ನವದೆಹಲಿ: ರುಪೇ, ಯುಪಿಐನಂತಹ ವಹಿವಾಟು ಮೇಲೆ ಈ ಹಿಂದೆ ವಿಧಿಸಲಾಗಿದ್ದ ವ್ಯಾಪಾರಿ ವರ್ತಕರ ರಿಯಾಯಿತಿ ದರ (ಎಂಡಿಆರ್) ಶುಲ್ಕವನ್ನು ಜನವರಿ 1ರಿಂದ ಹಿಂದಕ್ಕೆ ತೆಗದುಕೊಳ್ಳಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಹೇಳಿದ್ದಾರೆ.
2020-21ರ ಬಜೆಟ್ ಮಂಡನೆಯ ಪೂರ್ವಭಾವಿಯಾಗಿ ಸಾರ್ವಜನಿಕ ವಲಯದ ಬ್ಯಾಂಕ್ಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, 50 ಕೋಟಿ ರೂ.ಗಿಂತ ಅಧಿಕ ವಾರ್ಷಿಕ ವಹಿವಾಟು ಹೊಂದಿರುವ ವ್ಯಾಪಾರಿ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಕಡಿಮೆ ವೆಚ್ಚದ ಡಿಜಿಟಲ್ ವಿಧಾನಗಳನ್ನು ಪಾವತಿಸಬೇಕು. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಅದರ ಸಹವರ್ತಿ ಬ್ಯಾಂಕ್ಗಳು ವಹಿವಾಟಿನ ವೆಚ್ಚ ಭರಿಸಬೇಕು ಎಂದು ತಿಳಿಸಿದ್ದಾರೆ.
ಎಂಡಿಆರ್ ಎಂದರೆ ಗ್ರಾಹಕರು ತನ್ನ ಕಾರ್ಡ್ ಅನ್ನು ವ್ಯಾಪಾರಿ ಪಾಯಿಂಟ್-ಆಫ್-ಸೇಲ್ಸ್ (ಪಿಒಎಸ್) ಟರ್ಮಿನಲ್‌ನಲ್ಲಿ ಸ್ವೈಪ್ ಮಾಡಿದಾಗ ವ್ಯಾಪಾರಿ ತನ್ನ ಸೇವಾ ಪೂರೈಕೆದಾರರಿಗೆ ಪಾವತಿಸಬೇಕಾದ ಮೊತ್ತವಾಗಿರುತ್ತದೆ. ಇದರ ಮೇಲಿನ ಎಂಡಿಆರ್ ಶುಲ್ಕ ತೆಗೆದುಹಾಕಲಾಗುತ್ತಿದೆ.
ಪ್ರತಿ ವಹಿವಾಟಿಗೆ ವ್ಯಾಪಾರಿ ಪಾವತಿಸುವ ಮೊತ್ತವು ಮೂರು ಪಾಲುದಾರರ ನಡುವೆ ಹಂಚಿಕೆಯಾಗುತ್ತದೆ. ಪಿಒಎಸ್ ಯಂತ್ರವನ್ನು ಸ್ಥಾಪಿಸುವ ಮಾರಾಟಗಾರ ಮತ್ತು ವೀಸಾ ಅಥವಾ ಮಾಸ್ಟರ್‌ಕಾರ್ಡ್‌ನಂತಹ ಕಾರ್ಡ್ ನೆಟ್‌ವರ್ಕ್ ಪೂರೈಕೆದಾರ. ಕ್ರೆಡಿಟ್ ಕಾರ್ಡ್‌ಗಳಲ್ಲಿನ ಎಂಡಿಆರ್ ವಹಿವಾಟಿನ ಮೊತ್ತದ ಶುಲ್ಕವು ಶೇ 2ವರೆಗೆ ಇರುತ್ತದೆ. ಭೀಮ್ ಯುಪಿಐ, ಯುಪಿಐ ಕ್ಯೂಆರ್ ಕೋಡ್, ಆಧಾರ್ ಫೇ, ಡೆಬಿಟ್ ಕಾರ್ಡ್, ಎನ್ಇಎಫ್ಟಿ, ಆರ್ಟಿಜಿಎಸ್ ಸೇರಿದಂತೆ ಇತರ ಪಾವತಿ ವಹಿವಾಟುಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ.