ETV Bharat / business

ಹಳಿಗೆ ಬಾರದ ಆರ್ಥಿಕತೆ; 2ನೇ ತ್ರೈಮಾಸಿಕದಲ್ಲಿ ಜಿಡಿಪಿ 8.6ರಷ್ಟು ಕುಸಿತ! - ಜಿಡಿಪಿ ಶೇಕಡಾ 8.6 ರಷ್ಟು ಕುಸಿದಿರುವ ಸಾಧ್ಯತೆ

ಕೋವಿಡ್‌-19 ನೀಡಿರುವ ಮಹಾ ಹೊಡೆತದಿಂದ ದೇಶದ ಆರ್ಥಿಕತೆ ಇನ್ನೂ ಸರಿಯಾದ ಹಳಿಗೆ ಬರುವಂತೆ ಕಾಣುತ್ತಿಲ್ಲ. 2020ರ 2ನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡಾ 8.6 ರಷ್ಟು ಕುಸಿತ ಕಂಡಿದ್ದು, ಈ ನಕಾರಾತ್ಮಕ ಬೆಳವಣಿಗೆ ದೇಶದ ಇತಿಹಾಸದಲ್ಲೇ ಇದು ಮೊದಲು ಎನ್ನಲಾಗಿದೆ.

gdp-to-contract-8-dot-6-pc-in-q2-india-has-entered-recession-for-first-time-rbi-official
ಹಳಿಗೆ ಬಾರದ ಆರ್ಥಿಕತೆ; 2ನೇ ತ್ರೈಮಾಸಿಕದಲ್ಲಿ ಜಿಡಿಪಿ 8.6ರಷ್ಟು ಕುಸಿತ!
author img

By

Published : Nov 12, 2020, 2:03 PM IST

ಮುಂಬೈ(ಮಹಾರಾಷ್ಟ್ರ): 2020ರ ಜುಲೈ- ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇಕಡಾ 8.6 ರಷ್ಟು ಕುಸಿದಿರುವ ಸಾಧ್ಯತೆ ಇದೆ. ಕೋವಿಡ್‌-19 ನಿಂದಾಗಿ ಎರಡು ತ್ರೈಮಾಸಿಕಗಳಲ್ಲಿ ಇಷ್ಟೊಂದು ನಕಾರಾತ್ಮಕ ಬೆಳವಣಿಗೆ ಕಂಡಿರುವುದು ದೇಶದ ಇತಿಹಾಸದಲ್ಲೇ ಇದೇ ಮೊದಲು ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ - ಆರ್‌ಬಿಐನ ಮೂಲಗಳು ತಿಳಿಸಿವೆ.

ಬುಧವಾರ ಆರ್‌ಬಿಐ ಬಿಡುಗಡೆ ಮಾಡಿರುವ ತಿಂಗಳ ಬುಲೆಟಿನ್‌ನಲ್ಲಿ ಈ ಅಂಶ ಬಹಿರಂಗವಾಗಿದ್ದು, ಅಧಿಕಾರಿಗಳ ಈ ಮಾಹಿತಿ ಬಳಿಕ ಸಂಶೋಧಕರು ಮುಂದಿನ ದಿನಗಳಲ್ಲಿ ಜಿಡಿಪಿ ಯಾವ ರೀತಿಯ ಇರಲಿದೆ ಎಂಬುದನ್ನು ಈ ಅಂಕಿ ಅಂಶಗಳ ಆಧಾರ ಮೇಲೆ ಅಂದಾಜು ಮಾಡುತ್ತಿದ್ದಾರೆ.

ಮಹಾಮಾರಿ ಕೋವಿಡ್‌ ನಿಂದಾಗಿ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ 23.9ರಷ್ಟು ಕುಸಿತ ಕಂಡಿತ್ತು. 2020ರ ಹಣಕಾಸು ವರ್ಷದಲ್ಲಿ ಒಟ್ಟಾರೆಯಾಗಿ ದೇಶದ ಆರ್ಥಿಕತೆ ಶೇಕಡಾ 9.5 ರಷ್ಟು ಕುಸಿಯಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.

2020-21ರ ಮೊದಲ ತ್ರೈಮಾಸಿಕದಲ್ಲಿ ದೇಶ ತಾಂತ್ರಿಕವಾಗಿ ಆರ್ಥಿಕ ಹಿಂಜರಿತಕ್ಕೆ ಒಳಗಾಗಿತ್ತು. ದೇಶದ ಇತಿಹಾಸದಲ್ಲೇ ಇದು ಮೊದಲಾಗಿದ್ದು, ಎರಡನೇ ತ್ರೈಮಾಸಿಕದಲ್ಲೂ ಗಣನೀಯವಾಗಿ ಜಿಡಿಪಿ ಕುಸಿತ ಕಂಡಿದೆ ಎಂದು ಲೇಖಕ ಪಂಕಜ್‌ ಕುಮಾರ್‌ ಬರೆದಿರುವ 'ಎಕನಾಮಿಕ್‌ ಆ್ಯಕ್ಟಿವಿಟಿ ಇಂಡೆಕ್ಸ್‌' ಲೇಖನದಲ್ಲಿ ಉಲ್ಲೇಕಿಸಿದ್ದಾರೆ. ಅಧಿಕಾರಿಗಳ ಜಿಡಿಪಿ ಕುರಿತ ಮಾಹಿತಿಯನ್ನು ಈ ತಿಂಗಳ ಅಂತ್ಯದಲ್ಲಿ ಬಿಡುಗಡೆ ಮಾಡಲಿದ್ದಾರೆ.

ಆದರೂ ಕೂಡ ಈ ಎಲ್ಲ ಬೆಳವಣಿಗೆಗಳು ಕಡಿಮೆ ಅವಧಿಯಲ್ಲಿ ನಡೆದಿದ್ದು, ಮುಂದಿನ ದಿನಗಳಲ್ಲಿ ಯಥಾಸ್ಥಿತಿಗೆ ಬರುವ ಆಶಾಭಾವವನ್ನು ಹೊಂದಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.