ETV Bharat / business

IMF ಕೊಟ್ಟ ಎಚ್ಚರಿಕೆ: ಗಲ್ಫ್​ ರಾಷ್ಟ್ರಗಳ ಸಂಪತ್ತು ಕೆಲ ವರ್ಷಗಳಲ್ಲಿ ಖಾಲಿ, ಕಾರಣವೇನು? - ಅಂತಾರಾಷ್ಟ್ರೀಯ ಹಣಕಾಸು ನಿಧಿ

ಕೊಲ್ಲಿ ರಾಷ್ಟ್ರಗಳು ಕಪ್ಪು ಚಿನ್ನವೆಂದು ಕರೆಯಲ್ಪಡುವ ಕಚ್ಚಾ ತೈಲದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೇಡಿಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕೊಲ್ಲಿ ಸಹಕಾರ ಮಂಡಳಿಯ 6 ಸದಸ್ಯ ರಾಷ್ಟ್ರಗಳ ವರಮಾನದಲ್ಲಿ ಕಚ್ಚಾ ತೈಲದ ಪ್ರಮಾಣವು ಶೇ 70-90ರಷ್ಟಿದೆ ಎಂದು ಐಎಂಎಫ್​ ಹೇಳಿದೆ.

International Monetary Fund
ಅಂತಾರಾಷ್ಟ್ರೀಯ ಹಣಕಾಸು ನಿಧಿ
author img

By

Published : Feb 7, 2020, 11:50 PM IST

ದುಬೈ: ಕೊಲ್ಲಿ ದೇಶಗಳ ಆರ್ಥಿಕ ಸುಧಾರಣಾ ಕ್ರಮಗಳನ್ನು ತ್ವರಿತವಾಗಿ ಜಾರಿಗೆ ತರದಿದ್ದರೆ 2034ರ ವೇಳೆಗೆ ಸರ್ಕಾರದ ಸಂಪತ್ತು ಖಾಲಿಯಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್​) ಎಚ್ಚರಿಸಿದೆ.

ಕೊಲ್ಲಿ ರಾಷ್ಟ್ರಗಳು ಕಪ್ಪು ಚಿನ್ನವೆಂದು ಕರೆಯಲ್ಪಡುವ ಕಚ್ಚಾ ತೈಲದ ಮೇಲೆ ಹೆಚ್ಚು ಅವಲಂಬನೆಯಾಗಿವೆ. ಇದು ದಶಕಗಳಿಂದ ಅವುಗಳ ಖಜಾನೆ ಸಾಕಷ್ಟು ಪ್ರಮಾಣದಲ್ಲಿ ಭರ್ತಿ ಆಗಿದ್ದವು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೇಡಿಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕೊಲ್ಲಿ ಸಹಕಾರ ಮಂಡಳಿಯ 6 ಸದಸ್ಯ ರಾಷ್ಟ್ರಗಳ ವರಮಾನದಲ್ಲಿ ಕಚ್ಚಾತೈಲದ ಪ್ರಮಾಣವು ಶೇ 70-90ರಷ್ಟಿದೆ ಎಂದು ಹೇಳಿದೆ.

ಈ ಎಲ್ಲ ದೇಶಗಳು ಇದುವರೆಗೂ ವಿದೇಶಗಳಲ್ಲಿ ₹ 189 ಲಕ್ಷ ಕೋಟಿ ಮೊತ್ತವನ್ನು ಹಣಕಾಸು ನಿಧಿಗಳಲ್ಲಿ ಹೂಡಿಕೆ ಮಾಡಿವೆ. 2014ರಿಂದ ಈಚೆಗೆ ತೈಲ ಬೆಲೆ ಇಳಿಕೆ ಹಾದಿಯಲ್ಲಿದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಗಮನಾರ್ಹ ಬದಲಾವಣೆ ಆಗುತ್ತಿವೆ. ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದರಿಂದ ಕೊಲ್ಲಿ ರಾಷ್ಟ್ರಗಳಿಗೆ ಹರಿದು ಬರುತ್ತಿರುವ ಸಂಪತ್ತು ಕಡಿಮೆಯಾಗುತ್ತಿದೆ. 2034ರ ವೇಳೆಗೆ ಅವುಗಳ ನಿವ್ವಳ ಸಂಪತ್ತಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬರಲಿದೆ ಎಂದು ತೈಲದ ಭವಿಷ್ಯ ಹಾಗೂ ವಿತ್ತೀಯ ಸುಸ್ಥಿರತೆ ವರದಿಯಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.