ETV Bharat / business

ಕೃಷಿ ಒಪ್ಪಂದ ನಮ್ಮ ಸಮಸ್ಯೆಗಳಿಗೆ ಫುಲ್​ಸ್ಟಾಪ್ ಹಾಕಬಹುದು: ಬಾಂಗ್ಲಾಗೆ ಭಾರತ ಆಹ್ವಾನ

ಕೃಷಿ ವಲಯದಲ್ಲಿ ದ್ವಿಪಕ್ಷೀಯ ಸಹಕಾರವು ಪ್ರಸ್ತುತ ಆರ್ಥಿಕ ಸವಾಲುಗಳನ್ನು ನಿವಾರಿಸಲು ದಾರಿ ಮಾಡಿಕೊಡುತ್ತದೆ. ಕೃಷಿ ರಫ್ತು ಸೇರಿದಂತೆ ಅನೇಕ ಉತ್ಪನ್ನಗಳಲ್ಲಿ ಭಾರತವು ಬಾಂಗ್ಲಾಕ್ಕೆ ಸುಂಕ ರಹಿತ ಮಾರುಕಟ್ಟೆ ಪ್ರವೇಶ ನೀಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಿಳಿಸಿದರು.

Goyal
ಗೋಯಲ್
author img

By

Published : Dec 22, 2020, 8:12 PM IST

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಹಯೋಗದೊಂದಿಗೆ ಕೆಲಸ ಮಾಡಬೇಕಿದೆ. ಇದು ಎರಡೂ ದೇಶಗಳಿಗೆ ಬದಲಾವಣೆ ತರಬಹುದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಸಿಐಐ ಆಯೋಜಿಸಿದ್ದ ಕೃಷಿ ವಲಯದ ಭಾರತ - ಬಾಂಗ್ಲಾದೇಶ ಡಿಜಿಟಲ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೃಷಿ ವಲಯದಲ್ಲಿ ದ್ವಿಪಕ್ಷೀಯ ಸಹಕಾರವು ಪ್ರಸ್ತುತ ಆರ್ಥಿಕ ಸವಾಲುಗಳನ್ನು ನಿವಾರಿಸಲು ದಾರಿ ಮಾಡಿಕೊಡುತ್ತದೆ. ಕೃಷಿ ರಫ್ತು ಸೇರಿದಂತೆ ಅನೇಕ ಉತ್ಪನ್ನಗಳಲ್ಲಿ ಭಾರತವು ಬಾಂಗ್ಲಾಕ್ಕೆ ಸುಂಕ ರಹಿತ ಮಾರುಕಟ್ಟೆ ಪ್ರವೇಶ ನೀಡಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಚಿನ್ನ, ಬೆಳ್ಳಿ ದರದಲ್ಲಿ ಹಠಾತ್ ಬದಲಾವಣೆ: ಇಲ್ಲಿದೆ ಇಂದಿನ ಗೋಲ್ಡ್ ರೇಟ್​!

ನಾವಿಬ್ಬರೂ ಕೃಷಿಯಲ್ಲಿ ಹೆಚ್ಚಿನ ಸಹಯೋಗದೊಂದಿಗೆ ಕೆಲಸ ಮಾಡಬೇಕಾಗಿದೆ. ಕೃಷಿಯು ನಮ್ಮ ಎರಡು ದೇಶಗಳ ನಡುವಿನ ಸಂಬಂಧ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಕೃಷಿ ಕ್ಷೇತ್ರವು ದೊಡ್ಡ ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳನ್ನು ಹೊಂದಿದೆ. ಆರ್ಥಿಕತೆಯ ಪ್ರಮುಖ ವಲಯ ಆಗಿರುವುದರಿಂದ, ಈ ವಲಯದಲ್ಲಿ ದ್ವಿಪಕ್ಷೀಯ ಸಹಕಾರವು ನಮ್ಮ ದೇಶಗಳು ಎದುರಿಸುತ್ತಿರುವ ಪ್ರಸ್ತುತ ಆರ್ಥಿಕ ಸವಾಲುಗಳನ್ನು ನಿವಾರಿಸಲು ದಾರಿ ಮಾಡಿಕೊಡುತ್ತದೆ ಎಂದು ಸಚಿವರು ಹೇಳಿದರು.

ದೇಶಗಳ ನಡುವೆ ತಡೆ ರಹಿತ ವ್ಯಾಪಾರ ಖಾತ್ರಿಪಡಿಸುವಲ್ಲಿ ಬಾಂಗ್ಲಾದೇಶಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ವೆಬ್‌ನಾರ್‌ನಲ್ಲಿ ಮಾತನಾಡಿದ ಬಾಂಗ್ಲಾದೇಶ ವಾಣಿಜ್ಯ ಸಚಿವ ಟಿಪ್ಪು ಮುನ್ಷಿ, ಸೆಣಬು ಸೇರಿದಂತೆ ಇತರ ಕ್ಷೇತ್ರಗಳ ಮೇಲೆ ಭಾರತ ಡಂಪಿಂಗ್ ವಿರೋಧಿ ಸುಂಕ ವಿಧಿಸುವುದನ್ನು ಪ್ರಸ್ತಾಪಿಸಿದರು. ಸುಂಕ ಹೇರುವುದು ಬಾಂಗ್ಲಾ ರಫ್ತುದಾರರ ಮೇಲೆ ಪರಿಣಾಮ ಬೀರಿದೆ. ಸರಕುಗಳ ಮೇಲೆ ಇದ್ದಕ್ಕಿದ್ದಂತೆ ರಫ್ತು ನಿರ್ಬಂಧ ಹೇರುವ ಮೊದಲು ಬಂಗಾಳದೇಶಕ್ಕೆ ಮಾಹಿತಿ ನೀಡುವಂತೆ ಭಾರತಕ್ಕೆ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.