ನವದೆಹಲಿ: ಮಲೇರಿಯಾ ನಿವಾರ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಮೇಲಿನ ರಫ್ತು ನಿಷೇಧವನ್ನು ಸರ್ಕಾರ ತಕ್ಷಣದಿಂದ ಹಿಂದಕ್ಕೆ ಪಡೆದಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 25ರಂದು ಕೇಂದ್ರ ಸರ್ಕಾರ ಈ ಔಷಧ ರಫ್ತು ನಿಷೇಧಿಸಿತ್ತು.
ಹೈಡ್ರಾಕ್ಸಿಕ್ಲೋರೋಕ್ವಿನ್ ಎಪಿಐ (ಸಕ್ರಿಯ ಔಷಧೀಯ ಪದಾರ್ಥಗಳು) ರಫ್ತು ನೀತಿ ಮತ್ತು ಅದರ ಸೂತ್ರೀಕರಣಗಳನ್ನು ತಕ್ಷಣದಿಂದ ಜಾರಿಗೆ ತರಲು ನಿಷೇಧಿಸಲಾಗಿದೆ ಎಂದು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ (ಡಿಎಫ್‌ಎಫ್‌ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.