ETV Bharat / business

Shocking: 4.61 ಲಕ್ಷ ಮಂದಿ ಭಾರತೀಯರ ಬ್ಯಾಂಕ್​ ​ಕಾರ್ಡ್​ ಮಾಹಿತಿ ಸೋರಿಕೆ

ಸೈಬರ್ ದಾಳಿ ತಡೆಗಟ್ಟುವಲ್ಲಿ ಪರಿಣತಿ ಹೊಂದಿದ ಸಿಂಗಾಪುರ ಮೂಲದ ಸೈಬರ್ ಸೆಕ್ಯುರಿಟಿ ಕಂಪನಿಯಾದ ಗ್ರೂಪ್-ಐಬಿ, ಭಾರತೀಯ ಕಾರ್ಡ್​ದಾರರಿಗೆ ಸಂಬಂಧಿಸಿದ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದೆ.

Cardshop
ಕಾರ್ಡ್​ ಮಾಹಿತಿ ಸೋರಿಕೆ
author img

By

Published : Feb 7, 2020, 7:46 PM IST

ನವದೆಹಲಿ: ಜೋಕರ್ ಸ್ಟ್ಯಾಶ್‌ನಡಿ ಭಾರತೀಯ ಬ್ಯಾಂಕ್​ಗಳಿಗೆ ಸೇರಿರುವ ಸುಮಾರು 4,61,976 ಪಾವತಿ ಕಾರ್ಡ್ ದಾಖಲೆಗಳ ಡೇಟಾಬೇಸ್​ ಅನ್ನು ಡಾರ್ಕ್ ವೆಬ್‌ನಲ್ಲಿ ಸೋರಿಕೆ ಮಾಡಲಾಗಿದೆ ಎಂದು ಸಿಂಗಾಪೂರ್ ಮೂಲದ ಗ್ರೂಪ್​-ಐಬಿ ವರದಿ ಮಾಡಿದೆ.​

ಸೈಬರ್ ದಾಳಿ ತಡೆಗಟ್ಟುವಲ್ಲಿ ಪರಿಣತಿ ಹೊಂದಿದ ಸಿಂಗಾಪುರ ಮೂಲದ ಸೈಬರ್ ಸೆಕ್ಯುರಿಟಿ ಕಂಪನಿಯಾದ ಗ್ರೂಪ್-ಐಬಿ, ಭಾರತೀಯ ಕಾರ್ಡ್​ದಾರರಿಗೆ ಸಂಬಂಧಿಸಿದ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದೆ. ಮಾರಾಟದಲ್ಲಿರುವ ಡೇಟಾ ಬೇಸ್​ನಲ್ಲಿ ಶೇ 98ಕ್ಕಿಂತಲೂ ಅಧಿಕ ಮಾಹಿತಿ ಭಾರತೀಯ ಬ್ಯಾಂಕ್​ಗಳು ವಿತರಿಸಿದ ಕಾರ್ಡ್‌ಗಳದ್ದೇ ಇದೆ ಎಂದು ಹೇಳಿದೆ.

ಕಾರ್ಡ್ ದಾಖಲೆಗಳನ್ನು ಫೆಬ್ರವರಿ 5ರಂದು ಅಪ್‌ಲೋಡ್ ಮಾಡಲಾಗಿದೆ. ಇದರ ಒಟ್ಟು ಅಂದಾಜು ಮೌಲ್ಯ 4.2 ಮಿಲಿಯನ್ ಡಾಲರ್ (30 ಕೋಟಿ ರೂ., ಪ್ರತಿ ಕಾರ್ಡ್​ ಬೆಲೆ 650 ರೂ.ಯಷ್ಟು ಆಗಲಿದೆ) ​ನಷ್ಟಿದೆ. ನಿನ್ನೆ ಬೆಳಿಗ್ಗೆ ತನಕ 16 ಕಾರ್ಡ್‌ಗಳ ವಿವರಗಳು ಮಾರಾಟವಾಗಿರುವುದು ಕಂಡುಬಂದಿದೆ. ಕಾರ್ಡ್‌ಗಳ ಮಾಹಿತಿ ಖರೀದಿಸುವವರು ವಂಚನೆ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಗ್ರೂಪ್​- ಐಬಿ ತಿಳಿಸಿದೆ.

ಈಗಾಗಲೇ ಗ್ರೂಪ್​ ಐಬಿ, ಭಾರತದ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡಕ್ಕೆ (ಸಿಇಆರ್​ಟಿ-ಇನ್) ಈ ಬಗ್ಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಭಾರತದಲ್ಲಿ ಡಿಜಿಟಲ್ ಪಾವತಿಗಳ ಏರಿಕೆ ಮತ್ತು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪಾವತಿ ಕಾರ್ಡ್‌ಗಳನ್ನು ಸುರಕ್ಷಿತವಾಗಿ ಬಳಸುವ ಅರಿವಿನ ಕೊರತೆಯಿದೆ. ಹೀಗಾಗಿಯೇ ಭಾರತೀಯ ಮೂಲದ ಪಾವತಿ ಕಾರ್ಡ್​​ಗಳ ಮಾಹಿತಿ ಸೋರಿಕೆಯು ಪ್ರಮುಖ ಆಕರ್ಷಣೆಯಾಗಿದೆ.

ಗ್ರೂಪ್-ಐಬಿ ಪ್ರಕಾರ, ಕಾರ್ಡ್ ಸಂಖ್ಯೆಗಳು, ಮುಕ್ತಾಯ ದಿನಾಂಕಗಳು, ಸಿವಿವಿ / ಸಿವಿಸಿ ಕೋಡ್‌ಗಳು, ಕಾರ್ಡ್‌ದಾರರ ಪೂರ್ಣ ಹೆಸರು, ಅವರ ಇಮೇಲ್‌ಗಳು, ಫೋನ್ ಸಂಖ್ಯೆಗಳು ಮತ್ತು ವಿಳಾಸಗಳಂತಹ ಕೆಲವು ಹೆಚ್ಚುವರಿ ಮಾಹಿತಿ ಸಹ ಸೋರಿಕೆಯಲ್ಲಿದೆ ಎಂದು ವಿವರಿಸಿದೆ.

ಫೆಬ್ರವರಿ 5ರಂದು “INDIA-BIG-MIX” ಹೆಸರಿನಡಿ (full name: [CC] INDIA-BIG-MIX (FRESH SNIFFED CVV) INDIA/EU/WORLD MIX, HIGH VALID 80-85%, 2020-02 (​NON-REFUNDABLE BASE) ಅತ್ಯಂತ ಜನಪ್ರಿಯ ಭೂಗತ ಕಾರ್ಡ್‌ಶಾಪ್‌ಗಳಲ್ಲಿ ಒಂದಾದ ಜೋಕರ್ ಸ್ಟ್ಯಾಶ್‌ನಲ್ಲಿ ಮಾರಾಟವಾಯಿತು ಎಂದು ಅಪ್​ಲೋಡ್ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.