ETV Bharat / business

ಮೋದಿ ಟೀಂನ ಗೋಲ್​ ಕೀಪರ್​, ಆರ್ಥಿಕತೆಯ ಆಪತ್ಬಾಂಧವ ಅರುಣ್​ ಜೇಟ್ಲಿ..! - ಜಿಎಸ್​ಟಿ

ತೆರೆ ಮರೆಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ವಕೀಲ ಹಾಗೂ ರಾಜಕಾರಣಿ ಜೇಟ್ಲಿ ಅವರು ದೆಹಲಿಯ ಶ್ರೀರಾಮ್​ ಕಾಲೇಜಿನಿಂದ ಸಾರ್ವಜನಿಕ ಬದುಕಿಗೆ ಅಡಿ ಇಟ್ಟರು. ಗುಜರಾತ್​ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಬಂದ ಅವರು ಸಚಿವ ಸ್ಥಾನದಿಂದ ಹಣಕಾಸು ಮಂತ್ರಿವರೆಗೂ ಸವೆಸಿದ ಹಾದಿಯಲ್ಲಿ ಅಡೆತಡೆಗಳು ಬಹಳಷ್ಟಿದ್ದವು. ಅವೆಲ್ಲವನ್ನು ಮೆಟ್ಟಿ ಪ್ರಧಾನಿ ಮೋದಿ ಅವರ ಎನ್​ಡಿಎ-1ನೇ ಸರ್ಕಾರದಲ್ಲಿ 26ನೇ ವಿತ್ತ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಐದು ಬಾರಿ ಬಜೆಟ್​ ಮಂಡಿಸಿ ವಹಿಸಿದ ಹುದ್ದೆಗೆ ತಾವೆಷ್ಟು ಸಮರ್ಥರೆಂದು ಸಾಬೀತು ಪಡಿಸಿದರು.

ಸಾಂದರ್ಭಿಕ ಚಿತ್ರ
author img

By

Published : Aug 24, 2019, 6:04 PM IST

ನವದೆಹಲಿ: 'ಹೃದಯವು ಏನನ್ನು ಬಯಸುತ್ತದೆ ಎಂಬುದನ್ನು ಅನುಭವದಿಂದ ಮಾತ್ರ ಕಂಡುಕೊಳ್ಳಬಹುದು' ಎಂಬ ಕ್ಯಾಥಿ ಬೇಟ್ಸ್ ಮಾತಿನಂತೆ ಅರುಣ್ ಜೇಟ್ಲಿ ಅವರ ಜೀವನ, ಎಬಿಬಿವಿಪಿಯಿಂದ ಮೊದಲುಗೊಂಡು ಹಣಕಾಸು ಮಂತ್ರಿಯವರೆಗೂ ಹೃದಯದಿಂದ ಒಡಮೂಡಿದ ಅನುಭವಗಳಿಂದಲೇ ತಮ್ಮ ಸಾತ್ವಿಕ ರಾಜಕೀಯ ಜೀವನದ ಗೂಡು ಕಟ್ಟಿಕೊಂಡಿದ್ದರು.

ಎರಡು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಕ್ಯಾನ್ಸರ್​ ಕಾಯಿಲೆ ವಿರುದ್ಧ ಸೇಣಸಾಟ ನಡೆಸಿದ್ದರೂ ಮೃತ್ಯುವಿನ ಬಲೆಯಿಂದ ತಪ್ಪಿಸಿಕೊಳ್ಳಲಾಗದೆ 66ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.

ತೆರೆ ಮರೆಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ವಕೀಲ ಹಾಗೂ ರಾಜಕಾರಣಿ ಜೇಟ್ಲಿ ಅವರು ದೆಹಲಿಯ ಶ್ರೀರಾಮ್​ ಕಾಲೇಜಿನಿಂದ ಸಾರ್ವಜನಿಕ ಬದುಕಿಗೆ ಅಡಿ ಇಟ್ಟರು. ಗುಜರಾತ್​ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಬಂದ ಅವರು ಸಚಿವ ಸ್ಥಾನದಿಂದ ಹಣಕಾಸು ಮಂತ್ರಿವರೆಗೂ ಸವೆಸಿದ ಹಾದಿಯಲ್ಲಿ ಅಡೆತಡೆಗಳು ಬಹಳಷ್ಟಿದ್ದವು. ಅವೆಲ್ಲವನ್ನು ಮೆಟ್ಟಿ ಪ್ರಧಾನಿ ಮೋದಿ ಅವರ ಎನ್​ಡಿಎ-1ನೇ ಸರ್ಕಾರದಲ್ಲಿ 26ನೇ ವಿತ್ತ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಐದು ಬಾರಿ ಬಜೆಟ್​ ಮಂಡಿಸಿ ವಹಿಸಿದ ಹುದ್ದೆಗೆ ತಾವೆಷ್ಟು ಸಮರ್ಥರೆಂದು ಸಾಬೀತು ಪಡಿಸಿದರು.

ಹಣಕಾಸು ಸಚಿವರಾಗಿ ಜೇಟ್ಲಿ ನಿರ್ವಹಿಸಿದ ಸವಾಲುಗಳು

1. ದಶಕದಿಂದ ನನೆಗುದಿಗೆ ಬಿದ್ದಿದ್ದ ಜಿಎಸ್​ಟಿಯನ್ನು 2017ರ ಜುಲೈ 1ರಂದು ಜಾರಿಗೆ ತರುವಲ್ಲಿ ಅವಿರತವಾಗಿ ಶ್ರಮಿಸಿದ್ದರು. ಏಕೀಕೃತ ತೆರಿಗೆ ಪದ್ಧತಿಯನ್ನು ವಿರೋಧಿಸುತ್ತಿದ್ದ ಒಕ್ಕೂಟದ ರಾಜ್ಯಗಳನ್ನು ಎದುರು ಹಾಕಿಕೊಂಡು ಜಯಶೀಲರಾದರು.

2. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಿತ್ತೀಯ ನೀತಿ ಸಮಿತಿಯ ಬದಲಾವಣೆ ಮತ್ತು ಹಣದುಬ್ಬರ ವಿರುದ್ಧ ಅವರು ತೆಗೆದುಕೊಂಡ ಜಾಗರೂಕ ನಿಲುವುಗಳಿಂದ ಶೇ 7.72ರಷ್ಟಿದ್ದ ಗ್ರಾಹಕರ ಬೆಲೆ ಹಣದುಬ್ಬರ ಶೇ 3ಕ್ಕೆ ತಲುಪುವಲ್ಲಿ ಜೇಟ್ಲಿ ಅವರ ಕೌಶಲ್ಯ ಅಡಗಿದೆ.

3. ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಅನುತ್ಪಾದಕ ಸ್ವತ್ತುಗಳನ್ನು ತಗ್ಗಿಸಿದರು. ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಅಡಿಯಲ್ಲಿ ದಿವಾಳಿಯಾದ ಕಂಪನಿಗಳಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ಒದಗಿಸಲು ವ್ಯಸಸ್ಥಿತವಾದ ಚೌಕಟ್ಟನ್ನು ರಚಿಸಿದರು. ಇವರ ಶ್ರಮದ ಫಲವಾಗಿ ಸಂಸತ್ತು 2016ರಲ್ಲಿ ದಿವಾಳಿತನ ಸಂಹಿತೆ ಅಂಗೀಕರಿಸಿತು.

4. ಜಾಗತಿಕ ಮಟ್ಟದಲ್ಲಿನ ಬ್ಯಾಂಕ್​ಗಳಿಗೆ ಪ್ರಬಲವಾದ ಪ್ರತಿ ಸ್ಪರ್ಧೆಯೊಡ್ಡಲು 1969 ಮತ್ತು 1980ರ ಬಳಿಕ ಮೊತ್ತೊಂದು ಸುತ್ತಿನ ಬ್ಯಾಂಕ್​ಗಳ ರಾಷ್ಟ್ರೀಕರಣಕ್ಕೆ ಕೈಹಾಕಿದರು. ವಿಜಯಾ ಬ್ಯಾಂಕ್​, ದೇನಾ ಬ್ಯಾಂಕ್​, ಬ್ಯಾಂಕ್​ ಆಫ್​ ಬರೋಡಾ ಜೊತೆಗೆ ವಿಲೀನವಾದವು.

5. ಶತಮಾನದಷ್ಟು ಹಳೆಯದಾದ ರೈಲ್ವೆ ಬಜೆಟ್​ ಅನ್ನು ಪ್ರತ್ಯೇಕತೆಯಿಂದ ಸಾಮಾನ್ಯ ಬಜೆಟ್​ಗೆ ಸೇರ್ಪಡೆಗೊಳಿಸಿದರು. ಸುಮಾರು 35 ಸಾವಿರ ಕೋಟಿ ರೂ.ಯಷ್ಟು ಆರ್ಥಿಕ ಹೊರೆಯಿಂದ ನಲುಗುತ್ತಿದ್ದ ರೈಲ್ವೆಯನ್ನು ಮೇಲೆತ್ತಿ, ಘೋಷಣೆಗೆ ಸೀಮಿತವಾಗುತ್ತಿದ್ದ ಯೋಜನೆಗಳಿಗೆ ಬ್ರೇಕ್​ ಹಾಕಿದರು.

6. ವಿವಿಧ ಯೋಜನೆಗಳಲ್ಲಿ ಸೋರಿಕೆ ತಡೆಗಟ್ಟುವ ಉದ್ದೇಶದಿಂದ ನೇರ ನಗದು ವರ್ಗಾವಣೆಯಲ್ಲಿ (ಡಿಬಿಟಿ) ಕೇಂದ್ರೀಕೃತ ಹಣ ಪಾವತಿ ಯೋಜನೆ ಆರಂಭಿಸಿದರು. ಇದು 1.4 ಲಕ್ಷ ಕೋಟಿಯಷ್ಟು ಸೋರಿಕೆ ತಡಗಟ್ಟಿ ಸರ್ಕಾರದ ಖಜಾನೆ ಸೇರುವಂತಾಯಿತು.

7. ಅರುಣ್​ ಜೇಟ್ಲಿ ಅವರು ಹಣಕಾಸು ಸಚಿವರಾಗಿದ್ದಾಗಲೇ ಗರಿಷ್ಠ ಮುಖಬೆಲೆಯ 500 ಮತ್ತು 1,000 ರೂ. ನೋಟು ರದ್ದತಿಯನ್ನು ಘೋಷಿಸಲಾಯಿತು.

8. ಬ್ಯಾಂಕ್​ ಕ್ಷೇತ್ರದಿಂದ ದೇಶದ ಬಹುದೊಡ್ಡ ಸಂಖ್ಯೆ ಜನರು ದೂರವೇ ಉಳಿದಿದ್ದರು. ಅವರನ್ನು ಅದರ ವ್ಯಾಪ್ತಿಯೊಳಗೆ ತಂದು ಡಿಜಿಟಲ್​ ಪಾವತಿಗೆ ಉತ್ತೇಜನ ನೀಡಲು ಆರಂಭವಾದ ಜನ್​ ಧನ್​, ಆಧಾರ್​ ಮತ್ತು ಮೊಬೈಲ್​ ಬೆಂಬಲಿತ ವಹಿವಾಟುಗಳ ಹಿಂದೆ ಜೇಟ್ಲಿ ಅವರ ಚಾಣಕ್ಯ ತನವಿದೆ.

9. ಜೇಟ್ಲಿ ಅವರ ತಮ್ಮ ಹಣಕಾಸು ಅವಧಿಯ ಉದ್ದಕ್ಕೂ ವಿತ್ತೀಯ ಕೊರತೆಯನ್ನು ಶೇ 3.5ರಲ್ಲಿ ಕಾಪಾಡಿಕೊಂಡಿದ್ದು ಮಹತ್ವದ ಹೆಗ್ಗಳಿಕೆ

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.