ETV Bharat / business

ರಾಶಿ ರಾಶಿ ಕಪ್ಪು ಹಣ ಸಂಗ್ರಹಕ್ಕೆ ಕಾಳಧನಿಕರಿಗೆ 2,000 ರೂ. ನೋಟು​ಗಳೇ ಫೇವರಿಟ್​..! - ಲೆಕ್ಕವಿಲ್ಲದ ಹಣ

ರಾಜ್ಯಸಭೆಯಲ್ಲಿ ಮಂಗಳವಾರ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು, ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ವಶಪಡಿಸಿಕೊಂಡ ಒಟ್ಟು ಹಣದಲ್ಲಿ ಶೇ 43.22 ಲೆಕ್ಕವಿಲ್ಲದ ನಗದು 2,000 ರೂ. ನೋಟುಗಳ ರೂಪದಲ್ಲಿದೆ ಎಂದು ಹೇಳಿದರು.

ಹಣ
author img

By

Published : Nov 20, 2019, 11:59 PM IST

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2016ರ ನವೆಂಬರ್​ನಂದು 500 ಮತ್ತು 1,000 ರೂ. ಮುಖ ಬೆಲೆಯ ನೋಟುಗಳನ್ನು ರದ್ದುಪಡಿಸಿದ ನಂತರ ಬಿಡುಗಡೆ ಮಾಡಿದ 2,000 ರೂ. ಮುಖ ಬೆಲೆಯ ನೋಟುಗಳು ವ್ಯವಹಾರಕ್ಕೆ ಬದಲಾಗಿ ಕಪ್ಪು ಹಣ ಸಂಗ್ರಹಕ್ಕೆ ಬಳಕೆಯಾಗುತ್ತಿವೆ.

ರಾಜ್ಯಸಭೆಯಲ್ಲಿ ಮಂಗಳವಾರ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು, ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ವಶಪಡಿಸಿಕೊಂಡ ಒಟ್ಟು ಹಣದಲ್ಲಿ ಶೇ 43.22 ಲೆಕ್ಕವಿಲ್ಲದ ನಗದು 2,000 ರೂ. ನೋಟುಗಳ ರೂಪದಲ್ಲಿದೆ ಎಂದು ಹೇಳಿದರು.

ಹಿಂದಿನ 2018 ಮತ್ತು 2019ರಲ್ಲಿನ ಹಣಕಾಸು ವರ್ಷದಲ್ಲಿ ಲೆಕ್ಕವಿಲ್ಲದ ನಗದು ಮಟ್ಟವು ಶೇ 60ರಷ್ಟಿದೆ. ಇದರಿಂದಾಗಿ ನೋಟುಗಳ ಆದ್ಯತೆ ಕುಸಿಯುತ್ತಿದೆ. ನೋಟು ನಿಷೇಧದ ಬಳಿಕ ಮೊದಲ ಹಣಕಾಸು ವರ್ಷದಲ್ಲಿ (ಎಫ್‌ವೈ 18) ಲೆಕ್ಕವಿಲ್ಲದ ನಗದು ಶೇ 67.91ರಷ್ಟು 2,000 ರೂ. ನೋಟುಗಳಿಂದ ಸಂಗ್ರಹವಾಗಿತ್ತು. ಇದು 2019 ವಿತ್ತೀಯ ವರ್ಷದಲ್ಲಿ ಶೇ 65.93ಕ್ಕೆ ತಲುಪಿದ್ದು, ಸ್ವಲ್ಪ ಕಡಿಮೆಯಾಗಿದೆ ಎಂದರು.

ಕಳೆದ ಮೂರು ಹಣಕಾಸು ಅವಧಿಯಲ್ಲಿ 5 ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ವಶಪಡಿಸಿಕೊಂಡ ಪ್ರಕರಣಗಳನ್ನು ವಿಶ್ಲೇಷಣೆಗೆ ಒಳಪಡಿಸಿದ ಹಣಕಾಸು ಸಚಿವರು, ಸಂಸತ್ತಿನಲ್ಲಿ ಆದಾಯ ತೆರಿಗೆ ಇಲಾಖೆ ಒದಗಿಸಿದ ದತ್ತಾಂಶವನ್ನು ವಿವರಿಸಿದರು

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.