ನವದೆಹಲಿ: ವರ್ತಕರು ತಮ್ಮ ಗ್ರಾಹಕರನ್ನು ತಿಳಿಯಲು (ಕೆವೈಸಿ) ಚಿನ್ನಾಭರಣ ಖರೀದಿ ವೇಳೆ ಪಾನ್ ಅಥವಾ ಆಧಾರ್ ಸಂಖ್ಯೆ ಕಡ್ಡಾಯ ಎಂಬ ವದಂತಿ ನಡುವೆ ಕೇಂದ್ರ ಸರ್ಕಾರವು ತನ್ನ ಸ್ಪಷ್ಟನೆ ನೀಡಿದೆ.
ಚಿನ್ನ, ಬೆಳ್ಳಿ, ಆಭರಣಗಳು ಅಥವಾ 2 ಲಕ್ಷ ರೂ.ಗಿಂತ ಕಡಿಮೆ ಬೆಲೆಬಾಳುವ ರತ್ನ ಮತ್ತು ಹರಳು ಖರೀದಿಸಿದರೆ ಕಡ್ಡಾಯವಾಗಿ ಗ್ರಾಹಕರ ಪಾನ್ ಅಥವಾ ಆಧಾರ್ ಅಗತ್ಯವಿಲ್ಲ ಎಂದು ಹಣಕಾಸು ಸಚಿವಾಲಯದ ಕಂದಾಯ ಇಲಾಖೆ (ಡಿಒಆರ್) ಸ್ಪಷ್ಟಪಡಿಸಿದೆ.
ಪಿಎಂಎಲ್ ಕಾಯ್ದೆ 2002ರ ಅನ್ವಯ 2020ರ ಡಿಸೆಂಬರ್ 28ರಂದು ಹೊರಡಿಸಲಾದ ಅಧಿಸೂಚನೆಯಡಿ ಚಿನ್ನಾಭರಣ, ಅಮೂಲ್ಯವಾದ ಲೋಹ ಮತ್ತು ಹರಳುಗಳ ವಹಿವಾಟಿನ ಮೊತ್ತ 10 ಲಕ್ಷ ರೂ.ಗಿಂತ ಅಧಿಕವಾಗಿ ಇದ್ದಾಗ ಮಾತ್ರವೇ ಕೆವೈಸಿ ಮತ್ತು ಗ್ರಾಹಕ ದಾಖಲೆ ಪಡೆಯುವ ಅವಶ್ಯಕತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸಂಕ್ರಾಂತಿಗೆ ಅಗ್ಗದ ಬೆಲೆಯ ಗ್ಯಾಲಕ್ಸಿ ಎಸ್21 ಸರಣಿಯ 5ಜಿ ಮೊಬೈಲ್ ಲಾಂಚ್ : ಫೀಚರ್, ದರ ಹೀಗಿದೆ..
ಎಫ್‌ಎಟಿಎಫ್ (ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್) ಅವಶ್ಯಕತೆ ಆಗಿದೆ. ಜಾಗತಿಕ ಹಣ ವರ್ಗಾವಣೆ ಮತ್ತು ಭಯೋತ್ಪಾದಕ ಹಣಕಾಸು ಮೇಲ್ವಿಚಾರಕ, ಭಯೋತ್ಪಾದಕ ಧನಸಹಾಯ ಮತ್ತು ಮನಿ ಲಾಂಡರಿಂಗ್‌ನಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವ ಉದ್ದೇಶದಿಂದ ಅಂತರ್ ಸರ್ಕಾರಿ ಸಂಸ್ಥೆ ಅಂತಾರಾಷ್ಟ್ರೀಯ ಮಾನದಂಡಗಳನ್ನು ನಿಗದಿಪಡಿಸುತ್ತದೆ ಎಂದು ಹೇಳಿದ್ದಾರೆ.
ಚಿನ್ನ, ಬೆಳ್ಳಿ, ಆಭರಣ, ಅಮೂಲ್ಯವಾದ ರತ್ನ ಮತ್ತು ಹರಳುಗಳ 2 ಲಕ್ಷ ರೂ.ಗಿಂತ ಕಡಿಮೆ ನಗದು ಖರೀದಿಗೆ ಕೆವೈಸಿ ಕಡ್ಡಾಯ ಎಂಬ ಕೆಲವು ಮಾಧ್ಯಮಗಳ ವರದಿಗಳು ಆಧಾರರಹಿತವಾಗಿವೆ. ಈ ಬಗ್ಗೆ ತಪ್ಪು ಮಾಹಿತಿ ಹಬ್ಬಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.