ETV Bharat / business

ಮೋದಿ ಎಕಾನಮಿ ಆಕಾಶಕ್ಕೆ ಮುತ್ತಿಕ್ಕಲು ನಾಲ್ಕು ಅಡ್ಡಿ!

author img

By

Published : Mar 22, 2021, 1:40 PM IST

ಕೋವಿಡ್ -19 ಬಿಕ್ಕಟ್ಟಿನ ನಂತರ ಹಲವು ಸುತ್ತಿನ ಉತ್ತೇಜಕ ಪ್ಯಾಕೇಜ್​ ಹಾಗೂ ಉದ್ಯಮಿ ಸ್ನೇಹಿ ನೀತಿಗಳಿಂದ ನಿರೀಕ್ಷಿತಕ್ಕಿಂತ ಉತ್ತಮವಾದ ಚೇತರಿಕೆ ಕಂಡ ನಂತರ ಹೊಸ ಆರ್ಥಿಕ ಅಡಚಣೆಗಳು ಭಾರತೀಯ ವಿತ್ತೀಯ ಬೆಳವಣಿಗೆಯನ್ನು ಘಾಸಿಗೊಳಿಸುತ್ತಿವೆ.

economic recovery
economic recovery

ನವದೆಹಲಿ: ಕೊರೊನಾ ವೈರಸ್​ನಿಂದ ಜರ್ಜರಿತವಾಗಿ ಹಿಂದಿನ ಲಯಕ್ಕೆ ಮರಳಿ ಆಕಾಶಕ್ಕೆ ಮುತ್ತಿಕ್ಕಬೇಕು ಎನ್ನುತ್ತಿರುವಾಗಲೇ ಭಾರತದ ಆರ್ಥಿಕತೆಗೆ ಮತ್ತೆ ನಾಲ್ವರು ಹಿತಶತ್ರುಗಳು ಅಡ್ಡಗೋಡೆಯಾಗಿದ್ದಾರೆ.

ಕೋವಿಡ್ -19 ಬಿಕ್ಕಟ್ಟಿನ ನಂತರ ಹಲವು ಸುತ್ತಿನ ಉತ್ತೇಜಕ ಪ್ಯಾಕೇಜ್​ ಹಾಗೂ ಉದ್ಯಮಿ ಸ್ನೇಹಿ ನೀತಿಗಳಿಂದ ನಿರೀಕ್ಷಿತಕ್ಕಿಂತ ಉತ್ತಮವಾದ ಚೇತರಿಕೆ ಕಂಡ ನಂತರ ಹೊಸ ಆರ್ಥಿಕ ಅಡಚಣೆಗಳು ಭಾರತೀಯ ವಿತ್ತೀಯ ಬೆಳವಣಿಗೆಯನ್ನು ಘಾಸಿಗೊಳಿಸುತ್ತಿವೆ.

ಹಲವು ರೇಟಿಂಗ್ ಏಜೆನ್ಸಿಗಳು ದೇಶದ ಆರ್ಥಿಕತೆಯು 2022ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇ 10ಕ್ಕಿಂತ ಹೆಚ್ಚು ದಾಖಲಿಸಬಹುದೆಂದು ಅಂದಾಜಿಸಿದ್ದರು. ಆದರೆ, ಕೆಲವು ಹೊಸ ಸವಾಲುಗಳು ಸದ್ಯದ ಬೆಳವಣಿಗೆಯನ್ನು ಅಡ್ಡಿಪಡಿಸಬಹುದು. ಮುಖ್ಯವಾಗಿ ಏರುತ್ತಿರುವ ಹಣದುಬ್ಬರವು ಆರ್ಥಿಕತೆಯ ಮೇಲೆ ಈಗಾಗಲೇ ದೊಡ್ಡ ಗಾಯ ಮಾಡಿದ ಅಂಶವಾಗಿದೆ.

ಹೆಚ್ಚುತ್ತಿರುವ ಹಣದುಬ್ಬರ

ಏರುತ್ತಿರುವ ಹಣದುಬ್ಬರವು ಆರ್ಥಿಕ ಬೆಳವಣಿಗೆಯನ್ನು ಅಡ್ಡಿಪಡಿಸುವ ದೊಡ್ಡ ಅಡಚಣೆಗಳಲ್ಲಿ ಒಂದಾಗಿದೆ. ಅನೇಕ ಏಜೆನ್ಸಿಗಳು ಇದರ ಬಗ್ಗೆ ಎಚ್ಚರಿಕೆಯ ಸೂಚನೆ ನೀಡಿವೆ. ಕೆಲವು ತಿಂಗಳವರೆಗೆ ತಣ್ಣಗಾದ ನಂತರ ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಮತ್ತೊಮ್ಮೆ ಗಗನ ಮುಖಿಯಾಗಿದೆ. ಫೆಬ್ರವರಿಯಲ್ಲಿ ಆಹಾರ ಮತ್ತು ಇಂಧನ ಬೆಲೆಗಳು ಹೆಚ್ಚಾಗುತ್ತಿರುವುದರಿಂದ ಚಿಲ್ಲರೆ ಹಣದುಬ್ಬರವು ತೀವ್ರವಾಗಿ ಏರಿತು. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಮಾಪನದ ಚಿಲ್ಲರೆ ಹಣದುಬ್ಬರ ಕಳೆದ ತಿಂಗಳು ಶೇ 5.03ಕ್ಕೆ ಏರಿದೆ.

ಹೆಚ್ಚುತ್ತಿರುವ ಚಿಲ್ಲರೆ ಹಣದುಬ್ಬರವು ಇಂಧನ ಮತ್ತು ಆಹಾರದಂತಹ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗುತ್ತಿವೆ ಎಂಬುದರ ಸೂಚನೆಯಾಗಿದೆ. ಇದು ದೇಶದ ಹೆಚ್ಚಿನ ಸಂಖ್ಯೆಯ ಜನರ ಮೇಲೆ ನೇರ ಪರಿಣಾಮ ಬೀರಬಹುದು.

ಇಂಧನ ಮತ್ತು ಎನರ್ಜಿ ದರ ಜಿಗಿತ

ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಗಳು ಕಳೆದ ಕೆಲವು ತಿಂಗಳಿಂದ ಗಗನಕ್ಕೇರಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರಸ್ತುತ ದಾಖಲೆಯ ಗರಿಷ್ಠ ಮಟ್ಟದಲ್ಲಿವೆ. ಹಲವು ಉದ್ಯಮ ಕ್ಷೇತ್ರಗಳಲ್ಲಿನ ಲಕ್ಷಾಂತರ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತವೆ. ಅದರಲ್ಲೂ ವಿಶೇಷವಾಗಿ ಸಣ್ಣ ಪ್ರಮಾಣದ ಉದ್ಯಮ ಸಂಸ್ಥೆಗಳ ಮೇಲೆ. ಹೆಚ್ಚಿನ ಮಟ್ಟದ ಇಂಧನ ಬೆಲೆಗಳ ಪ್ರವೃತ್ತಿ ಮುಂದುವರಿದರೆ ಅದು ಹಣದುಬ್ಬರ, ಬೆಳವಣಿಗೆ ಮತ್ತು ವ್ಯಾಪಾರ ಸಮತೋಲನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

ಹೊಸ ಕೋವಿಡ್ ಕೇಸ್​

ಹೊಸ ಕೋವಿಡ್ -19 ಅಲೆಯು ದೇಶೀಯ ಮಾರುಕಟ್ಟೆಗಳನ್ನು ತಲ್ಲಣಗೊಳಿಸುವ ಮತ್ತೊಂದು ಕಾರಣವಾಗಿದೆ. ಸೋಮವಾರ, ಭಾರತವು ಸುಮಾರು 47,000 ಹೊಸ ಕೋವಿಡ್ -19 ಪ್ರಕರಣ ವರದಿ ಮಾಡಿದೆ. 2021ರಲ್ಲಿ ಇದು ಅತಿದೊಡ್ಡ ದೈನಂದಿನ ಏರಿಕೆಯ ದಿನವಾಗಿದೆ. ಭಾರತವು ಎರಡನೇ ಅಲೆಯ ಸೋಂಕು ಎದುರಿಸುತ್ತಿದೆ ಎಂದು ಸೂಚಿಸುತ್ತದೆ.

ಇದನ್ನೂ ಓದಿ: ಕಚ್ಚಾ ತೈಲ ಬಿದ್ದರೂ ಒಂದು ಪೈಸೆಯೂ ಕೆಳಗಿಳಿಯದ ಪೆಟ್ರೋಲ್, ಡೀಸೆಲ್​: ಮೆಟ್ರೋ ನಗರಗಳ ಇಂಧನ ಬೆಲೆ ಹೀಗಿದೆ!

ಹೆಚ್ಚುತ್ತಿರುವ ಪ್ರಕರಣಗಳು ದೇಶದ ಬೆಳವಣಿಗೆಯನ್ನು ಸದ್ಯದಲ್ಲಿಯೇ ಅಡ್ಡಿಪಡಿಸಲಿವೆ. 2021-22ರ ಮೊದಲ ತ್ರೈಮಾಸಿಕದಲ್ಲಿ ಅಲ್ಪ ಬೆಳವಣಿಗೆ ಕಾಣಬಹುದು ಅಥವಾ ಯಾವುದೇ ವೃದ್ಧಿ ಕಾಣದೆ ಇರಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಮತ್ತು ಗುಜರಾತ್‌ನಂತಹ ಪ್ರಮುಖ ರಾಜ್ಯಗಳಲ್ಲಿ ಸ್ಥಳೀಯ ಲಾಕ್‌ಡೌನ್‌ಗಳನ್ನು ವಿಸ್ತರಿಸಿದ್ದರ ಪರಿಣಾಮ ಇನ್ನಷ್ಟು ಹೆಚ್ಚಾಗಬಹುದು. ಕಟ್ಟುನಿಟ್ಟಾದ ಲಾಕ್‌ಡೌನ್‌ ಘೋಷಿಸಿದರೆ ಸಣ್ಣ ಉದ್ಯಮಗಳು, ಎಂಎಸ್‌ಎಂಇಗಳು ಮತ್ತು ದೊಡ್ಡ ಸಂಸ್ಥೆಗಳ ಘಟಕಗಳು ಸಹ ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ನಿರುದ್ಯೋಗ ಮತ್ತು ಗೃಹ ಆದಾಯದ ಮಟ್ಟ

ಕೋವಿಡ್ ಪ್ರೇರಿತ ಬಿಕ್ಕಟ್ಟಿನಿಂದ ಆರ್ಥಿಕತೆಯು ಚೇತರಿಸಿಕೊಂಡಿದ್ದರೂ ನಿರುದ್ಯೋಗ ಮಟ್ಟವು ಸಾಮಾನ್ಯದಿಂದ ದೂರದಲ್ಲಿದೆ. ಮೂರು ವಾರಗಳ ಹಿಂದೆ ಮುಂಬೈ ಮೂಲದ ಥಿಂಕ್ ಟ್ಯಾಂಕ್ ಸಿಎಮ್ಐಇ ಫೆಬ್ರವರಿ 2021ರಲ್ಲಿ ಭಾರತದ ನಿರುದ್ಯೋಗ ದರವು ಶೇ 6.9ಕ್ಕೆ ಏರಿದೆ ಎಂದಿತ್ತು. ರಾಷ್ಟ್ರೀಯ ಮಟ್ಟದಲ್ಲಿ ನಿರುದ್ಯೋಗ ದರ ಏರಿಕೆಯ ಹೊರತಾಗಿಯೂ ನಗರ ಪ್ರದೇಶಗಳಲ್ಲಿನ ನಿರುದ್ಯೋಗ ದರವು ಕುಸಿಯಿತು ಎಂದು ಡೇಟಾ ಸೂಚಿಸಿದೆ. ಕಡಿಮೆ ಮಟ್ಟದ ಆದಾಯ ಹೊಂದಿರುವ ಗ್ರಾಮೀಣ ಪ್ರದೇಶಗಳು, ಪರಿಶೀಲನೆಯಲ್ಲಿರುವ ತಿಂಗಳಲ್ಲಿ ನಿರುದ್ಯೋಗದಲ್ಲಿ ಏರಿಕೆ ಕಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.