ETV Bharat / business

4ನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಉತ್ತಮ, ವಾರ್ಷಿಕ ಕುಸಿತ ಮೈನಸ್ ಶೇ. 7.3ರಷ್ಟು- SBI ವರದಿ - ಜಿಡಿಪಿ ಬೆಳವಣಿಗೆ

ಕೋವಿಡ್​ ಎರಡನೇ ಅಲೆ ವಿರುದ್ಧ ಸ್ಥಳೀಯವಾಗಿ ಜಾರಿಗೊಂಡ ಲಾಕ್​ಡೌನ್​ಗಳು ಸೀಮಿತ ಪ್ರಭಾವ ಬೀರಿದವು. ಇದು ಎಸ್​​ಬಿಐನ ಅಂದಾಜು ತಲೆಕೆಳಗಾಗಿ ಮಾಡಿವೆ. ವಾಸ್ತವದಲ್ಲಿ ಲಾಕ್​ಡೌನ್​ ಬರು-ಬರುತ್ತಾ ರಾಷ್ಟ್ರೀಯ ಲಾಕ್‌ಡೌನ್ ಆಗಿ ಹೊರಹೊಮ್ಮುತ್ತಿದೆ..

GDP
GDP
author img

By

Published : May 25, 2021, 3:04 PM IST

ನವದೆಹಲಿ : ಭಾರತದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯಲ್ಲಿ ಸುಧಾರಣೆಯನ್ನು ನಿರೀಕ್ಷಿಸಿದೆ.

ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ. 1.3ರಷ್ಟು ಆಗಿರಲಿದೆ. ಈ ಹಿಂದಿನ ಸಂಶೋಧನಾ ವರದಿಯಲ್ಲಿ ಅಂದಾಜು ಶೇ. 1.1ರಷ್ಟು ಇರಲಿದೆ ಎಂದಿತ್ತು.

ಎಸ್‌ಬಿಐ ಕಳೆದ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು ಮೈನಸ್​ ಶೇ.7.3ರಷ್ಟು ನಷ್ಟವಾಗಲಿದೆ ಎಂದಿದೆ. ಆರ್​ಬಿಐ ಮೈನಸ್​ ಶೇ. 8ರಷ್ಟು ಇರಲಿದೆ ಎಂದು ಮುನ್ಸೂಚನೆ ನೀಡಿತ್ತು.

ಈ ಹಿಂದೆ ಪ್ರಕಟವಾದ ಸಿಎಸ್ಒ ಜಿಡಿಪಿ ಬೆಳವಣಿಗೆಯ ಮೈನಸ್ ಶೇ. 8ರಷ್ಟನ್ನು 2021ರ ಮೇ 31ರಂದು ಬಿಡುಗಡೆಯಾದ ನಂತರ ಮೇಲ್ಮುಖವಾಗಿ ಪರಿಷ್ಕರಣೆ ಕಾಣುವ ಸಾಧ್ಯತೆಯಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಮೂಹ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯಾ ಕಾಂತಿ ಘೋಷ್ ಹೇಳಿದ್ದಾರೆ.

2021ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯ ಅಂದಾಜುಗಳಲ್ಲಿನ ಯಾವುದೇ ಮೇಲ್ಮುಖ ಪರಿಷ್ಕರಣೆಯ ಒಂದು ಪರಿಣಾಮವೆಂದರೆ 2022ರ ವಿತ್ತೀಯ ವರ್ಷದ ಜಿಡಿಪಿ ಅಂದಾಜುಗಳಲ್ಲಿ ಪ್ರಮಾಣಾನುಗುಣ ಕುಸಿತ ಎಂದರು.

ಕೋವಿಡ್​ ಎರಡನೇ ಅಲೆ ವಿರುದ್ಧ ಸ್ಥಳೀಯವಾಗಿ ಜಾರಿಗೊಂಡ ಲಾಕ್​ಡೌನ್​ಗಳು ಸೀಮಿತ ಪ್ರಭಾವ ಬೀರಿದವು. ಇದು ಎಸ್​​ಬಿಐನ ಅಂದಾಜು ತಲೆಕೆಳಗಾಗಿ ಮಾಡಿವೆ. ವಾಸ್ತವದಲ್ಲಿ ಲಾಕ್​ಡೌನ್​ ಬರು-ಬರುತ್ತಾ ರಾಷ್ಟ್ರೀಯ ಲಾಕ್‌ಡೌನ್ ಆಗಿ ಹೊರಹೊಮ್ಮುತ್ತಿದೆ ಎಂದಿದ್ದಾರೆ.

ಓದಿ: ಕೋವಿಡ್​ನಿಂದ ಮೃತಪಟ್ಟ ನೌಕರರ ಕುಟುಂಬಗಳಿಗೆ ಸಂಬಳ ಮುಂದುವರಿಸಲು ಟಾಟಾ ಸ್ಟೀಲ್ ನಿರ್ಧಾರ

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ನಾಮಮಾತ್ರ ಜಿಡಿಪಿ 6 ಲಕ್ಷ ಕೋಟಿ ರೂ.ಗಳಷ್ಟು ನಷ್ಟವಾಗಬಹುದು. ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 11 ಲಕ್ಷ ಕೋಟಿ ರೂ. ನಷ್ಟಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಜನರು ಕೋವಿಡ್​ ಮಾರ್ಗದರ್ಶಿಗಳನ್ನು ಅನುಸರಿಸಿ ಮನೆಯಿಂದ ಕೆಲಸ ಮಾಡುವಲ್ಲಿ ನಿರತರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.