ್ಟು, ಮನೋರಂಜನೆ ಮತ್ತು ಸನ್ ಟಿವಿ ಜನವರಿಯಿಂದ ಮಾರ್ಚ್ ವರೆಗೆ ಜಾಹೀರಾತು ಆದಾಯದಲ್ಲಿ ಶೇ 28 ಮತ್ತು ಶೇ 20ರಷ್ಟು ನಷ್ಟು ಕುಸಿದಿದೆ.
ಉದ್ಯೋಗ ಪ್ರಮಾಣ
14.5 ಲಕ್ಷ - ಇ-ಕಾಮರ್ಸ್
, 69.9 ಲಕ್ಷ - ಆಹಾರ ಸಂಸ್ಕರಣೆ
, 474 ಲಕ್ಷ - ರಿಟೇಲ್,
500 ಲಕ್ಷ - ಪ್ರವಾಸೋದ್ಯಮದಲ್ಲಿರುವ ಉದ್ಯೋಗ ಪ್ರಮಾಣವಾಗಿದೆ.