ETV Bharat / business

ಆದಾಯದಲ್ಲಿ ಮತ್ತೆ ಖೋತಾ: ಶೇ 128.5ಕ್ಕೆ ಏರಿದ ಜನವರಿ ಅಂತ್ಯದ ವಿತ್ತೀಯ ಕೊರತೆ - ಮಹಾಲೇಖ ಪರಿಶೋಧಕ

2018-19ರ ಇದೇ ಅವಧಿಯಲ್ಲಿನ ಕೊರತೆ ಆ ವರ್ಷದ ಪರಿಷ್ಕೃತ ಬಜೆಟ್ (ಆರ್‌ಇ) ಅಂದಾಜಿನ ಶೇ 121.5ರಷ್ಟು ಇತ್ತು. ಹಣಕಾಸಿನ ಕೊರತೆ ಅಥವಾ ಖರ್ಚು- ಆದಾಯದ ನಡುವಿನ ಅಂತರವು 9,85,472 ಕೋಟಿ ರೂ.ಯಷ್ಟಿದೆ. 2020ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷದಲ್ಲಿ ಹಣಕಾಸಿನ ಕೊರತೆಯನ್ನು 7,66,846 ಕೋಟಿ ರೂ.ಗೆ ಸೀಮಿತಗೊಳಿಸುವ ಗುರಿಯನ್ನ ಕೇಂದ್ರ ಸರ್ಕಾರ ಹೊಂದಿತ್ತು.

Fiscal deficit
ವಿತ್ತೀಯ ಕೊರತೆ
author img

By

Published : Feb 28, 2020, 7:52 PM IST

ನವದೆಹಲಿ: ಭಾರತದ ಹಣಕಾಸಿನ ಕೊರತೆಯು ಜನವರಿ ಅಂತ್ಯದ ವೇಳೆಗೆ ಇಡೀ ವರ್ಷದ ಬಜೆಟ್ ಗುರಿಯ ಶೇ 128.5ಕ್ಕೆ ತಲುಪಿದೆ ಎಂದು ಮಹಾಲೇಖ ಪರಿಶೋಧಕ (ಸಿಜಿಎ) ವರದಿ ಶುಕ್ರವಾರ ತಿಳಿಸಿದೆ.

2018-19ರ ಇದೇ ಅವಧಿಯಲ್ಲಿನ ಕೊರತೆಯು ಆ ವರ್ಷದ ಪರಿಷ್ಕೃತ ಬಜೆಟ್ (ಆರ್‌ಇ) ಅಂದಾಜಿನ ಶೇ 121.5ರಷ್ಟು ಇದಿತ್ತು. ಹಣಕಾಸಿನ ಕೊರತೆ ಅಥವಾ ಖರ್ಚು- ಆದಾಯದ ನಡುವಿನ ಅಂತರವು 9,85,472 ಕೋಟಿ ರೂ.ಯಷ್ಟಿದೆ. 2020ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷದಲ್ಲಿ ಹಣಕಾಸಿನ ಕೊರತೆಯನ್ನು 7,66,846 ಕೋಟಿ ರೂ.ಗೆ ಸೀಮಿತಗೊಳಿಸುವ ಗುರಿ ಕೇಂದ್ರ ಸರ್ಕಾರ ಹೊಂದಿತ್ತು.

ಈ ತಿಂಗಳ ಆರಂಭದಲ್ಲಿ ಕೇಂದ್ರ ಬಜೆಟ್ ಮಂಡಿಸುವಾಗ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಹಣಕಾಸಿನ ಕೊರತೆ ಗುರಿಯನ್ನು ಜಿಡಿಪಿಯ ಶೇ 3.8ಕ್ಕೆ ಏರಿಸಿದ್ದರು. 2019-20ರ ಆದಾಯದ ಕೊರತೆಯಿಂದಾಗಿ ಕೊರತೆಯ ಗುರಿಯನ್ನು ಶೇ 3.3ರಿಂದ ಶೇ 3.8ಕ್ಕೆ ನಿಗದಿಪಡಿಸಲಾಗಿದೆ.

ಸಿಜಿಎ ಮಾಹಿತಿಯ ಪ್ರಕಾರ, ಏಪ್ರಿಲ್ - ಜನವರಿ ಅವಧಿಯಲ್ಲಿ ಆದಾಯದ ಸ್ವೀಕೃತಿ 12.5 ಲಕ್ಷ ಕೋಟಿ ರೂ. ಅಥವಾ 'ಆರ್​ಇ'ಯ ಶೇ 67.6 ರಷ್ಟಿದೆ. ಈ ಹಿಂದಿನ ಹಣಕಾಸು ವರ್ಷದಲ್ಲಿ 'ಆರ್‌ಇ'ಯ ಶೇ 68.3ರಷ್ಟು ಇತ್ತು.

ಜನವರಿ ಅಂತ್ಯದ ವೇಳೆಗೆ ಒಟ್ಟು ವೆಚ್ಚ ₹ 22.68 ಲಕ್ಷ ಕೋಟಿ ಅಥವಾ 'ಆರ್​ಇ'ಯ ಶೇ 84.1ರಷ್ಟಿದ್ದು, ಕಳೆದ ಹಣಕಾಸು ವರ್ಷದಲ್ಲಿ ಶೇ 81.5ರಷ್ಟು ಇದ್ದಿತ್ತು ಎಂದು ಸಿಎಜಿ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.