ನವದೆಹಲಿ: ದೇಶಾದ್ಯಂತ ಜಾರಿಯಾದ ಏಕರೂಪದ ತೆರಿಗೆ ಪದ್ಧತಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) 21ನೇ ಶತಮಾನದ ಅತಿದೊಡ್ಡ ಮೂರ್ಖತನ ಎಂದು ಬಿಜೆಪಿಯ ಹಿರಿಯ ಮುಖಂಡ ಡಾ. ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ.
ಹೈದರಾಬಾದ್ನ '2030ರ ವೇಳೆಗೆ ಭಾರತದ ಸೂಪರ್ಪವರ್ ಆರ್ಥಿಕತೆ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಸುಧಾರಣೆಗಳು ಬದಲಾಗಲು ಪ್ರಮುಖ ಕಾರಣರಾದ ಮಾಜಿ ಪ್ರಧಾನಿ ದಿ. ಪಿ.ವಿ. ನರಸಿಂರಾವ್ ಅವರಿಗೆ ಭಾರತ ರತ್ನ ನೀಡಬೇಕು. ದೇಶದಲ್ಲಿ ಕಾಲಕಾಲಕ್ಕೆ ಶೇ 8ರಷ್ಟು ಬೆಳವಣಿಗೆಯನ್ನು ಸಾಧಿಸಿದ್ದರೂ, ಕಾಂಕಗ್ರೆಸ್ ಮುಖಂಡ ಪಿ.ವಿ ನರಸಿಂಹರಾವ್ ತಂದಿರುವ ಸುಧಾರಣೆಗಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶೇ 3.7ರಷ್ಟು ಹೇಗೆ ಪಡೆದುಕೊಳ್ಳಬೇಕು (ಹೂಡಿಕೆ ಮಾಡುವವರಿಗೆ ಪ್ರೋತ್ಸಾಹ)? ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು. ಆದಾಯ ತೆರಿಗೆ, ಜಿಎಸ್ಟಿಯಿಂದ ಹೂಡಿಕೆದಾರರಲ್ಲಿ ಭಯ ಸೃಷ್ಟಿಸಬಾರದು. ಜಿಎಸ್ಟಿ ಪದ್ಧತಿಯ ಅನುಷ್ಠಾನ 21ನೇ ಶತಮಾನದ ಅತಿದೊಡ್ಡ ಹುಚ್ಚುತನ. ಈ ಜಿಎಸ್ಟಿ ತುಂಬ ಕಠಿಣವಾಗಿದೆ. ಅದನ್ನು ಯಾವ ರೂಪದ ಮುಖೇನ ತರಬೇಕು ಎಂಬುದು ಯಾರಿಗೂ ತಿಳಿಯುತಿಲ್ಲ ಎಂದು ವಿಶ್ಲೇಷಿಸಿದರು.
ತೆರಿಗೆ ಮಾಹಿತಿ ಕಂಪ್ಯೂಟರ್ಗೆ ದಾಖಲಿಸುವಂತೆ ಸರ್ಕಾರ ಬಯಸುತ್ತಿದೆ. ರಾಜಸ್ಥಾನದ ಕೆಲವರು, 'ನಮ್ಮ ಬಳಿ ವಿದ್ಯುತ್ ಇಲ್ಲ. ನಾವು ಹೇಗೆ ವಿದ್ಯುತ್ಗೆ ಅಪಲೋಡ್ ಮಾಡಲು ಸಾಧ್ಯ'ವೆಂದು ಪ್ರಶ್ನಿಸಿದ್ದಾರೆ. ಮೊದಲು ಅದನ್ನು ನಿಮ್ಮ ತಲೆಗೆ ಸೇರಿಸಿಕೊಂಡು ಬಳಿಕ ಪ್ರಧಾನಿ ಬಳಿ ಹೋಗಿ ಹೇಳಿ ಎಂದು ಸಲಹೆ ನೀಡಿದ್ದೇನೆ ಎಂದು ಸ್ವಾಮಿ ತಿಳಿಸಿದರು.
ಭಾರತ ಆರ್ಥಿಕವಾಗಿ ಶಕ್ತಿಯುತ ರಾಷ್ಟ್ರ ಆಗಬೇಕಾದರೆ, ಮುಂದಿನ ದಶಕದಲ್ಲಿ ಶೇ 10ರಷ್ಟು ಬೆಳವಣಿಗೆ ದಾಖಲಿಸಬೇಕು. ಈ ರೀತಿಯಲ್ಲಿ ಬೆಳವಣಿಗೆ ಮುಂದುವರಿದರೆ ಚೀನಾವನ್ನು ಹಿಂದಿಕ್ಕೆ ಮುಂದಿನ 50 ವರ್ಷಗಳಲ್ಲಿ ಭಾರತ ನಂಬರ್ 1 ಸ್ಥಾನದಲ್ಲಿದ್ದು ಅಮೆರಿಕಕ್ಕೆ ಸವಾಲೊಡ್ಡಬಹುದು ಎಂದು ಅಭಿಪ್ರಾಯಪಟ್ಟರು.