ETV Bharat / business

2020-21ರ ಆರ್ಥಿಕತೆಯ ಮೇಲೆ ಕೊರೊನಾ ಕರಿನೆರಳು: ಜಿಡಿಪಿ ಶೇ 7.7ಕ್ಕೆ ಕುಗ್ಗುವ ಸಾಧ್ಯತೆ

author img

By

Published : Jan 7, 2021, 6:40 PM IST

Updated : Jan 7, 2021, 7:38 PM IST

farmers
ಕೃಷಿ

18:35 January 07

'ಕೊರೊನಾದಿಂದಾಗಿ ದೇಶದ ಜಿಡಿಪಿ ಶೇ.7.7ರಷ್ಟು ಕುಂಠಿತ ಸಾಧ್ಯತೆ'

ನವದೆಹಲಿ: ಕಳೆದ ಆರ್ಥಿಕ ವರ್ಷದಲ್ಲಿದ್ದ ಶೇ 4.2ರಷ್ಟು ಬೆಳವಣಿಗೆಗೆ ಹೋಲಿಸಿದರೆ 2020-21ರಲ್ಲಿ ಭಾರತದ ಆರ್ಥಿಕತೆಯು ಕೋವಿಡ್​ ಸಾಂಕ್ರಾಮಿಕ ಪ್ರೇರೇಪಿತ ಲಾಕ್​ಡೌನ್​ ಪ್ರಭಾವದಿಂದಾಗಿ ಶೇ 7.7ರಷ್ಟು ಕುಗ್ಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.  

ರಾಷ್ಟ್ರೀಯ ಸಾಂಖ್ಯಿಕ ಸಂಘಟನೆ (ಎನ್‌ಎಸ್‌ಒ) ಗುರುವಾರ ಬಿಡುಗಡೆ ಮಾಡಿದ ರಾಷ್ಟ್ರೀಯ ಆದಾಯದ ಮೊದಲ ಸುಧಾರಿತ ಅಂದಾಜಿನ ಪ್ರಕಾರ, ಕೃಷಿಯನ್ನು ಹೊರತುಪಡಿಸಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಸಂಕೋಚನ ಕಂಡುಬಂದಿದೆ.

2020-21ರಲ್ಲಿ ಸ್ಥಿರ ಬೆಲೆಗಳಲ್ಲಿ (2011-12) ನೈಜ ಜಿಡಿಪಿ ಅಥವಾ ಜಿಡಿಪಿ 134.40 ಲಕ್ಷ ಕೋಟಿ ರೂ. ಗಳಿಸುವ ಸಾಧ್ಯತೆಯಿದೆ. 2019-20ನೇ ಸಾಲಿನ ಜಿಡಿಪಿಯ ತಾತ್ಕಾಲಿಕ ಅಂದಾಜು 145.66 ಲಕ್ಷ ಕೋಟಿ ರೂ.ಯಷ್ಟಿತ್ತು. 2019-20ರಲ್ಲಿ ಶೇ 4.2ರ ಬೆಳವಣಿಗೆಯ ದರಕ್ಕೆ ಹೋಲಿಸಿದರೆ 2020-21ರ ಅವಧಿಯಲ್ಲಿ ನೈಜ ಜಿಡಿಪಿಯ ಬೆಳವಣಿಗೆ ದರ ಮೈನಸ್​ ಶೇ 7.7ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಡಿಸೆಂಬರ್​ನಲ್ಲಿ ಶೇ 14ರಷ್ಟು ಉದ್ಯೋಗ ನೇಮಕಾತಿಯಲ್ಲಿ ಹೆಚ್ಚಳ: ವರದಿ

ಪ್ರಸಕ್ತ ಹಣಕಾಸು ವರ್ಷದಲ್ಲಿ, ಉತ್ಪಾದನಾ ವಲಯವು ಶೇ 9.4ರಷ್ಟು ಸಂಕೋಚನ ಕಾಣುವ ಸಾಧ್ಯತೆಯಿದೆ. ಆದರೆ ಬೆಳವಣಿಗೆಯು ಹಿಂದಿನ ವರ್ಷದ ಅವಧಿಯಲ್ಲಿ ಶೇ 0.03ರಷ್ಟಿತ್ತು. ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ, ವ್ಯಾಪಾರ, ಹೋಟೆಲ್‌, ಸಾರಿಗೆ, ಸಂವಹನ ಮತ್ತು ಪ್ರಸಾರಕ್ಕೆ ಸಂಬಂಧಿಸಿದ ಸೇವೆಗಳಲ್ಲಿ ಗಮನಾರ್ಹ ಸಂಕೋಚನವನ್ನು ಸಾಂಖ್ಯಕ ಇಲಾಖೆ ಅಂದಾಜಿಸಿದೆ.

ಕೃಷಿ ಕ್ಷೇತ್ರವು 2020-21ರಲ್ಲಿ ಶೇ 3.4ರಷ್ಟು ಬೆಳವಣಿಗೆಯನ್ನು ಕಾಣುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ, ಇದು 2019-20ರಲ್ಲಿ ದಾಖಲಾದ ಶೇ 4ಕ್ಕಿಂತ ಕಡಿಮೆ ಇರುತ್ತದೆ. ಆರ್ಥಿಕತೆಯು ಮೊದಲ ತ್ರೈಮಾಸಿಕದಲ್ಲಿ ಶೇ  23.9ರಷ್ಟು ಮತ್ತು ಎರಡನೇ ತ್ರೈಮಾಸಿಕದಲ್ಲಿ ಶೇ 7.5ರಷ್ಟು ಕುಗ್ಗಿತು.

Last Updated : Jan 7, 2021, 7:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.