ETV Bharat / business

ಹೊಸ ಐಟಿ ನಿಯಮ.. 'ಸೋಷಿಯಲ್ ಮೀಡಿಯಾ ಮಧ್ಯವರ್ತಿ' ಬಳಕೆದಾರರ ಮಿತಿ 50 ಲಕ್ಷಕ್ಕೆ ಸೀಮಿತ- ಕೇಂದ್ರ - ಸೋಷಿಯಲ್ ಮೀಡಿಯಾ ಪ್ಲಾಟ್​​ಫಾರ್ಮ್​​

ವಾರದ ಆರಂಭದಲ್ಲಿ ಘೋಷಿಸಲಾದ ಹೊಸ ಸಾಮಾಜಿಕ ಮಾಧ್ಯ ನಿಯಮಗಳಿಗೆ ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಸಂಪರ್ಕ ಅಧಿಕಾರಿ ಮತ್ತು ಕುಂದುಕೊರತೆ ಅಧಿಕಾರಿಗಳನ್ನು ನೇಮಿಸಬೇಕಿದೆ. ಈ ಮೂವರೂ ಅಧಿಕಾರಿಗಳು ಭಾರತದಲ್ಲಿ ನೆಲೆಸಬೇಕಾಗುತ್ತದೆ..

social media
social media
author img

By

Published : Feb 27, 2021, 6:40 PM IST

ನವದೆಹಲಿ : 'ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿ' ವ್ಯಾಖ್ಯಾನಿಸಿದ ಕೇಂದ್ರ ಸರ್ಕಾರ, 50 ಲಕ್ಷ ನೋಂದಾಯಿತ ಬಳಕೆದಾರರ ಮಿತಿ ನಿಗದಿಪಡಿಸಿದೆ. ಇದು ಸಾಮಾಜಿಕ ಮಾಧ್ಯಮ ವೇದಿಕೆಗಳ ದುರುಪಯೋಗ ತಡೆಯಲು ಪ್ರಯತ್ನಿಸುವ ಹೊಸ ಐಟಿ ನಿಯಮಗಳ ಅಡಿಯಲ್ಲಿ ಹೆಚ್ಚುವರಿ ಕಟ್ಟುಪಾಡು ಮತ್ತು ಅಂಗೀಕಾರ ಪಾಲಿಸಬೇಕಾಗುತ್ತದೆ.

ವಾರದ ಆರಂಭದಲ್ಲಿ ಘೋಷಿಸಲಾದ ಹೊಸ ಸಾಮಾಜಿಕ ಮಾಧ್ಯಮ ನಿಯಮಗಳಿಗೆ ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಸಂಪರ್ಕ ಅಧಿಕಾರಿ ಮತ್ತು ಕುಂದುಕೊರತೆ ಅಧಿಕಾರಿಗಳನ್ನು ನೇಮಿಸಬೇಕಿದೆ. ಈ ಮೂವರೂ ಅಧಿಕಾರಿಗಳು ಭಾರತದಲ್ಲಿ ನೆಲೆಸಬೇಕಾಗುತ್ತದೆ ಎಂದು ಹೇಳಿದೆ.

ಮಾಸಿಕ ಅನುಸರಣೆಯ ವರದಿ ಮತ್ತು ಪೂರ್ವಭಾವಿಯಾಗಿ ತೆಗೆದು ಹಾಕಲಾದ ವಿಷಯಗಳ ವಿವರಗಳನ್ನು ಸಹ ಪ್ರಕಟಿಸಬೇಕಾಗುತ್ತದೆ. ಪ್ರಸ್ತುತ, ದೇಶದಲ್ಲಿ 53 ಕೋಟಿ ವಾಟ್ಸ್‌ಆ್ಯಪ್ ಬಳಕೆದಾರರು, 44.8 ಕೋಟಿ ಯೂಟ್ಯೂಬ್ ಬಳಕೆದಾರರು, 41 ಕೋಟಿ ಫೇಸ್‌ಬುಕ್ ಚಂದಾದಾರರು, 21 ಕೋಟಿ ಇನ್‌ಸ್ಟಾಗ್ರಾಮ್ ಗ್ರಾಹಕರು ಹಾಗೂ 1.75 ಕೋಟಿ ಖಾತೆದಾರರು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿದ್ದಾರೆ.

'ಕೇಂದ್ರ ಸರ್ಕಾರವು ಭಾರತದಲ್ಲಿ ಐವತ್ತು ಲಕ್ಷ ನೋಂದಾಯಿತ ಬಳಕೆದಾರರನ್ನು ಸಾಮಾಜಿಕ ಮಾಧ್ಯಮ ಮಧ್ಯವರ್ತಿಯನ್ನು ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿ ಎಂದು ಪರಿಗಣಿಸುವ ಮಿತಿ ಸೂಚಿಸುತ್ತದೆ' ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಗುರುವಾರವಷ್ಟೇ ಕೇಂದ್ರ ಸರ್ಕಾರವು ಸಾಮಾಜಿಕ ಮಾಧ್ಯಮ ಮತ್ತು ಸ್ಟ್ರೀಮಿಂಗ್ ಕಂಪನಿಗಳನ್ನು ನಿಯಂತ್ರಿಸುವ ನಿಯಮಗಳನ್ನು ಬಿಗಿಗೊಳಿಸುವುದಾಗಿ ಘೋಷಿಸಿತು. ವಿವಾದಾತ್ಮಕ ವಿಷಯವನ್ನು ತ್ವರಿತವಾಗಿ ತೆಗೆದು ಹಾಕುವುದು, ಕುಂದುಕೊರತೆ ಪರಿಹಾರ ಅಧಿಕಾರಿಗಳನ್ನು ನೇಮಿಸುವುದು ಮತ್ತು ತನಿಖೆಗೆ ಸಹಕರಿಸುವುದು ಅಗತ್ಯವಾಗಿರುತ್ತದೆ ಎಂದು ಹೇಳಿತ್ತು.

ಇದನ್ನೂ ಓದಿ: SBI ಗ್ರಾಹಕರ ಗಮನಕ್ಕೆ! ಸೇವಿಂಗ್​ ಅಕೌಂಟ್​​ ಇಮೇಲ್​ ಐಡಿ ನವಿಕರೀಸುವ ವಿಧಾನ ಇಲ್ಲಿದೆ

ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ವ್ಯಾಪಕವಾಗಿ ಏರಿಕೆ ಕಂಡಿರುವ ಫೇಸ್‌ಬುಕ್, ವಾಟ್ಸಾಆ್ಯಪ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ನಿಯಂತ್ರಣದಲ್ಲಿ ಇರಿಸಲು ಉದ್ದೇಶಿಸಲಾಗಿದೆ. ಪ್ಲಾಟ್‌ಫಾರ್ಮ್‌ನಲ್ಲಿ ನಡೆಯುವ ವಿಷಯಕ್ಕೆ ಅವುಗಳನ್ನೇ ಹೆಚ್ಚುವರಿ ಜವಾಬ್ದಾರಿಯುತವಾಗಿ ಮಾಡಲಾಗುತ್ತಿದೆ.

ಸಾಮಾಜಿಕ ಮಾಧ್ಯಮ ಕಂಪನಿಗಳು ಸರ್ಕಾರ ಅಥವಾ ನ್ಯಾಯಾಲಯದ ಆದೇಶಗಳಿಂದ ಹೊರಬಂದ ವಿವಾದಾತ್ಮಕ ವಿಷಯಗಳನ್ನು 36 ಗಂಟೆಗಳ ಒಳಗೆ ತೆಗೆದುಹಾಕಬೇಕು. ಇತ್ತೀಚಿನ ಮಧ್ಯವರ್ತಿ ನಿಯಮಗಳ ಪ್ರಕಾರ ದೂರು ಸ್ವೀಕರಿಸಿದ 24 ಗಂಟೆಗಳ ಒಳಗೆ ಮಾರ್ಫಡು ಮಾಡಿದ ಫೋಟೋಗಳ ಪೋಸ್ಟ್‌ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ನ್ಯಾಯಾಲಯ ಅಥವಾ ಸರ್ಕಾರ ಕೇಳುವ ಸಾಮಾಜಿಕ ಮಾಧ್ಯಮ ವೇದಿಕೆಗಳು ಭಾರತದ ಸಾರ್ವಭೌಮತ್ವ, ರಾಷ್ಟ್ರದ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆ ಹಾಳುಮಾಡುವ ಚೇಷ್ಟೆಯ ಮಾಹಿತಿಯ ಮೊದಲ ಮೂಲವನ್ನು ಬಹಿರಂಗಪಡಿಸುವ ಅಗತ್ಯವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.