ETV Bharat / business

Explainer: ಆರ್ಥಿಕ ಸಮೀಕ್ಷೆ ಎಂದರೇನು? ಬಜೆಟ್​ಗೂ ಮುನ್ನ ಮಂಡನೆ ಏಕೆ? - ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ವಿ ಸುಬ್ರಮಣಿಯನ್​

ಪ್ರತಿವರ್ಷ ಆಯವ್ಯಯ(ಬಜೆಟ್‌) ಮಂಡಿಸುವ ಮುನ್ನಾ ದಿನ ಆರ್ಥಿಕ ಸಮೀಕ್ಷೆ ಮಂಡಿಸುವುದು ಸಂಪ್ರದಾಯ. ಪ್ರಸಕ್ತ ವಿತ್ತೀಯ ವರ್ಷದ ಆಗುಹೋಗುಗಳು, ಮುಂ​ದಿನ ವರ್ಷ ತೆಗೆದುಕೊಳ್ಳಬೇಕಾದ ಆರ್ಥಿಕ ನಡೆಗಳ ಮಾರ್ಗಸೂಚಿಯೇ ಈ ಆರ್ಥಿಕ ಸಮೀಕ್ಷೆ. ಈ ಬಗ್ಗೆ ನಿಮಗೆ ಗೊತ್ತಿರಬೇಕಾದ ಕೆಲವು ಸಂಗತಿಗಳಿವು..

Economic Survey 2020
ಆರ್ಥಿಕ ಸಮೀಕ್ಷೆ
author img

By

Published : Jan 31, 2020, 10:13 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಎನ್​ಡಿಎ ಸರ್ಕಾರದ ಎರಡನೇ ಅವಧಿಯ ದ್ವಿತೀಯ ಆರ್ಥಿಕ ಸಮೀಕ್ಷೆ ಇಂದು ಮಂಡನೆ ಆಗಲಿದೆ.

ಏನಿದು ಆರ್ಥಿಕ ಸಮೀಕ್ಷೆ?

ಹೆಸರೇ ಹೇಳುವಂತೆ ದೇಶದ ಆರ್ಥಿಕತೆಯ ಸಮೀಕ್ಷೆ. ಸಾಮಾನ್ಯವಾಗಿ ಇದನ್ನು ಮುಂಗಡ ಪತ್ರ ಮಂಡನೆಯು ಹಿಂದಿನ ದಿನ ಮಂಡಿಸಲಾಗುತ್ತದೆ. ದೇಶದ ಒಟ್ಟಾರೆ ಆರ್ಥಿಕತೆಯ ಅಧಿಕೃತ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿರುತ್ತದೆ.

ಆರ್ಥಿಕ ಸಮೀಕ್ಷೆಯಲ್ಲಿ ಏನಿರಲಿದೆ?
ಪ್ರಸಕ್ತ ಹಣಕಾಸು ವರ್ಷದ ಸಂಪೂರ್ಣ ವಿವರ, ದೇಶದಲ್ಲಿ ಆರ್ಥಿಕಾಭಿವೃದ್ಧಿಗೆ ಇರಬಹುದಾದ ಅವಕಾಶಗಳು, ಅಭಿವೃದ್ಧಿಯ ಪಥದಲ್ಲಿ ಎದುರಾಗಲಿರುವ ಸವಾಲುಗಳ ಸಮಗ್ರ ಮಾಹಿತಿ, ವಿಶ್ಲೇಷಣೆ, ಮಾರ್ಗಸೂಚಕಗಳು, ನೀತಿ ನಿಯಮಗಳನ್ನು ಸಮೀಕ್ಷೆ ಒಳಗೊಂಡಿರುತ್ತದೆ. ವಿವಿಧ ಆರ್ಥಿಕ ವಲಯವಾರು ಏರಿಳಿತಗಳ ಪರಾಮರ್ಶೆ, ಏರಿಳಿತಕ್ಕೆ ಕಾರಣಗಳು ಮತ್ತು ಸುಧಾರ​ಣೆಗಳು, ಅವುಗಳಿಗೆ ಅಗತ್ಯವಾದ ಪರಿಹಾರಗಳನ್ನು ಸೂಚಿಸ​ಲಾಗಿರುತ್ತದೆ.

ಸಮೀಕ್ಷೆಯ ಪ್ರಮುಖಾಂಶಗಳೇನು?
ಆರ್ಥಿಕ ಸಮೀಕ್ಷೆ, ಜಿಡಿಪಿ(ಆರ್ಥಿಕ ವೃದ್ದಿ ದರ) ಯು ಮಾರ್ಚ್ ಅಂತ್ಯಕ್ಕೆ ಕೊನೆಗೊಳ್ಳುವ ವಿತ್ತೀಯ ವರ್ಷದಲ್ಲಿನ ಅಂದಾಜು ಮತ್ತು ಮುಂದಿನ ಹಣಕಾಸು ವರ್ಷದ ಅಂದಾಜು ಒಳಗೊಂಡಿರುತ್ತದೆ. ಆರ್ಥಿಕತೆಯ ಪ್ರಗತಿಗೆ ಹಾಗೂ ಹಿಂಜರಿತಕ್ಕೆ ಕಾರಣಗಳನ್ನು ವಿವರವಾಗಿ ನೀಡುತ್ತದೆ. ಆರ್ಥಿಕ ಹಿನ್ನೆಡೆಯಿಂದ ಪಾರಾಗಲು ಬೇಕಾದ ಮಾರ್ಗಗಳನ್ನೂ ಸಹ ಇದು ಸೂಚಿಸುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.