ETV Bharat / business

ಕೊರೊನಾ ಸೋಂಕಿತ ಬಜೆಟ್ ಮಂಡನೆಗೆ ಸೀತಾರಾಮನ್​ರ ಸರಣಿ ಸಭೆ ಅಂತ್ಯ: ಚರ್ಚಿಸಿದ ವಿಷಯಗಳಿವು! - ಕೇಂದ್ರ ಬಜೆಟ್ 2021 ದಿನಾಂಕ

2020-21ರ ಎರಡನೇ ತ್ರೈಮಾಸಿಕದಲ್ಲಿ ಕೋವಿಡ್ -19 ವಕ್ರರೇಖೆ ಸಮತಟ್ಟಾಗಿಸಲು ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಬಲವಾದ ಚೇತರಿಕೆಗೆ ಸರ್ಕಾರ ಕೈಗೊಂಡ ಪ್ರಯತ್ನವನ್ನು ಭಾಗವಹಿಸಿದವರು ಶ್ಲಾಘಿಸಿದ್ದರು ಎಂದು ಹಣಕಾಸು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

Budget 2021
ಕೇಂದ್ರ ಬಜೆಟ್
author img

By

Published : Dec 23, 2020, 8:00 PM IST

ನವದೆಹಲಿ: ಮುಂಬರುವ ಕೇಂದ್ರ ಬಜೆಟ್ 2021-22ರ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಪೂರ್ವ ಸಮಾಲೋಚನಾ ಸಭೆಗಳನ್ನು ಮುಕ್ತಾಯಗೊಳಿಸಿದ್ದಾರೆ.

ಡಿಸೆಂಬರ್ 14 ಮತ್ತು 23ರ ನಡುವೆ ನಿಗದಿಯಾದ 15 ಸಭೆಗಳಲ್ಲಿ 9 ಸ್ಟೇಕ್​ಹೋಲ್ಡರ್​ ಗ್ರೂಪ್​ಗಳ 170ಕ್ಕೂ ಅಧಿಕ ಆಹ್ವಾನಿತರು ಭಾಗವಹಿಸಿದ್ದರು. ಹಣಕಾಸು ಮತ್ತು ಬಂಡವಾಳ ಮಾರುಕಟ್ಟೆ, ಆರೋಗ್ಯ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ, ನೀರು ಮತ್ತು ನೈರ್ಮಲ್ಯ, ಕಾರ್ಮಿಕ ಒಕ್ಕೂಟ ಮತ್ತು ಕಾರ್ಮಿಕ ಸಂಸ್ಥೆಗಳು, ಉದ್ಯಮ, ಸೇವಾ ಮತ್ತು ವ್ಯಾಪಾರ ಸಂಸ್ಥೆಗಳು, ಮೂಲಸೌಕರ್ಯ, ಇಂಧನ ಮತ್ತು ಹವಾಮಾನ ಬದಲಾವಣೆ ಕ್ಷೇತ್ರ, ಕೃಷಿ ಮತ್ತು ಕೃಷಿ ಸಂಸ್ಕರಣಾ ಉದ್ಯಮ, ಕೈಗಾರಿಕೋದ್ಯಮಿಗಳು ಮತ್ತು ಅರ್ಥಶಾಸ್ತ್ರಜ್ಞರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ಹಣಕಾಸು ಕಾರ್ಯದರ್ಶಿ ಎ.ಬಿ. ಪಾಂಡೆ, ಕಾರ್ಯದರ್ಶಿ ಡಿಐಪಿಎಎಂ ತುಹಿನ್ ಕಾಂತ ಪಾಂಡೆ, ಖರ್ಚು ಕಾರ್ಯದರ್ಶಿ ಟಿ.ವಿ.ಸೋಮನಾಥನ್, ಡಿಇಎ ಕಾರ್ಯದರ್ಶಿ ತರುಣ್ ಬಜಾಜ್, ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಮತ್ತು ಹಣಕಾಸು ಸಚಿವಾಲಯ ಮತ್ತು ಇತರ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಸಹ ಸಭೆಗಳಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಕೊರೊನಾರ್ಥಿಕ ವಿನಾಶದಲ್ಲೂ ಭಾರತಕ್ಕೆ ಬಂತು ₹ 6 ಲಕ್ಷ ಕೋಟಿ ಫಾರಿನ್​ ಮನಿ... ರಿಲಯನ್ಸ್ ನಿಂದಲೇ ಬಂತು ಈ ಹಣ!

ತೆರಿಗೆ ಒಳಗೊಂಡಂತೆ ಹಣಕಾಸಿನ ನೀತಿ, ಬಾಂಡ್ ಮಾರುಕಟ್ಟೆ, ವಿಮೆ, ಮೂಲಸೌಕರ್ಯ ಖರ್ಚು, ಆರೋಗ್ಯ ಮತ್ತು ಶಿಕ್ಷಣ ಬಜೆಟ್, ಸಾಮಾಜಿಕ ರಕ್ಷಣೆ, ಕೌಶಲ್ಯ ಅಭಿವೃದ್ಧಿ, ನೀರಿನ ಕೊಯ್ಲು ಮತ್ತು ಸಂರಕ್ಷಣೆ, ನೈರ್ಮಲ್ಯ, ಎಂಜಿಎನ್‌ಆರ್‌ಇಜಿಎಸ್, ಸಾರ್ವಜನಿಕ ವಿತರಣಾ ವ್ಯವಸ್ಥೆ, ಸುಲಭ ವ್ಯಾಪಾರ ವಿಧಾನ, ಉತ್ಪಾದನಾ ಸಂಬಂಧಿತ ಹೂಡಿಕೆ ಯೋಜನೆ, ರಫ್ತು, 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳ ಬ್ರ್ಯಾಂಡಿಂಗ್, ಸಾರ್ವಜನಿಕ ವಲಯದ ವಿತರಣಾ ಕಾರ್ಯವಿಧಾನಗಳು, ನಾವೀನ್ಯತೆ, ಹಸಿರು ಬೆಳವಣಿಗೆ, ಇಂಧನ ಮತ್ತು ವಾಹನಗಳ ಮಾಲಿನ್ಯರಹಿತ ಮೂಲಗಳ ಬಗ್ಗೆಯೂ ಚರ್ಚಿಸಿದ್ದಾರೆ.

2020-21ರ ಎರಡನೇ ತ್ರೈಮಾಸಿಕದಲ್ಲಿ ಕೋವಿಡ್ -19 ವಕ್ರರೇಖೆ ಸಮತಟ್ಟಾಗಿಸಲು ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಬಲವಾದ ಚೇತರಿಕೆಗೆ ಸರ್ಕಾರ ಕೈಗೊಂಡ ಪ್ರಯತ್ನವನ್ನು ಭಾಗವಹಿಸಿದವರು ಶ್ಲಾಘಿಸಿದ್ದರು ಎಂದು ಹಣಕಾಸು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಂಕ್ರಾಮಿಕ ಪ್ರೇರಿತ ಸಾವುನೋವುಗಳೊಂದಿಗೆ ಆರ್ಥಿಕ ಚಟುವಟಿಕೆಗಳು ಏರಿಕೆಯಾದ ಕೆಲವೇ ದೇಶಗಳಲ್ಲಿ ಭಾರತವೂ ಸಹ ಇದೆ. 2021-22ರ ಬಜೆಟ್ ಸಿದ್ಧಪಡಿಸುವಾಗ ಎಲ್ಲಾ ಸಲಹೆಗಳನ್ನು ಎಚ್ಚರಿಕೆಯಿಂದ ಪರಿಗಣಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ ಎಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.