ETV Bharat / business

ಮತ್ಸ್ಯ ಕೃಷಿಕರಿಗೆ ಸಿಹಿ ಸುದ್ದಿ: ಮೀನು ಖರೀದಿಗೆ ಇ - ಟ್ರೇಡಿಂಗ್ ಪ್ಲಾಟ್​ಫಾರ್ಮ್​ ಆರಂಭಿಸಿದ ಕೇಂದ್ರ - ಮೀನುಗಾರಿಕೆ

ಇ-ಸ್ಯಾಂಟಾ​​ ಪೋರ್ಟಲ್ ಅಕ್ವಾಕಲ್ಚರ್‌ನಲ್ಲಿ ಎನ್​​ಸಿಎಸ್​​ಎ (NaCSA) ರೈತರ ವ್ಯಾಪಾರ ಹೆಚ್ಚಿಸಲು ಎಲೆಕ್ಟ್ರಾನಿಕ್ ಪರಿಹಾರ ಸೂಚಿಸುತ್ತದೆ. ಇದರ ನೋಡಲ್ ಬಾಡಿ, ನ್ಯಾಷನಲ್ ಸೆಂಟರ್ ಫಾರ್ ಸಸ್ಟೈನಬಲ್ ಅಕ್ವಾಕಲ್ಚರ್ (ನಾಸಿಎಸ್ಎ) ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದಲ್ಲಿರುವ ಸಾಗರೋತ್ತರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಂಪಿಇಡಿಎ) ಭಾಗವಾಗಿದೆ.

ಮತ್ಸ್ಯ ಕೃಷಿ
ಮತ್ಸ್ಯ ಕೃಷಿ
author img

By

Published : Apr 13, 2021, 7:10 PM IST

ನವದೆಹಲಿ: ದೇಶದ ಆಕ್ವಾ ರೈತರ ಮತ್ತು ಮೀನುಗಾರರನ್ನು ಖರೀದಿದಾರ ಮತ್ತು ರಫ್ತುದಾರರ ಜತೆ ಸಂಪರ್ಕ ಸಾಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇ-ಸ್ಯಾಂಟಾ ಎಂಬ ಇ-ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಪ್ರಾರಂಭಿಸಿದೆ.

ಖರೀದಿದಾರರಿಗೆ ಉತ್ಪನ್ನದ ಮೂಲ ಕಂಡು ಹಿಡಿಯುವ ಸಾಮರ್ಥ್ಯದೊಂದಿಗೆ ಮಾರಾಟಗಾರರಿಂದ ನೇರವಾಗಿ ಕೊಳ್ಳಲು ಅವಕಾಶ ನೀಡುತ್ತದೆ. ಇದು ಉತ್ಪನ್ನದ ಜಾಗತಿಕ ವ್ಯಾಪಾರದ ಪ್ರಮುಖ ಅಂಶವಾಗಿದೆ.

ಇ-ಸ್ಯಾಂಟಾ ಪೋರ್ಟಲ್ ಅಕ್ವಾಕಲ್ಚರ್‌ನಲ್ಲಿ ಎನ್​​ಸಿಎಸ್​​ಎ (NaCSA) ರೈತರ ವ್ಯಾಪಾರ ಹೆಚ್ಚಿಸಲು ಎಲೆಕ್ಟ್ರಾನಿಕ್ ಪರಿಹಾರ ಸೂಚಿಸುತ್ತದೆ. ಇದರ ನೋಡಲ್ ಬಾಡಿ, ನ್ಯಾಷನಲ್ ಸೆಂಟರ್ ಫಾರ್ ಸಸ್ಟೈನಬಲ್ ಅಕ್ವಾಕಲ್ಚರ್ (ನಾಸಿಎಸ್ಎ) ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದಲ್ಲಿರುವ ಸಾಗರೋತ್ತರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಂಪಿಇಡಿಎ) ಭಾಗವಾಗಿದೆ.

ಇ-ಸ್ಯಾಂಟಾ ಆದಾಯ, ಜೀವನಶೈಲಿ, ಸ್ವಾವಲಂಬನೆ, ಗುಣಮಟ್ಟ, ಉತ್ಪನ್ನಗಳ ಪತ್ತೆಹಚ್ಚುವಿಕೆ ವೃದ್ಧಿಸುತ್ತದೆ ಮತ್ತು ನಮ್ಮ ಆಕ್ವಾ ರೈತರಿಗೆ ಹೊಸ ಆಯ್ಕೆಗಳನ್ನು ಒದಗಿಸುತ್ತದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದರು.

ಹೆಚ್ಚು ಔಪಚಾರಿಕ ಮತ್ತು ಕಾನೂನುಬದ್ಧವಾಗಿರಲು ವೇದಿಕೆಯು ಬಾಯಿ ಮಾತಿನಿಂದ ವ್ಯಾಪಾರ ಮಾಡುವ ಸಾಂಪ್ರದಾಯಿಕ ವಿಧಾನ ಬದಲಾಯಿಸುತ್ತದೆ ಎಂದು ಗೋಯಲ್ ಹೇಳಿದರು.

ಹೊಸ ಇ-ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಅಪಾಯವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯ ಹೆಚ್ಚಿಸುತ್ತದೆ. ಉತ್ಪನ್ನಗಳು ಮತ್ತು ಮಾರುಕಟ್ಟೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ತಪ್ಪು ನಡಾವಳಿಗಳ ವಿರುದ್ಧ ಭದ್ರತೆ ನೀಡುತ್ತದೆ. ದೇಶದಿಂದ ಅಕ್ವಾ ಮತ್ತು ಸಾಗರ ಉತ್ಪನ್ನಗಳ ವ್ಯಾಪಾರ ಹಾಗೂ ರಫ್ತು ಪ್ರಕ್ರಿಯೆಯಲ್ಲಿ ಸುಲಭತೆ ಖಚಿತಪಡಿಸುತ್ತದೆ ಎಂದು ಸಚಿವರು ಹೇಳಿದರು.

ಹೊಸ ಉಪಕರಣವು ಖರೀದಿದಾರರು ಮತ್ತು ಮಾರಾಟಗಾರರ ನಡುವಿನ ವಿಭಜನೆಯ ಅಂತರ ನಿವಾರಿಸುತ್ತದೆ. ಮಧ್ಯವರ್ತಿಗಳನ್ನು ಮಾರುಕಟ್ಟೆಯಿಂದ ಹೊರಹಾಕುತ್ತದೆ ಎಂದು ಗೋಯಲ್ ಹೇಳಿದರು.

ರೈತರು ಮತ್ತು ರಫ್ತುದಾರರ ನಡುವೆ ಹಣವಿಲ್ಲದ, ಸಂಪರ್ಕವಿಲ್ಲದ ಮತ್ತು ಕಾಗದರಹಿತ ಎಲೆಕ್ಟ್ರಾನಿಕ್ ವ್ಯಾಪಾರ ವೇದಿಕೆ ಒದಗಿಸುವ ಮೂಲಕ ಇದು ಸಾಂಪ್ರದಾಯಿಕ ಆಕ್ವಾ ಕೃಷಿಯಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.