ETV Bharat / business

ರಾಜಧಾನಿಯಲ್ಲಿ ಭರ್ಜರಿ ಬೇಟೆ: 83 ಕೆ.ಜಿ. ಚಿನ್ನ ವಶ, ಸ್ಮಗ್ಲಿಂಗ್​ ಜಾಲದ 8 ಜನ ಬಂಧನ - ಡಿಆರ್​ಐ ಚಿನ್ನ

504 ಕಳ್ಳಸಾಗಣೆಯ ವಿದೇಶಿ ಮೂಲದ ಚಿನ್ನದ ಸರಗಳನ್ನು ವಶಕ್ಕೆ ಪಡೆಯಲಾಗಿದೆ. ಅಂದಾಜು 42.89 ಕೋಟಿ ರೂ. ಮೌಲ್ಯದ 83.621 ಕೆ.ಜಿ. ಚಿನ್ನವನ್ನು ಆಪಾದಿತರಿಂದ ಜಪ್ತಿ ಮಾಡಲಾಗಿದೆ.

gold smuggling
ಚಿನ್ನ ಸ್ಮಗ್ಲಿಂಗ್
author img

By

Published : Aug 29, 2020, 7:46 PM IST

ನವದೆಹಲಿ: ಅಕ್ರಮವಾಗಿ ಚಿನ್ನ ಸ್ಮಗ್ಲಿಂಗ್​ ಮಾಡುತ್ತಿದ್ದ ಆರೋಪದ ಮೇಲೆ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಎಂಟು ಜನ ಆರೋಪಿಗಳನ್ನು ಬಂಧಿಸಲಾಗಿದೆ.

504 ಕಳ್ಳಸಾಗಣೆಯ ವಿದೇಶಿ ಮೂಲದ ಚಿನ್ನದ ಸರಗಳನ್ನು ವಶಕ್ಕೆ ಪಡೆಯಲಾಗಿದೆ. ಅಂದಾಜು 42.89 ಕೋಟಿ ರೂ. ಮೌಲ್ಯದ 83.621 ಕೆ.ಜಿ. ಚಿನ್ನವನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿದೆ ಎಂದು ಕಂದಾಯ ಅಧಿಕಾರಿಗಳು ಗುಪ್ತಚರ ನಿರ್ದೇಶನಾಲಯಕ್ಕೆ ತಿಳಿಸಿದ್ದಾರೆ.

ದಿಬ್ರುಗಢ್​-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಎಂಟು ಪ್ರಯಾಣಿಕರನ್ನು ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ತಡೆದು ತಪಾಸಣೆ ನಡೆಸಲಾಯಿತು. ಈ ವೇಳೆ 504 ಕಳ್ಳಸಾಗಣೆ ವಿದೇಶಿ ಮೂಲದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲ್ಲಾ ಆರೋಪಿಗಳು ನಕಲಿ ಗುರುತಿನ ಚೀಟಿಗಳನ್ನು ಹೊಂದಿದ್ದರು. ಇಂಡೋ-ಮ್ಯಾನ್ಮಾರ್ ಗಡಿಯ ಮೂಲಕ ಚಿನ್ನದ ಸರಳುಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಚಿನ್ನದ ಸರಳುಗಳನ್ನು ಧರಿಸಿದ್ದ ಬಟ್ಟೆಯಲ್ಲಿ ಮರೆಮಾಡಲಾಗಿತ್ತು. ಇಂಡೋ-ಮ್ಯಾನ್ಮಾರ್ ಗಡಿಯ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡುತ್ತಿದ್ದು, ಹೆಚ್ಚಿನ ವಿಲೇವಾರಿಗಾಗಿ ದೆಹಲಿಗೆ ಕೊಂಡೊಯ್ಯಲಾಗುತ್ತಿತ್ತು. ನಕಲಿ ಗುರುತಿನ ಚೀಟಿಗಳ ಮೇಲೆ ಪ್ರಯಾಣಿಸುತ್ತಿದ್ದ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.