ETV Bharat / business

ಉತ್ಪನ್ನದ ಮೂಲ ದೇಶದ ಮಾಹಿತಿ ಹಂಚಿಕೆಗೆ ಫ್ಲಿಪ್​ಕಾರ್ಟ್​, ಅಮೆಜಾನ್​ ಅಭಿಪ್ರಾಯ ಕೇಳಿದ ಕೇಂದ್ರ - country of origin

ಉತ್ಪನ್ನಗಳ ಮೇಲೆ ಮೂಲ ದೇಶವನ್ನು ಉಲ್ಲೇಖಿಸುವುದು ಖರೀದಿದಾರರಿಗೆ ವಸ್ತು ಖರೀದಿಸುವಾಗ ವಿವೇಚನಯುಕ್ತ ನಿರ್ಧಾರ ತೆಗೆದುಕೊಳ್ಳಲು ನೆರವಾಗುತ್ತದೆ. ಇ-ಕಾಮರ್ಸ್ ಕಂಪನಿಗಳ ಅಭಿಪ್ರಾಯಗಳನ್ನು ಈ ವಿಷಯದ ಬಗ್ಗೆ ಮತ್ತು ಸ್ಥಳೀಯ ವಿಷಯಗಳ ಬಗ್ಗೆಯೂ ಕೋರಲಾಗಿದೆ ಎಂದು ಮೂಲವೊಂದು ತಿಳಿಸಿದೆ..

E-commerce companies
ಇ ಕಾಮರ್ಸ್​
author img

By

Published : Jun 24, 2020, 8:34 PM IST

ನವದೆಹಲಿ : ಮಹತ್ವದ ಬೆಳವಣಿಗೆ ಒಂದರಲ್ಲಿ ಇ-ಕಾಮರ್ಸ್​ಗಳಾದ ಅಮೆಜಾನ್​, ಫ್ಲಿಪ್​ಕಾರ್ಟ್​ನಂತಹ ಸಂಸ್ಥೆಗಳಿಗೆ ಉತ್ಪನ್ನಗಳ ಮೂಲ ದೇಶದ ಮಾಹಿತಿ ಹಂಚಿಕೆಯ ಬಗ್ಗೆ ಅವುಗಳ ಅಭಿಪ್ರಾಯ ಕೇಳಲು ಕೇಂದ್ರ ಸರ್ಕಾರ ಇಚ್ಛಿಸಿದೆ.

ಮೂಲಗಳ ಪ್ರಕಾರ, ಡಿಪಿಐಐಟಿ ಬುಧವಾರ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ತಮ್ಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡುವ ಪ್ರತಿ ಉತ್ಪನ್ನದ ಮೇಲೆ 'ಉತ್ಪನ್ನಗಳ ಮೂಲ ದೇಶ​'ದ (ಕಂಟ್ರಿ ಆಫ್ ಒರಿಜನ್) ಬಗ್ಗೆ ತಮ್ಮ ಅಭಿಮತ ತಿಳಿಸುವಂತೆ ಪ್ರಸ್ತಾಪಿಸಿದೆ.

ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಪ್ರಚಾರದ (ಡಿಪಿಐಐಟಿ) ಅಧಿಕಾರಿಗಳು ಮತ್ತು ಅಮೆಜಾನ್, ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್, ಟಾಟಾ ಕ್ಲಿಕ್, ಪೇಟಿಎಂ, ಉಡಾನ್, ಪೆಪ್ಪರ್‌ಫ್ರೈ ಸೇರಿ ಇ-ವಾಣಿಜ್ಯ ಕಂಪನಿಗಳ ಪ್ರತಿನಿಧಿಗಳ ಜತೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಿ ಈ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ಲಡಾಖ್‌ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷದ ನಂತರ ಚೀನಿ ಸರಕುಗಳ ಬಹಿಷ್ಕಾರದ ಅಭಿಯಾನದ ನಡುವೆ ಈ ಆದೇಶ ಹೊರ ಬಂದಿದೆ.

ಕೇಂದ್ರ ಸರ್ಕಾರಿ ಇ-ಮಾರುಕಟ್ಟೆಯಲ್ಲಿ (GeM-Government e-Marketplace) ಉತ್ಪನ್ನಗಳ ನೋಂದಣಿಗೆ ಉತ್ಪನ್ನದ ಮೂಲ ದೇಶದ ಮಾಹಿತಿ ಕಡ್ಡಾಯ ಮಾಡಿ ಆದೇಶ ಹೊರಡಿಸಿತ್ತು. ಉತ್ಪನ್ನಗಳ ಮೇಲೆ ಮೂಲ ದೇಶವನ್ನು ಉಲ್ಲೇಖಿಸುವುದು ಖರೀದಿದಾರರಿಗೆ ವಸ್ತು ಖರೀದಿಸುವಾಗ ವಿವೇಚನಾಯುಕ್ತ ನಿರ್ಧಾರ ತೆಗೆದುಕೊಳ್ಳಲು ನೆರವಾಗುತ್ತದೆ. ಇ-ಕಾಮರ್ಸ್ ಕಂಪನಿಗಳ ಅಭಿಪ್ರಾಯಗಳನ್ನು ಈ ವಿಷಯದ ಬಗ್ಗೆ ಮತ್ತು ಸ್ಥಳೀಯ ವಿಷಯಗಳ ಬಗ್ಗೆಯೂ ಕೋರಲಾಗಿದೆ ಎಂದು ಮೂಲವೊಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.