ETV Bharat / business

GDP-8ಕ್ಕೆ ಕುಸಿದರೂ 2030ರಲ್ಲಿ ಸಾಧಿಸುವುದನ್ನು 2022ರಲ್ಲೇ ಸಾಧಿಸುತ್ತೇವೆ: RBI ಮಾಜಿ ಗವರ್ನರ್​ ವಿಶ್ವಾಸ

author img

By

Published : Jan 16, 2021, 1:24 PM IST

ಭಾರತೀಯ ರಿಸರ್ವ್ ಬ್ಯಾಂಕ್​ನ ಮಾಜಿ ಗವರ್ನರ್ ಸಿ ರಂಗರಾಜನ್ ಅವರು ಈನಾಡು ಸಹಾಯಕ ಸಂಪಾದಕ ಎನ್ ವಿಶ್ವ ಪ್ರಸಾದ್ ಅವರೊಂದಿಗೆ ಭಾರತೀಯ ಆರ್ಥಿಕತೆಯ ಸ್ಥಿತಿ, ಕಡಿಮೆ ಸಾಲ, ಹೂಡಿಕೆ ವಸ್ತುಸ್ಥಿತಿ ಮತ್ತು ವಿವಾದಾತ್ಮಕ ಕೃಷಿ ಕಾನೂನುಗಳು ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದರು. ರಂಗರಾಜನ್​​ ಅವರ ಸಂದರ್ಶನದ ಸಾರಾ ಇಲ್ಲಿದೆ.

C Rangarajan
ರಂಗರಾಜನ್​

ಹೈದರಾಬಾದ್: ಕೋವಿಡ್ -19 ಸೋಂಕಿನಿಂದ ರಕ್ಷಿಸಲು ಸರ್ಕಾರ ವ್ಯಾಕ್ಸಿನೇಷನ್ ಚಾಲನೆ ನೀಡುತ್ತಿದ್ದಂತೆ, ಈಗ ಎಲ್ಲರ ಗಮನವು ತೀವ್ರ ಸಂಕೋಚನದತ್ತ ಧುಮುಕಿದ ಆರ್ಥಿಕತೆಯತ್ತ ಸಾಗಿದೆ.

ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್​ನ ಮಾಜಿ ಗವರ್ನರ್ ಸಿ ರಂಗರಾಜನ್ ಅವರು 'ಈನಾಡು' ಸಹಾಯಕ ಸಂಪಾದಕ ಎನ್ ವಿಶ್ವ ಪ್ರಸಾದ್ ಅವರೊಂದಿಗೆ ಭಾರತೀಯ ಆರ್ಥಿಕತೆಯ ಸ್ಥಿತಿ, ಕಡಿಮೆ ಸಾಲ, ಹೂಡಿಕೆ ವಸ್ತುಸ್ಥಿತಿ ಮತ್ತು ವಿವಾದಾತ್ಮಕ ಕೃಷಿ ಕಾನೂನುಗಳು ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದರು. ರಂಗರಾಜನ್​​ ಅವರ ಸಂದರ್ಶನದ ಸಾರ ಇಲ್ಲಿದೆ.

ಆರ್ಥಿಕ ಚೇತರಿಕೆ ಮತ್ತು ನಿರ್ಬಂಧ ಹಿಂತೆಗೆತ

ಎಲ್ಲದಕ್ಕೂ ಮೊದಲನೆಯದಾಗಿ, ನಾವು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಸ್ವರೂಪವನ್ನ ಅರ್ಥಮಾಡಿಕೊಳ್ಳಬೇಕಿದೆ. ನನಗೆ ನೆನಪುಳಿಯುವಂತೆ ಮೊದಲನೇ ಬಾರಿಗೆ, ಆರ್ಥಿಕ ಬಿಕ್ಕಟ್ಟು ಆರ್ಥಿಕೇತರ ಅಂಶದಿಂದ ಸಂಭವಿಸಿದೆ. ಇದು ಸಾಂಕ್ರಾಮಿಕ ರೋಗದಿಂದ ಆಗಿದ್ದು ಎಂಬುದು ನಮ್ಮೆಲ್ಲರಿಗೂ ಅರಿವಾಗಬೇಕು.

ಆರ್ಥಿಕತೆಯು ಮೇಲೇಳುತ್ತಿದೆ ಎಂದು ತೋರಿಸುವ ಅನೇಕ ಸೂಚಕಗಳಿವೆ. ಆದರೆ, ನಾನು ಹೇಳುವುದು, ಆರ್ಥಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಒಂದು ಪ್ರಮುಖ ಅಂಶ ಎಂದರೆ ನಿರ್ಬಂಧಗಳನ್ನು ತೆಗೆದುಹಾಕುವಾಗ ನಾವು ಅನುಸರಿಸಬೇಕಾದ ಮಾರ್ಗ.

ಅದರ ಅಂತ್ಯವನ್ನು ನಾವು ನೋಡಿದ್ದೇವೆ (ಕೋವಿಡ್ -19). ಆದ್ದರಿಂದ ನಾವು ಪ್ರಸಕ್ತ ಹಣಕಾಸು ವರ್ಷದ 4ನೇ ತ್ರೈಮಾಸಿಕ ಅವಧಿಯಲ್ಲಿ ಬಹುತೇಕ ಎಲ್ಲ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವ ಸ್ಥಿತಿಯಲ್ಲಿರುತ್ತೇವೆ ಎಂಬುದು ಒಬ್ಬರ ಆಸೆಯ.

ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವುದರೊಂದಿಗೆ ಆರ್ಥಿಕತೆಯು ಮೇಲ್ಮುಖವಾಗುತ್ತೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ನಾವು ಕೇವಲ 7.7ರಷ್ಟು ಕುಗ್ಗುವಿಕೆಯೊಂದಿಗೆ ಕೊನೆಗೊಳ್ಳಬಹುದು.

ಸರ್ಕಾರದ ಬಳಕೆಯ ವೆಚ್ಚ

ಸರ್ಕಾರದ ಬಳಕೆಯ ವೆಚ್ಚ ಕಡಿತದ ಸಂಖ್ಯೆಗಳು ಏನನ್ನಾದರೂ ಬಹಿರಂಗಪಡಿಸುತ್ತವೆ. ಮೊದಲನೆಯದಾಗಿ, ಖಾಸಗಿ ಬಳಕೆ ವೆಚ್ಚದ ಕಡಿತ ಅಥವಾ ಕುಸಿತವನ್ನು ಸುಲಭವಾಗಿ ವಿವರಿಸಬಹುದು. ಏಕೆಂದರೆ, ಬಳಕೆ ವೆಚ್ಚ ಆದಾಯದ ಕಾರ್ಯವಾಗಿದೆ. ಜನರ ಆದಾಯವು ಬೆಳೆಯದಿದ್ದರೆ ಸ್ವಯಂಚಾಲಿತವಾಗಿ ಖಾಸಗಿ ಬಳಕೆ ವೆಚ್ಚವು ಕುಸಿಯುತ್ತದೆ.

ಮೊದಲಾರ್ಧದಲ್ಲಿ ಕುಸಿತದ ಪ್ರಮಾಣವು 15.2 ಪ್ರತಿಶತದಷ್ಟಿದೆ. ಬಹುಶಃ, ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕಗಳಲ್ಲಿ ಆರ್ಥಿಕತೆಯು ಹೆಚ್ಚಾದಂತೆ ಖಾಸಗಿ ಬಳಕೆಯ ವೆಚ್ಚವೂ ಹೆಚ್ಚಾಗುತ್ತದೆ.

ಆದರೆ, ಈ ಸಂಖ್ಯೆಯಲ್ಲಿ ಗೊಂದಲದ ಸಂಗತಿಯೆಂದರೆ ಸರ್ಕಾರದ ಬಳಕೆಯ ವೆಚ್ಚದಲ್ಲಿನ ಕುಸಿತ. ಆರ್ಥಿಕತೆಯ ಪುನಶ್ಚೇತನ ಪ್ರಾರಂಭಿಸಲು ಮತ್ತು ಆರ್ಥಿಕತೆಗೆ ಉತ್ತೇಜನ ನೀಡಲು ಅವರು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎನ್ನುತ್ತ ಸರ್ಕಾರ ಮುಂದೆ ಬರುತ್ತಿದೆ.

ಸಿ ರಂಗರಾಜನ್ ಜತೆ 'ಈನಾಡು' ಸಹಾಯಕ ಸಂಪಾದಕರ ಸಂದರ್ಶನ

ಸುಮಾರು 22 ಪ್ರತಿಶತದಷ್ಟು ಅಂತಿಮ ಬಳಕೆಯ ವೆಚ್ಚದ ಕುಸಿತದ ಜೊತೆಗೆ ರಾಷ್ಟ್ರೀಯ ಆದಾಯ ಅಂಕಿ- ಅಂಶಗಳಿಂದ ಹೊರಬರುವ ಇತರ ಪ್ರಮುಖ ದತ್ತಾಂಶಗಳಲ್ಲಿ ಸಾರ್ವಜನಿಕ ಆಡಳಿತ, ರಕ್ಷಣಾ ವಲಯ ಮತ್ತು ಇತರ ಕೆಲವು ಉಪ ಕ್ಷೇತ್ರಗಳಲ್ಲಿ ಮೊದಲ ಎರಡೂ ತ್ರೈಮಾಸಿಕದಲ್ಲಿ ಕ್ಷೀಣಿಸಿದೆ. ಮೊದಲ ತ್ರೈಮಾಸಿಕದಲ್ಲಿ ಶೇ 10.3ರಷ್ಟು ಕುಸಿದದ್ದು, ಎರಡನೇ ತ್ರೈಮಾಸಿಕದಲ್ಲೂ ಶೇ 12.2ರಷ್ಟು ಇಳಿದಿದೆ.

ಈ ನಿರ್ದಿಷ್ಟ ವಲಯವು ನೀತಿ ಚಾಲಿತವಾಗಿದ್ದು, ಇದರ ಬಹುಪಾಲು ಸಾರ್ವಜನಿಕ ಆಡಳಿತ ಮತ್ತು ರಕ್ಷಣೆಗೆ ಮಾತ್ರವಾಗಿದೆ. ಆದ್ದರಿಂದ, ಸರ್ಕಾರವು ಅಷ್ಟು ಖರ್ಚು ಮಾಡಬೇಕಾಗಿಲ್ಲ ಎಂಬುದು ಕಾಣುತ್ತದೆ.

ಮುನ್ಸೂಚನೆಯಂತೆ ಆರ್ಥಿಕ ಚಟುವಟಿಕೆಯಲ್ಲಿ ಮೇಲ್ಮುಖದ ಚಿನ್ಹೆಗಳು ಗೋಚರಿಸಬೇಕಾದರೆ, ಸರ್ಕಾರವು ತನ್ನ ವೆಚ್ಚದ ಪ್ರಮಾಣ ಹೆಚ್ಚಿಸಬೇಕು ಎಂದು ನಾನು ಭಾವಿಸುತ್ತೇನೆ. 4ನೇ ತ್ರೈಮಾಸಿಕದಲ್ಲಿ ಖರ್ಚಿನ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸುವ ಸರ್ಕಾರದ ಕ್ರಮಗಳು ಒಟ್ಟಾರೆ ವರ್ಷದ ಆರ್ಥಿಕತೆಯು ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ.

ಬ್ಯಾಂಕ್​ ಸಾಲದ ಬೆಳವಣಿಗೆ

ಆರ್ಥಿಕತೆಯ ಆರೋಗ್ಯ ನಿರ್ಣಯಿಸುವ ನಿಯತಾಂಕಗಳಲ್ಲಿ ಬ್ಯಾಂಕ್ ಸಾಲದ ಬೆಳವಣಿಗೆ ಕುಸಿಯುತ್ತಲೇ ಇದೆ. ಎರಡನೇ ತ್ರೈಮಾಸಿಕದಲ್ಲಿ ಇದು ಶೇ 5.2ರಷ್ಟು ಕುಸಿದಿದ್ದು, ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಶೇ 8.8ರಷ್ಟು ಕುಸಿತ ಕಂಡಿದೆ ಎಂಬ ಈನಾಡು ಪ್ರಶ್ನೆಗೆ, 'ಈ ಬಗ್ಗೆ ನಾವು ಅಚ್ಚರಿಪಡಬೇಕಾಗಿಲ್ಲ' ಎಂಬುದು ರಂಗರಾಜನ್​ ಅವರ ಸರಳ ಉತ್ತರ.

ನೋಡಿ, ಒಟ್ಟು ಆರ್ಥಿಕ ಚಟುವಟಿಕೆಯು ಶೇ 24ರಷ್ಟು ಕುಸಿದ ತ್ರೈಮಾಸಿಕದಲ್ಲಿ ಯಾರೊಬ್ಬರು ಆಶ್ಚರ್ಯಪಡಬೇಕಾಗಿಲ್ಲ. ಯಾವುದೇ ಸಾಲ ಮೇಲೇಳುವುದಲ್ಲ. ಸಂಸ್ಥೆಗಳಾಗಲ್ಲಿ, ಕೈಗಾರಿಕಾ ಘಟಕಗಳಾಗಲಿ ತಮ್ಮ ಉತ್ಪಾದನೆ ಹೆಚ್ಚಿಸಲು ಮತ್ತು ಮಾರಾಟ ಮಾಡಲು ಬ್ಯಾಂಕಿಂಗ್ ವ್ಯವಸ್ಥೆಯಿಂದ ಸಾಲ ಪಡೆಯುತ್ತವೆ. ಕೋವಿಡ್ -19ರ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಯಾವುದೇ ಬೇಡಿಕೆಯಿಲ್ಲದಿದ್ದಾಗ ಉತ್ಪಾದನೆಯ ಅಗತ್ಯವೂ ಇಲ್ಲ ಸಾಲದ ಅವಶ್ಯಕತೆಯೂ ಇಲ್ಲ.

ಆದರೂ ವಿತ್ತೀಯ ನೀತಿಯು ಎರಡು ರಂಗಗಳಲ್ಲಿ ಪರವಾಗಿವೆ. ಮೊದಲನೆಯದಾಗಿ, ಪಾಲಿಸಿ ದರವನ್ನು ಗಣನೀಯವಾಗಿ ಇಳಿಕೆ ಮತ್ತು ಎರಡನೆಯದಾಗಿ, ನಗದು ಮೀಸಲು ಅನುಪಾತದಂತಹ ಕ್ರಮಗಳ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಗೆ ಸಾಕಷ್ಟು ದ್ರವ್ಯತೆ ಒದಗಿಸುವಲ್ಲಿ. ಈ ಎರಡೂ ಕ್ರಮಗಳು ಬ್ಯಾಂಕ್​​ಗಳಿಗೆ ಸಾಲ ನೀಡುವ ಸಾಮರ್ಥ್ಯ ಏರಿಕೆಯಾಗಿದೆ. ಹೆಚ್ಚಿದ ದ್ರವ್ಯತೆಯಿಂದಾಗಿ ಹೆಚ್ಚಿನ ಕ್ರೆಡಿಟ್ ಲಭ್ಯವಾಗಬಹುದು, ಆದರೆ ಸಾಲದ ಬೇಡಿಕೆ ಬ್ಯಾಂಕ್​ಗಳತ್ತ ಬರಬೇಕಾಗಿದೆ.

ಇದನ್ನೂ ಓದಿ: ವಾಟ್ಸ್‌ಆ್ಯಪ್‌ನಿಂದ ಖಾಸಗಿ ಮಾಹಿತಿ ಸುರಕ್ಷತೆ ಹುಡುಕುತ್ತ ಹೊರಟ ಜನಕ್ಕೆ 'ಸಿಗ್ನಲ್‌' ಸಮಸ್ಯೆ!

ನನ್ನ ದೃಷ್ಟಿಯಲ್ಲಿ ಬ್ಯಾಂಕ್​ಗಳು ಸಹ ಪೂರ್ವಭಾವಿಯಾಗಿ ಸಿದ್ಧವಾಗಬೇಕು. ಸಾಲ ತೆಗೆದುಕೊಳ್ಳಲು ಯಾರಾದರೂ ಬ್ಯಾಂಕಿಗೆ ಬರುತ್ತಾರೆ ಎನ್ನುವಂತೆ ಕಾಯುತ್ತ ಕೂರುವುದಲ್ಲ. ಒಂದು ಹೆಜ್ಜೆ ಮುಂದೆಹೋಗಿ, ಸಾಲದ ಲಭ್ಯತೆಯನ್ನು ಉತ್ತಮವಾಗಿ ಬಳಸಿಕೊಳ್ಳುವ ಹಲವು ಮಾರ್ಗಗಳನ್ನು ಘೋಷಿಸಬಹುದು.

ಹೂಡಿಕೆ ಇಂಜಿನ್​​

ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆರ್ಥಿಕ ಬೆಳವಣಿಗೆಯ ಮುಖ್ಯ ಚಾಲಕ ಶಕ್ತಿ ಹೂಡಿಕೆ. ಜಿಡಿಪಿಗೆ ಹೂಡಿಕೆಯ ಅನುಪಾತದಿಂದಾಗಿ ಸ್ಥಿರವಾಗಿ ಕುಸಿಯುತ್ತಾ ಸಾಗುತ್ತಿದೆ. ಅಂದರೆ ಹೂಡಿಕೆದಾರರು ಹೂಡಿಕೆ ಮನಸ್ಸು ಮಾಡಿ ಮುಂದೆ ಬರುತ್ತಿಲ್ಲ.

ನನ್ನ ಪ್ರಕಾರ, 2005-06 ಮತ್ತು 2006-07ರಲ್ಲಿ ಗರಿಷ್ಠ ಮಟ್ಟದಲ್ಲಿ ಹೂಡಿಕೆ ದರವು ತುಂಬಾ ಹೆಚ್ಚಗಾತ್ತಿದೆ. ಆದರೆ, 2011-12ರಿಂದ ಇದು ಕುಸಿಯುತ್ತಿದೆ, ಅದರಲ್ಲೂ ವಿಶೇಷವಾಗಿ ಕಳೆದ ಕೆಲವು ವರ್ಷಗಳಲ್ಲಿ ಇನ್ನೂ ಹೆಚ್ಚಾಗಿದೆ. ಹೂಡಿಕೆ ಸ್ನೇಹಿ ವಾತಾವರಣ ಸೃಷ್ಟಿಸುವ ಮೂರು ಅಂಶಗಳು ನಮ್ಮ ಮುಂದಿದೆ. ಆರ್ಥಿಕೇತರ ಅಂಶಗಳು, ಬೆಂಬಲಿತ ನೀತಿಯ ಚೌಕಟ್ಟು ಹಾಗೂ ಭವಿಷ್ಯದ ಬಗ್ಗೆ ಜನರಲ್ಲಿ ಸಕಾರಾತ್ಮಕ ಗ್ರಹಿಕೆ ಮೂಡಿಸುವುದು.

ಆರ್ಥಿಕೇತರ ಅಂಶದಿಂದ ನಾನು ಏನು ಹೇಳಲು ಬಯಸುತ್ತೇನೆ ಎಂದರೆ, ಜನರ ದುಡಿಮೆಯ ವಾತಾವರಣ ಶಾಂತಿಯುತವಾಗಿ ಇರಬೇಕು. ಸಂಘರ್ಷಗಳು ಆ ಕಡೆ ಸುಳಿಯದಿದ್ದರೇ ಹೆಚ್ಚಿನ ಹೂಡಿಕೆ ಮಾಡಲು ಜನರು ಸಿದ್ಧರಿರುತ್ತಾರೆ. ನಾವು ಬಹುಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಾಗಿರುವುದು, ನಾವು ಸಾಧ್ಯವಾದಷ್ಟು ವೇಗವಾಗಿ ಬೆಳೆಯಬೇಕು. ವೇಗವಾಗಿ ಬೆಳೆಯಬೇಕಾದರೆ ನಮಗೆ ಹೆಚ್ಚಿನ ಪ್ರಮಾಣದ ಹೂಡಿಕೆ ಬೇಕು. ದೊಡ್ಡ - ದೊಡ್ಡ ಹೂಡಿಕೆಗಳು ಮುಂದೆ ಬರಬೇಕಾದರೆ, ನಾವು ಉತ್ತಮ ಹೂಡಿಕೆ ವಾತಾವರಣ ನಿರ್ಮಿಸಬೇಕು.

ಭವಿಷ್ಯದ ಆರ್ಥಿಕ ವೃದ್ಧಿ

2020-21ರ ಅವಧಿಯಲ್ಲಿನ ಕುಸಿತವು ಶೇ 8ರಷ್ಟು ಇರಬಹುದು. 2020-21ರಲ್ಲಿನ ನಷ್ಟವನ್ನು ಸರಿದೂಗಿಸಲು 2021-22ರಲ್ಲಿ ನಾವು ಕನಿಷ್ಠ 8.7 ಪ್ರತಿಶತದಲ್ಲಿ ಬೆಳೆಯಬೇಕಾಗಿದೆ. ಆಗ ಮಾತ್ರ, 2021-22ರ ಅಂತ್ಯದ ವೇಳೆಗೆ ನಾವು 2019-20ರಲ್ಲಿ ಇದ್ದ ಸ್ಥಾನದಲ್ಲಿ ಇರುತ್ತೇವೆ. ಮುಂದಿನ ಹಣಕಾಸು ವರ್ಷದಲ್ಲಿ ಹೆಚ್ಚು ಅಗತ್ಯವಾದ ವಿ - ಆಕಾರದ ಚೇತರಿಕೆಯನ್ನು ಗಣನೆಗೆ ತೆಗೆದುಕೊಳ್ಳುವ ಮೂಲಕ ನಾನು ಹೇಳುತ್ತೇನೆ, 2021-22ರ ಅಂತ್ಯದ ವೇಳೆಗೆ ನಾವು 2019-20ರ ಮಟ್ಟದಲ್ಲಿ ಇರಬಹುದು.

ಕೇಂದ್ರ ಬಜೆಟ್​ ಪ್ರಾಧಾನ್ಯ

ನಾನು ಮೊದಲೇ ಹೇಳಿದಂತೆ, ಸರ್ಕಾರದ ಖರ್ಚಿನ ಮಟ್ಟವು ಗಣನೀಯವಾಗಿ ಹೆಚ್ಚಾಗಬೇಕು. ಸರ್ಕಾರದ ಖರ್ಚಿನ ನಡುವೆಯೂ ಬಂಡವಾಳ ವೆಚ್ಚವು ತೀವ್ರವಾಗಿ ಹೆಚ್ಚಾಗಬೇಕು. ಆಗ ಮಾತ್ರ ನಾವು 2019-20ರ ಕೊನೆಯಲ್ಲಿ ಇದ್ದ ಮಟ್ಟವನ್ನು 2021-22ರ ಕೊನೆಯಲ್ಲಿ ತಲುಪುವಷ್ಟು ವೇಗವಾಗಿ ಚಲಿಸಲು ಸಾಧ್ಯವಾಗುತ್ತದೆ.

ಕೋವಿಡ್ ಮತ್ತು ಬಡತನ

ಕೋವಿಡ್ -19 ಸೋಂಕಿಗೂ ಮುಂಚೆಯೇ ನಮ್ಮಲ್ಲಿ ಅಸಮಾನತೆಗಳು ಚಾಲ್ತಿಯಲ್ಲಿ ಇದ್ದವು. ಬಡತನ ರೇಖೆಗಿಂತ ಕೆಳಗಿರುವ ಜನರ ಬಗ್ಗೆ ಅನೇಕ ಅಂದಾಜುಗಳು ಶೇಕಡಾ ಇಪ್ಪತ್ತರಿಂದ ಮೂವತ್ತ ತನಕ ಬದಲಾಗುತ್ತವೆ.

ವಾಸ್ತವದಲ್ಲಿ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿರುವಾಗ ಬಡತನ ರೇಖೆಗಿಂತ ಕೆಳಗಿರುವ ಜನರ ಸಂಖ್ಯೆ ಕಡಿಮೆಯಾಗುತ್ತದೆ. 2005-06ರ ನಂತರದ ಅವಧಿಯಲ್ಲಿ ಆರ್ಥಿಕತೆಯು ಅತ್ಯಂತ ವೇಗವಾಗಿ ಬೆಳೆದಾಗ, ಬಡತನ ರೇಖೆಗಿಂತ ಕೆಳಗಿರುವ ಜನರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಬೆಳವಣಿಗೆಯ ದರವು ಶೇ -7.7ರಷ್ಟಿರುವ ವರ್ಷದಲ್ಲಿ ನ್ಯಾಚೂರಲಿ ಉದ್ಯೋಗಾವಕಾಶಗಳು ಕಡಿಮೆಯಾಗಿ ಅತ್ಯಂತ ಕಡಿಮೆ ಮತ್ತು ದುರ್ಬಲ ಹಾಗೂ ಬಡ ಸಮುದಾಯಗಳ ಮೇಲೆ ಇನ್ನೂ ಹೆಚ್ಚು ಪರಿಣಾಮ ಬೀರುತ್ತವೆ.

ಬಡತನದ ಕೂಪಕ್ಕೆ ನೂಕಲ್ಪಟ್ಟ ವಲಸಿಗ ಕಾರ್ಮಿಕ ಸಮುದಾಯಕ್ಕಿಂತ ಮತ್ತೊಂದು ಉತ್ತಮ ಉದಾಹರಣೆ ಇಲ್ಲ. ನಮ್ಮ ಸ್ವಂತ ಅಂದಾಜು ತಮಿಳುನಾಡಿನ ಪ್ರಕಾರವೇ 15 ಲಕ್ಷ ಜನರು ವಲಸೆ ಕಾರ್ಮಿಕರ ವರ್ಗಕ್ಕೆ ಸೇರಿದ್ದಾರೆ ಎಂದು ಹೇಳುತ್ತದೆ. ಕೋವಿಡ್ ಕಾರಣದಿಂದಾಗಿ ಇವರನ್ನು ಏಕಾ ಏಕಿ ಕೆಲಸ ಕಳೆದುಕೊಂಡರು. ಇಂತಹವರಿಗೆ ತಕ್ಷಣದ ಲಾಭದ ಉದ್ದೇಶಕ್ಕಾಗಿ ನಿರ್ದಿಷ್ಟ ಪ್ರಮಾಣದ ನಗದು ವಿತರಣೆ ಅಗತ್ಯವಿರುತ್ತದೆ.

ನೂತನ ಕೃಷಿ ಕಾನೂನು

ಸಮಸ್ಯೆಯೆಂದರೆ, ನಾವು ಕೈಗಾರಿಕೆಗಳಿಂದದ ಪ್ರಗತಿ ಹೊಂದಿಲ್ಲ. ಬಹುಸಂಖ್ಯೆಯ ಜನರನ್ನು ಕೃಷಿಯಿಂದ ಹೀರಿಕೊಳ್ಳುವಷ್ಟು ಅವುಗಳು ಬಲಶಾಲಿಯಾಗಿಲ್ಲ. ಇದರ ಪರಿಣಾಮವಾಗಿ ಹೆಚ್ಚು-ಹೆಚ್ಚು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಭೂಮಿಯ ಹಿಡುವಳಿಯ ಸರಾಸರಿ ಗಾತ್ರವು ಕಡಿಮೆಯಾಗುತ್ತಿದೆ. ಇದರತ್ತ ಗಮನಹರಿಸಬೇಕು. ಇಲ್ಲದಿದ್ದರೆ, ರೈತರು ಗಳಿಸುವ ಆದಾಯವು ಹೆಚ್ಚಾಗುವುದಿಲ್ಲ.

ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಮಂಡಿ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವನ್ನು ಯಾರೂ ಅನುಮಾನಿಸದಿದ್ದರೂ ಈ ನಿರ್ದಿಷ್ಟ ಸಮಯದಲ್ಲಿ ನನ್ನಲ್ಲಿರುವ ಒಂದು ಸಲಹೆಯೆಂದರೆ, ಬಹುಶಃ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಬೇಕೋ ಬೇಡವೋ ಎಂಬುದನ್ನು ಅವರಿಗೆ ಬೀಡಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.