ETV Bharat / business

ಬ್ಯಾಂಕ್‌ಗಳು ಗ್ರಾಹಕ ಸ್ನೇಹಿಯಾಗಿರುವುದರತ್ತ ಹೆಚ್ಚಿನ ಗಮನಹರಿಸಿ: ನಿರ್ಮಲಾ ಸೀತಾರಾಮನ್ ಸೂಚನೆ - ಸಚಿವೆ ನಿರ್ಮಲಾ ಸೀತಾರಾಮನ್ ಸಭೆಯಲ್ಲಿ ಭಾಗಿ

ಉದ್ಯಮ ಪ್ರತಿನಿಧಿಗಳು ಮತ್ತು ಹಣಕಾಸು ಸಚಿವರ ನಡುವಿನ ಸಭೆಯಲ್ಲಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ಬ್ಯಾಂಕ್‌ಗಳು ಗ್ರಾಹಕ ಸ್ನೇಹಿಯಾಗಿರುವುದರತ್ತ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದ್ದಾರೆ.

ಸಚಿವೆ ನಿರ್ಮಲಾ ಸೀತಾರಾಮನ್
ಸಚಿವೆ ನಿರ್ಮಲಾ ಸೀತಾರಾಮನ್
author img

By

Published : Feb 21, 2022, 10:30 PM IST

ಮುಂಬೈ: ಬ್ಯಾಂಕ್‌ಗಳು ಗ್ರಾಹಕ ಸ್ನೇಹಿಯಾಗಿರುವುದರತ್ತ ಹೆಚ್ಚಿನ ಗಮನಹರಿಸಬೇಕು. ಇದರಿಂದ ಗ್ರಾಹಕರು ಹೆಚ್ಚೆಚ್ಚು ಸಾಲ ಪಡೆಯುತ್ತಾರೆ. ಆದರೆ, ಬ್ಯಾಂಕ್‌ಗಳು ಕ್ರೆಡಿಟ್ ಅಂಡರ್‌ರೈಟಿಂಗ್ ಮಾನದಂಡಗಳ ಮೇಲೆ ಮೃದುವಾಗಿರಬೇಕಾಗಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ.

ಉದ್ಯಮ ಪ್ರತಿನಿಧಿಗಳು ಮತ್ತು ಹಣಕಾಸು ಸಚಿವರ ನಡುವಿನ ಸಭೆಯಲ್ಲಿ, ಬೇಕಿಂಗ್ ವ್ಯವಹಾರದ ಸ್ಟಾರ್ಟ್​ಟಪ್​​ ಸಂಸ್ಥಾಪಕರೊಬ್ಬರು ಸಾಲವು ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗುವ ರೀತಿ ಮಾಡಿ ಎಂದು ಸೂಚಿಸಿದ್ದರು. ಇದಕ್ಕೆ ಅತಿದೊಡ್ಡ ಸಾಲದಾತ ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಸಹ ಬೆಂಬಲ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸೋಮವಾರವೂ ಕುಸಿತ ಕಂಡ ಸೆನ್ಸೆಕ್ಸ್-ನಿಫ್ಟಿ : ವಿಪ್ರೋ ಮತ್ತು ಇನ್ಫೋಸಿಸ್​ಗೆ ಲಾಭ

ನಂತರ ಅವರು ಮೈಕ್ರೋ ಮತ್ತು ಸಣ್ಣ ಉದ್ಯಮಗಳ (CGTMSE) ಸರ್ಕಾರದ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಬಗ್ಗೆ ಪ್ರಸ್ತಾಪಿಸಿದರು. ಈ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಬ್ಯಾಂಕಿಂಗ್ ವಲಯಕ್ಕೆ ಕೆಲವು ಸಲಹೆಗಳನ್ನು ನೀಡಿದರು ಮತ್ತು ಅವರ ವರ್ತನೆಯ ವಿರುದ್ಧವೂ ಮಾತನಾಡಿದರು. ಆರಂಭದಲ್ಲಿ, ಖಾರಾ ತುಂಬಾ ಸೌಮ್ಯವಾದ ಉತ್ತರವನ್ನು ನೀಡಿದರು. ತದನಂತರ ಸ್ವಲ್ಪಮಟ್ಟಿಗೆ ಪ್ರೇರೇಪಿಸಲ್ಪಟ್ಟ ನಂತರ, ಅವರು ಸಾಕಷ್ಟು ಸರ್ಕಾರದ ಬೆಂಬಲವನ್ನು ಹೊಂದಿರುವ ಸಿಜಿಟಿಎಂಎಸ್‌ಇಯ ಬಗ್ಗೆ ಮಾತನಾಡಲು ಹೋದರು.

ಬ್ಯಾಂಕ್‌ಗಳು ಹೆಚ್ಚು ಗ್ರಾಹಕ ಸ್ನೇಹಿಯಾಗಬೇಕು. ನೀವು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಸರಿಯಿಲ್ಲ. ಆದರೆ, ನೀವು ಗ್ರಾಹಕರೊಂದಿಗೆ ಹೆಚ್ಚು ಸ್ನೇಹಪರರಾಗಿರಬೇಕು ಎಂದು ಸಚಿವರು ಹೇಳಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.