ETV Bharat / business

ಭಾರತದಲ್ಲಿ 'ವಾಕ್​ ಸ್ವಾತಂತ್ರ್ಯ'ಕ್ಕೆ ತೀವ್ರ ಹೊಡೆತ ಬಿದ್ದಿದೆ: RBI ಮಾಜಿ ಗವರ್ನರ್ ರಾಜನ್ ಗುಡುಗು - ರಘುರಾಮ್ ರಾಜನ್ ಲಿಂಕ್ಡ್ ಪೋಸ್ಟ್

ದಿ ಯೂನಿವರ್ಸಿಟಿ ಆಫ್ ಚಿಕಾಗೊ ಬೊತ್ ಸ್ಕೂಲ್ ಆಫ್ ಬ್ಯುಸಿನೆಸ್​ನಲ್ಲಿ ಪ್ರಾಧ್ಯಾಪಕನಾಗಿರುವ ರಾಜನ್, ಭಾರತದಲ್ಲಿ ವಾಕ್​ ಸ್ವಾತಂತ್ರ್ಯ ತೀವ್ರ ಹೊಡೆತ ಅನುಭವಿಸುತ್ತಿದೆ. ಫ್ರೀ ಸ್ಪೀಚ್​ (ವಾಕ್​ ಸ್ವಾತಂತ್ರ್ಯ) ಒಂದು ದೊಡ್ಡ ವಿಶ್ವವಿದ್ಯಾನಿಲಯದ ಆತ್ಮವಾಗಿದೆ. ಅದರ, ಈ ಬಗ್ಗೆ ರಾಜಿ ಮಾಡಿಕೊಳ್ಳುವ ಮೂಲಕ, ಸಂಸ್ಥಾಪಕರು ಅದರ ಆತ್ಮವನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

Raghuram Rajan
Raghuram Rajan
author img

By

Published : Mar 20, 2021, 2:18 PM IST

Updated : Mar 20, 2021, 2:25 PM IST

ನವದೆಹಲಿ: ಹರಿಯಾಣದ ಅಶೋಕ ವಿಶ್ವವಿದ್ಯಾಲಯದ ಖ್ಯಾತ ಅಧ್ಯಾಪಕರಾದ ಭಾನು ಪ್ರತಾಪ್ ಮೆಹ್ತಾ ಮತ್ತು ಅರವಿಂದ್ ಸುಬ್ರಮಣಿಯನ್ ಅವರ ಹಠಾತ್ ನಿರ್ಗಮನದ ಕುರಿತು ಹಲವು ಶಿಕ್ಷಣ ತಜ್ಞರು ಟೀಕೆ ವ್ಯಕ್ತಪಡಿಸಿದ್ದು, ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಕೂಡ ತಮ್ಮ ಲಿಕ್ಡ್​ ಇನ್​ ಫೋಸ್ಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ.

ದಿ ಯೂನಿವರ್ಸಿಟಿ ಆಫ್ ಚಿಕಾಗೊ ಬೊತ್ ಸ್ಕೂಲ್ ಆಫ್ ಬ್ಯುಸಿನೆಸ್​ನಲ್ಲಿ ಪ್ರಾಧ್ಯಾಪಕನಾಗಿರುವ ರಾಜನ್, ಭಾರತದಲ್ಲಿ ವಾಕ್​ ಸ್ವಾತಂತ್ರ್ಯ ತೀವ್ರ ಹೊಡೆತ ಅನುಭವಿಸುತ್ತಿದೆ. ಫ್ರೀ ಸ್ವಿಚ್​ (ವಾಕ್​ ಸ್ವಾತಂತ್ರ್ಯ) ಒಂದು ದೊಡ್ಡ ವಿಶ್ವವಿದ್ಯಾನಿಲಯದ ಆತ್ಮವಾಗಿದೆ. ಅದರ, ಈ ಬಗ್ಗೆ ರಾಜಿ ಮಾಡಿಕೊಳ್ಳುವ ಮೂಲಕ, ಸಂಸ್ಥಾಪಕರು ಅದರ ಆತ್ಮವನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಪ್ರೊಫೆಸರ್ ಮೆಹ್ತಾ ಅವರ ರಾಜೀನಾಮೆ ಬೋಧನಾ ಅವಧಿಯ ಮಧ್ಯದಲ್ಲಿ ನೀಡಿದ್ದಾರೆ. ಅವರು ಇದ್ದಕ್ಕಿದ್ದಂತೆ ತಮ್ಮ ಚಾಲಕನಿಗೆ ವ್ಯವಸ್ಥೆ ಮಾಡುವಂತೆ ವಿಶ್ವವಿದ್ಯಾನಿಲಯಕ್ಕೆ ರಾಜೀನಾಮೆ ಪತ್ರದಲ್ಲಿ ಮನವಿ ಮಾಡಿದರು. ಇಲ್ಲದಿದ್ದರೆ ಅವರು ನಿರುದ್ಯೋಗಿಗಳಾಗಿರುತ್ತಾರೆ ಎಂಬ ಆತಂಕವಿತ್ತು. ಅಂತಹ ರಾಜೀನಾಮೆ ಪೂರ್ವನಿಯೋಜಿತವಾಗಿ ಇರುವುದು ಅಸಂಭವವಾಗಿದೆ ಎಂದು ಉಲ್ಲೇಖಿಸಿದ್ದಾರೆ.

2014-2016ರವರೆಗೆ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಸೇವೆ ಸಲ್ಲಿಸಿದ್ದ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ ಪ್ರೊ. ಅರವಿಂದ್ ಸುಬ್ರಮಣಿಯನ್ ಅವರ ರಾಜೀನಾಮೆಯಂತೆ ಮೆಹ್ತಾ ಅವರೂ ರಾಜೀನಾಮೆ ಸಲ್ಲಿಸಿ ಹೊರ ಬಂದಿದ್ದಾರೆ.

ಇದನ್ನೂ ಓದಿ: ಕೆಲ ದಿನಗಳಲ್ಲಿ ಜನ ಅಗತ್ಯ ವಸ್ತು ಮಾತ್ರವಲ್ಲ, ಬಯಸಿದೆಲ್ಲವನ್ನೂ ಖರೀದಿಸುತ್ತಾರೆ: ಏಕೆ ಗೊತ್ತೇ?

ಅವರ ರಾಜೀನಾಮೆಯ ಎರಡು ಸಾಲುಗಳು ಗಮನಾರ್ಹವಾಗಿವೆ. ಅಶೋಕ (ವಿಶ್ವವಿದ್ಯಾಲಯ) ಸಹ, ಅದರ ಖಾಸಗಿ ಸ್ಥಾನಮಾನ ಮತ್ತು ಖಾಸಗಿ ಬಂಡವಾಳದ ಬೆಂಬಲದೊಂದಿಗೆ ಇನ್ನು ಮುಂದೆ ಶೈಕ್ಷಣಿಕ ಅಭಿವ್ಯಕ್ತಿಯ ಒಂದು ಕೇಂದ್ರ ಸ್ಥಳವಾಗಿ ಮುಂದುವರಿಯಲು ಸಾಧ್ಯವಿಲ್ಲ ಮತ್ತು ಸ್ವಾತಂತ್ರ್ಯವು ಅಸ್ತವ್ಯಸ್ತವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಅಶೋಕನ ದೃಷ್ಟಿಗೆ ಹೋರಾಡಲು ಮತ್ತು ಅದನ್ನು ಉಳಿಸಿಕೊಳ್ಳಲು ವಿಶ್ವವಿದ್ಯಾಲಯದ ಬದ್ಧತೆಯು ಈಗ ಪ್ರಶ್ನೆಗೆ ಮುಕ್ತವಾಗಿದೆ. ಅಶೋಕನ ಭಾಗವಾಗಿ ಮುಂದುವರಿಯುವುದು ನನಗೆ ಕಷ್ಟಕರವಾಗಿದೆ ಎಂದು ರಾಜನ್ ಅವರು ಮೆಹ್ತಾ ರಾಜೀನಾಮೆ ಪತ್ರದಲ್ಲಿನ ಅಂಶಗಳನ್ನು ಉಲ್ಲೇಖಿಸಿದ್ದಾರೆ.

Raghuram Rajan
ರಾಜನ್ ಅವರ ಪ್ರತಿಕ್ರಿಯೆಯ ಪ್ರತಿ

ಪ್ರೊಫೆಸರ್ ಮೆಹ್ತಾ ಅವರು 2019ರ ಜುಲೈನಲ್ಲಿ ಅಶೋಕ ವಿಶ್ವವಿದ್ಯಾಲಯದ ಉಪಕುಲಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಪ್ರಾಧ್ಯಾಪಕರಾಗಿ ಉಳಿದಿದ್ದರು. ಮಾರ್ಚ್ 16ರಂದು ಪ್ರಾಧ್ಯಾಪಕ ಹುದ್ದೆಯನ್ನೂ ತ್ಯಜಿಸಿದರು. ಉಪಕುಲಪತಿ ಮಲಬಿಕಾ ಸರ್ಕಾರ್ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ, ಸ್ವಾತಂತ್ರ್ಯದ ಸಾಂವಿಧಾನಿಕ ಮೌಲ್ಯಗಳನ್ನು ಗೌರವಿಸಲು ಪ್ರಯತ್ನಿಸುವ ರಾಜಕೀಯವನ್ನು ಬೆಂಬಲಿಸುವ ಸಾರ್ವಜನಿಕ ಬರಹ ಮತ್ತು ಎಲ್ಲ ನಾಗರಿಕರಿಗೆ ಸಮಾನ ಗೌರವವು ವಿಶ್ವವಿದ್ಯಾನಿಲಯಕ್ಕೆ ಅಪಾಯಗಳನ್ನು ಉಂಟುಮಾಡುತ್ತದೆ ಎಂದು ಹೇಳಿದ್ದರು.

Raghuram Rajan
ರಾಜನ್ ಅವರ ಪ್ರತಿಕ್ರಿಯೆಯ ಪ್ರತಿ

ವಿಶ್ವವಿದ್ಯಾಲಯದ ಹಿತದೃಷ್ಟಿಯಿಂದ ನಾನು ರಾಜೀನಾಮೆ ನೀಡುತ್ತೇನೆ. ಅಶೋಕ ವಿಶ್ವವಿದ್ಯಾಲಯವು ಸಂಪೂರ್ಣ ಖಾಸಗಿ ಅನುದಾನಿತ ವಿಶ್ವವಿದ್ಯಾಲಯವಾಗಿದ್ದು, ಇದು ಉದಾರ ಕಲೆಗಳಿಗೆ ಸಮರ್ಪಿಸಲಾಗಿದೆ ಎಂದಿದ್ದರು.

ಎರಡು ದಿನಗಳ ನಂತರ ಮಾರ್ಚ್ 18ರಂದು ಸುಬ್ರಮಣಿಯನ್ ಸಹ ಅಶೋಕ ವಿಶ್ವವಿದ್ಯಾಲಯಕ್ಕೆ ರಾಜೀನಾಮೆ ನೀಡಿದರು. ಸುಬ್ರಮಣಿಯನ್ ಕಳೆದ ವರ್ಷ ಜುಲೈನಲ್ಲಿ ಅಶೋಕ ವಿಶ್ವವಿದ್ಯಾಲಯಕ್ಕೆ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇರಿಕೊಂಡರು. ನೂತನ ಅಶೋಕ ಸೆಂಟರ್ ಫಾರ್ ಎಕನಾಮಿಕ್ ಪಾಲಿಸಿಗಳ ಸ್ಥಾಪಕ ನಿರ್ದೇಶಕರಾಗಿದ್ದರು.

Last Updated : Mar 20, 2021, 2:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.