ನವದೆಹಲಿ: ಈ ಹಿಂದೆ ಘೋಷಿಸಲಾಗಿದ್ದ 2030ರಿಂದ ಶೇ 20ರಷ್ಟು ಎಥೆನಾಲ್ ಪೆಟ್ರೋಲ್ ಮಿಶ್ರಣ ಮಾಡುವ ಗಡುವನ್ನು ಮುಂಚಿತವಾಗಿ ತರಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ.
ಪೆಟ್ರೋಲ್‌ನೊಂದಿಗೆ ಬೆರಸಲು ಬೇಕಾದ ಹೆಚ್ಚಿನ ಪ್ರಮಾಣದ ಎಥೆನಾಲ್ ಉತ್ಪಾದಿಸಲು ಸಕ್ಕರೆ ಕಾರ್ಖಾನೆಗಳು ಹೆಚ್ಚುವರಿ ಕಬ್ಬಿಗೆ ಅನುವು ಮಾಡಿಕೊಡುವ ಗಡುವನ್ನು ಈಗ 2025ಕ್ಕೆ ಅಥವಾ 2023ಕ್ಕೂ ಮೊದಲೇ ಮುಂದುವರಿಸಬಹುದು ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ 2022ರ ವೇಳೆಗೆ ಶೇ 10ರಷ್ಟು ಮತ್ತು 2030ರ ವೇಳೆಗೆ 20 ಪ್ರತಿಶತದಷ್ಟು ಗುರಿ ನಿಗದಿಪಡಿಸಲಾಗಿತ್ತು. ಆದರೆ ಬ್ರೆಜಿಲ್‌ನಂತಹ ರಾಷ್ಟ್ರಗಳಲ್ಲಿ ಮಿಶ್ರಣವನ್ನು ಸತತವಾಗಿ ಬಳಸಲಾಗುತ್ತಿದೆ. ಹೀಗಾಗಿ, ಹಂತ-ಹಂತವಾಗಿ ಹೋಗುವ ಬದಲು ನೇರವಾಗಿ 20 ಪ್ರತಿಶತಕ್ಕೆ ವಲಸೆ ಹೋಗುವ ಯೋಜನೆ ಕೇಂದ್ರ ಇರಿಸಿಕೊಂಡಿದೆ.
ಗುಡ್ ಬೈ 2020: ಕೊರೊನಾಗಿಂತ ಮಹಾರೋಗ ನಿರುದ್ಯೋಗ.. ಎಲ್ಲೆಂದರಲ್ಲಿ ವಲಸೆ, 'No Job', ಸ್ಯಾಲರಿ ಕಟ್!
ಡಬ್ಲ್ಯುಟಿಒ ಷರತ್ತು ಪ್ರಕಾರ, 2023ಕ್ಕೂ ಮುನ್ನ ಹೆಚ್ಚಿನ ಸಕ್ಕರೆ ಮಾರಾಟ ಮಾಡಲು ಮತ್ತು ಸಾಗಿಸಲು ಭಾರತಕ್ಕೆ ಆರ್ಥಿಕ ನೆರವು ನೀಡಲು ಆಗುವುದಿಲ್ಲ. ಮಾರಾಟವಾಗದ ಸಕ್ಕರೆಯ ದಾಸ್ತಾನಿಂದ 20,000 ಕೋಟಿ ರೂ.ಯಷ್ಟು ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ಹೊರೆಯಾಗಲಿದೆ. ಇದು ಅವರ ದ್ರವ್ಯತೆಯ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ ರೈತರ ಕಬ್ಬಿನ ಬೆಲೆಯ ಬಾಕಿ ಸಂಗ್ರಹ ಬೆಳೆಯುತ್ತಿದೆ. ಇದನ್ನು ಮನಗಂಡ ಕೇಂದ್ರ ಗಡುವಿಗೂ ಮೊದಲೇ ಶೇ20ರಷ್ಟು ಮಿಶ್ರಣದ ಮೊರೆಹೋಗುತ್ತಿದೆ.