ETV Bharat / business

ಹಣಕಾಸು, ಚಾಲ್ತಿ ಖಾತೆ ಕೊರತೆ ಬಗ್ಗೆ ಚಿಂತಿಸಬೇಡಿ: ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಸಲಹೆ

author img

By

Published : Apr 13, 2020, 5:50 PM IST

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್​ನ ಹಿರಿಯ ಮುಖಂಡ/ ಕೇಂದ್ರದ ಮಾಜಿ ಸಚಿವ ಆನಂದ್ ಶರ್ಮಾ, ಕೇಂದ್ರ ಸರ್ಕಾರವು ಸಿಎಡಿ (ಕರೆಂಟ್ ಅಕೌಂಟ್ ಡೆಫಿಸಿಟ್) ಮತ್ತು ಹಣದುಬ್ಬರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬಾರದು. ಏಕೆಂದರೆ, ಇದು ಅಸಾಧಾರಣ ಪರಿಸ್ಥಿತಿ. ಸರ್ಕಾರ ಕೆಲವು ಕ್ಷೇತ್ರಗಳಿಗೆ ಎರಡನೇ ಆರ್ಥಿಕ ನೆರವು ನೀಡಬೇಕು. ಜಿಎಸ್‌ಟಿ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಎನ್‌ಆರ್‌ಇಜಿಎ) ಅಡಿ ರಾಜ್ಯಗಳು ತಮ್ಮ ಪಾಲಿನ ಹಣ ಪಡೆಯಬೇಕು.

PM Modi
ಪ್ರಧಾನಿ ಮೋದಿ

ನವದೆಹಲಿ: ಇದೊಂದು ಅಸಾಧಾರಣ ಆರ್ಥಿಕ ಪರಿಸ್ಥಿತಿ ಆಗಿರುವುದರಿಂದ ಹಣಕಾಸಿನ ಕೊರತೆ ಮತ್ತು ಚಾಲ್ತಿ ಖಾತೆ ಅಭಾವದ ಬಗ್ಗೆ ಚಿಂತಿಸಬೇಡಿ ಎಂದು ಕಾಂಗ್ರೆಸ್, ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

ಕೋವಿಡ್ ಪರಿಹಾರ ನಿಧಿಗೆ ಜಿಡಿಪಿಯ ಶೇ 1ಕ್ಕಿಂತ ಕಡಿಮೆ ಹಣ ಮಾತ್ರ ನೀಡಲಾಗಿದೆ ಎಂದು ಟೀಕೆ ಸಹ ವ್ಯಕ್ತವಾಗಿತ್ತು. ಅನೇಕ ದೇಶಗಳು ತಮ್ಮ ಜಿಡಿಪಿಯಲ್ಲಿ ಶೇ 15ರಷ್ಟು ಪರಿಹಾರ ನೀಡಿವೆ. ಹೀಗಾಗಿ, 'ಕೇಂದ್ರ ಸರ್ಕಾರ ಸಹ ತನ್ನ ಪರಿಹಾರದ ಮೊತ್ತ ಹೆಚ್ಚಿಸಬೇಕು' ಎಂದು ಮನವಿ ಮಾಡಿದೆ.

2008ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಅಂದಿನ ಯುಪಿಎ ಸರ್ಕಾರವು ಒಟ್ಟಾರೆ ಜಿಡಿಪಿಯ ಪಾಲಿನಲ್ಲಿ ಶೇ 3ರಷ್ಟು ಉತ್ತೇಜನ ಪ್ಯಾಕೇಜ್​ ನೀಡಿತ್ತು ಎಂದು ಕಾಂಗ್ರೆಸ್ ಪ್ರಸ್ತಾಪಿಸಿತು. ವೈಯಕ್ತಿಕ ಆದಾಯ ತೆರಿಗೆಯಲ್ಲಿ ಹೆಚ್ಚಿನ ಪರಿಹಾರ ನೀಡಬೇಕು ಎಂದು ಕೇಳಿಕೊಂಡಿದೆ.

ಕೇಂದ್ರ ಸರ್ಕಾರವು ಸಿಎಡಿ (ಕರೆಂಟ್ ಅಕೌಂಟ್ ಡೆಫಿಸಿಟ್) ಮತ್ತು ಹಣದುಬ್ಬರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬಾರದು. ಏಕೆಂದರೆ, ಇದು ಅಸಾಧಾರಣ ಪರಿಸ್ಥಿತಿ. ಸರ್ಕಾರ ಕೆಲವು ಕ್ಷೇತ್ರಗಳಿಗೆ ಎರಡನೇ ಆರ್ಥಿಕ ನೆರವು ನೀಡಬೇಕು ಎಂದು ಕೇಂದ್ರದ ಮಾಜಿ ಸಚಿವ ಆನಂದ್ ಶರ್ಮಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರ್ಮಾ, ಜಿಎಸ್‌ಟಿ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಎನ್‌ಆರ್‌ಇಜಿಎ) ಅಡಿ ರಾಜ್ಯಗಳು ತಮ್ಮ ಪಾಲಿನ ಹಣ ಪಡೆಯಬೇಕು ಎಂದರು.

ರಫ್ತು ಪಾಲಿನಲ್ಲಿ ಶೇ 40ರಷ್ಟು ಕೊಡುಗೆ ನೀಡುತ್ತಿರುವ ಎಂಎಸ್‌ಎಂಇ ವಲಯಕ್ಕೆ ತೊಂದರೆಯಿಂದ ಹೊರಬರಲು ಬಡ್ಡಿರಹಿತ ಸಾಲ ನೀಡಬೇಕು. ಪಿಎಸ್‌ಯು ಕನಿಷ್ಠ 10 ಲಕ್ಷ ಕೋಟಿ ರೂ. ಇರುವ ಎಂಎಸ್‌ಎಂಇ ಸಾಲವನ್ನು ಭಾಗಶಃ ಪಾವತಿಸಬೇಕು ಎಂದು ಹೇಳಿದರು.

ಲಾಕ್‌ಡೌನ್ ಅನ್ನು ಹಂತ- ಹಂತವಾಗಿ ತೆಗೆದುಹಾಕಬೇಕು. ರಸ್ತೆಯ ಮೂಲಕ ಸರಕುಗಳ ಸಾಗಣೆಯನ್ನು ತಕ್ಷಣವೇ ಪ್ರಾರಂಭಿಸಬೇಕು. ಸುಗ್ಗಿಯ ಸಮಯದಲ್ಲಿ ಸಾರಿಗೆ ಅತ್ಯಗತ್ಯ ಭಾಗವಾಗಿರುವುದರಿಂದ ಎಲ್ಲ ಸಾರಿಗೆ ಒಟ್ಟುಗೂಡಿಸಿ ಕಾರ್ಯನಿರ್ವಹಿಸಲು ಎಸ್‌ಡಿಎಂ ಅಧಿಕಾರ ಹೊಂದಿರಬೇಕು ಎಂದು ಸೂಚಿಸಿ ಕೆಲವು ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಬೇಕು ಹಾಗೂ ಕೈಗಾರಿಕೆಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.