ETV Bharat / business

ಮೋದಿ ಮೇನಿಯಾದ 'ಜಿಎಸ್​ಟಿ'ಗೆ ನಾಳೆ 2ರ ಪ್ರಾಯ..

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ವ್ಯವಸ್ಥೆ ಜಿಎಸ್​ಟಿ ಎರಡು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಹಣಕಾಸು ಸಚಿವಾಲಯ 'ಜಿಎಸ್​ಟಿ ದಿನ'ವೆಂದು ಆಚರಿಸಲಿದೆ. ಅಂಬೇಡ್ಕರ್​ ಭವನದಲ್ಲಿ ಕೇಂದ್ರ ಹಾಗೂ ರಾಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಈ ವಿಶೇಷ ಕಾರ್ಯಕ್ರಮ ಆಯೋಜಿಸಿದೆ.

author img

By

Published : Jun 30, 2019, 5:25 PM IST

ಸಾಂದರ್ಭಿಕ ಚಿತ್ರ

ನವದೆಹಲಿ: ಹಲವು ಸುತ್ತಿನ ಹಗ್ಗಜಗ್ಗಾಟದ ನಡುವೆ ಜಾರಿಗೆ ಬಂದ 'ಒಂದು ದೇಶ ಒಂದು ತೆರಿಗೆ' ವ್ಯವಸ್ಥೆಯ 'ಸರಕು ಮತ್ತು ಸೇವಾ ತೆರಿಗೆ'ಗೆ (ಜಿಎಸ್​ಟಿ) ನಾಳೆಯ ಜುಲೈ 1ಕ್ಕೆ ಎರಡು ವರ್ಷ ಪೂರೈಸಲಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ವ್ಯವಸ್ಥೆಯಾದ ಜಿಎಸ್​ಟಿ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯ 'ಜಿಎಸ್​ಟಿ ದಿನ'ವೆಂದು ಆಚರಿಸಲಿದೆ. ಅಂಬೇಡ್ಕರ್​ ಭವನದಲ್ಲಿ ಕೇಂದ್ರ ಹಾಗೂ ರಾಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಈ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಈ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಹಲವು ವಿತ್ತೀಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಎರಡು ವರ್ಷ ಪೂರೈಸಿರುವ ಜಿಎಸ್​ಟಿ ಪದ್ಧತಿಯ ಕುರಿತು ವಿಶೇಷ ಉಪನ್ಯಾಸ ಮಾಲಿಕೆ ಆಯೋಜಿಸಲಾಗಿದೆ. ಈ ಅವಧಿಯಲ್ಲಿ ಜಿಎಸ್​ಟಿ ನಡೆದು ಬಂದ ಹಾದಿ, ತೆಗೆದುಕೊಂಡ ತೆರಿಗೆ ಸುಧಾರಣಾ ನಿರ್ಧಾರಗಳು, ಜಿಎಸ್​ಟಿಆರ್​- 3ಬಿ ಮತ್ತು ಜಿಎಸ್​ಟಿಆರ್​-1 ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬರಲಿವೆ.

2017ರ ಜೂನ್​​​ 30- ಜುಲೈ 1ರಂದು ಸಂಸತ್ ಭವನದ ಸೆಂಟ್ರಲ್ ಹಾಲ್​​ನಲ್ಲಿ ನಡೆದ ಸಮಾರಂಭದಲ್ಲಿ ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಜಿಎಸ್​ಟಿ ತೆರಿಗೆ ವ್ಯವಸ್ಥೆಗೆ ಚಾಲನೆ ನೀಡಿದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.