ETV Bharat / business

ವಿಮಾನ ಹಾರಾಟ ನಿರ್ಬಂಧ ಮತ್ತಷ್ಟು ಸಡಿಲಿಕೆ: ಪ್ರಯಾಣಿಕರಿಗೆ ಟಿಕೆಟ್​ ಲಭ್ಯತೆ ಇನ್ನಷ್ಟು ಸರಳ, ಅಗ್ಗ

ಈಗಿನ ಶೇ70ರಷ್ಟು ವಿಮಾನಗಳ ಕಾರ್ಯಚರಣೆಗೆ ಶೇ 10ರಷ್ಟು ವಿಮಾನಗಳು ಸೇರ್ಪಡೆ ಆಗಲಿವೆ. ಇದರಿಂದ ಪ್ರಯಾಣಿಕರಿಗೆ ಟಿಕೆಟ್ ಲಭ್ಯತೆ ಸರಳವಾಗಲಿದ್ದು, ಬಹು ದಿನಗಳವರೆಗೆ ಕಾಯುವಿಕೆ ತಪ್ಪಲಿದೆ. ಏರ್​ಲೈನ್ಸ್​ಗಳ ನಡುವೆ ಸ್ಪರ್ಧಾತ್ಮಕತೆ ಏರ್ಪಟ್ಟು ಟಿಕೆಟ್ ದರ ತಗ್ಗಬಹುದು.

flights
ವಿಮಾನ
author img

By

Published : Dec 3, 2020, 5:56 PM IST

ನವದೆಹಲಿ: ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿರುವ ದೇಶೀಯ ವಿಮಾನಗಳ ಸಂಖ್ಯೆ ಮಿತಿಯನ್ನು ತಮ್ಮ ಕೋವಿಡ್ ಪೂರ್ವದ ಶೇ 70ರಿಂದ 80ಕ್ಕೆ ಹೆಚ್ಚಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಕೊರೊನಾ ವೈರಸ್ ಪರಿಸ್ಥಿತಿಯ ಮಧ್ಯೆ ಚಾಲ್ತಿಯಲ್ಲಿ ಇರುವ ಬೇಡಿಕೆಯಿಂದಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳು ತಮ್ಮ ಕೋವಿಡ್ ಪೂರ್ವ ದೇಶೀಯ ಪ್ರಯಾಣಿಕರ ಶೇ 70ರಷ್ಟು ವಿಮಾನಗಳನ್ನು ನಿರ್ವಹಿಸಬಹುದು ಎಂದು ಸಚಿವರು ನವೆಂಬರ್ 11ರಂದು ಹೇಳಿದ್ದರು.

-70 ಡಿಗ್ರಿಯಲ್ಲಿ ವ್ಯಾಕ್ಸಿನ್​ ಸ್ಟೋರೇಜ್​ನ ಯಕ್ಷ ಪ್ರಶ್ನೆ: 'ಭಾರತದಲ್ಲಿ ಕೊರೊನಾ ಲಸಿಕೆ ಲಭ್ಯತೆಗೆ ಬದ್ಧ'- ಫಿಜರ್ ಅಭಯ

ಪುರಿ ಗುರುವಾರ ಟ್ವೀಟ್ ಮಾಡಿದ್ದು, ದೇಶೀಯ ಕಾರ್ಯಾಚರಣೆಗಳು ಮೇ 25ರಂದು 30 ಸಾವಿರ ಪ್ರಯಾಣಿಕರೊಂದಿಗೆ ಪುನರಾರಂಭಗೊಂಡವು. ಈಗ 2020ರ ನವೆಂಬರ್ 30ರ ವೇಳೆಗೆ ಗರಿಷ್ಠ 2.52 ಲಕ್ಷ ಮುಟ್ಟಿದೆ ಎಂದರು.

ನಾಗರಿಕ ವಿಮಾನಯಾನ ಸಚಿವಾಲಯವು ಈಗ ದೇಶೀಯ ವಾಹಕಗಳಿಗೆ ತಮ್ಮ ಕಾರ್ಯಾಚರಣೆಯನ್ನು ಅಸ್ತಿತ್ವದಲ್ಲಿರುವ ಶೇ 70ರಷ್ಟರಿಂದ ಕೋವಿಡ್​ ಪೂರ್ವ ಅನುಮೋದಿತ ಸಾಮರ್ಥ್ಯದ ಶೇ 80ಕ್ಕೆ ಹೆಚ್ಚಿಸಲು ಅವಕಾಶ ನೀಡುತ್ತಿದೆ ಎಂದು ಹೇಳಿದರು.

ಕೊರೊನಾ ವೈರಸ್ ಪ್ರೇರೇಪಿತ ಲಾಕ್‌ಡೌನ್‌ನಿಂದಾಗಿ ಎರಡು ತಿಂಗಳ ಅಂತರದ ಬಳಿಕ ಮೇ 25ರಿಂದ ದೇಶೀಯ ಪ್ರಯಾಣಿಕರ ಸೇವೆಗಳನ್ನು ಪುನರಾರಂಭಿಸಿತ್ತು. ವಿಮಾನಯಾನ ಸಂಸ್ಥೆಗಳು ತಮ್ಮ ಕೋವಿಡ್​ ಪೂರ್ವ ದೇಶೀಯ ವಿಮಾನಗಳಲ್ಲಿ ಶೇ 33ಕ್ಕಿಂತ ಅಧಿಕ ಆಸನಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಯಿತು. ಜೂನ್ 26ರಂದು ಇದನ್ನು ಶೇ 45ಕ್ಕೆ ಮತ್ತು ಸೆಪ್ಟೆಂಬರ್ 2ರಂದು ಶೇ 60ಕ್ಕೆ ಹೆಚ್ಚಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.