ETV Bharat / business

ಭಾರತದ ಇತಿಹಾಸದಲ್ಲೇ '2020' ಒಂದು ಕರಾಳ ಅಧ್ಯಾಯ: ದೇಶದ ಆರ್ಥಿಕ ಸ್ಥಿತಿ ಹೇಗಿತ್ತು, ಹೇಗಾಯ್ತು? - ಲಾಕ್‌ಡೌನ್ ಸಮಯದಲ್ಲಿ ವಲಸಿಗರು

ಕೊರೊನಾ ಸೋಂಕು ತಂದ ಸಂಕಷ್ಟಕ್ಕೆ ಜಾಗತಿಕ ಜಿಡಿಪಿ ಬೆಳವಣಿಗೆ ಪಾತಾಳ ಕಂಡಿತು. ಕೈಗಾರಿಕಾ ಬೆಳವಣಿಗೆ ದರ ಕುಸಿಯಿತು. ವಸತಿ, ವಾಹನೋದ್ಯಮ, ಪ್ರವಾಸೋದ್ಯಮ, ಆತಿಥ್ಯ, ಮಾಹಿತಿ ತಂತ್ರಜ್ಞಾನ, ಚಿಲ್ಲರೆ, ಪ್ರಯಾಣಿಕೋದ್ಯಮ ಸೇರಿ ಹಲವು ಮೂಲಭೂತ ಸೌಕರ್ಯಗಳ ಮಾರುಕಟ್ಟೆ ಕಳಾಹೀನವಾದವು. ಕೊರೊನಾ ಆರ್ಥಿಕ ವರ್ಷದಲ್ಲಿ ಭಾರತದ ಅರ್ಥವ್ಯವಸ್ಥೆ ಸಮಗ್ರ ನೋಟ ಇಲ್ಲಿದೆ.

INDIAN ECONOMY
ಭಾರತದ ಆರ್ಥಿಕತೆ
author img

By

Published : Dec 28, 2020, 10:46 PM IST

ಇನ್ನೇನು 2020ನೇ ವರ್ಷ ದುಃಖಾಂತ್ಯ ಆಗುವುದಕ್ಕೆ ಬೆರಳೆಣಿಕೆ ದಿನಗಳಷ್ಟೇ ಬಾಕಿಯಿದೆ. ಜಗತ್ತನ್ನೇ ಹಿಂಡಿ ಹಿಪ್ಪೆ ಮಾಡಿದ ಮಾರಣಾಂತಿಕ ಕೊರೊನಾ ವೈರಸ್​, ಭಾರತ ಸೇರಿ ಜಾಗತಿಕ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿತು. ಜಗತ್ತಿನೆಲ್ಲೆಡೆ ಆರ್ಥಿಕ ಕುಸಿತ ಕಂಡುಬಂತು. ಅಮೆರಿಕ, ರಷ್ಯಾ, ಜರ್ಮನಿ, ಜಪಾನ್, ಸೌದಿ ಅರೇಬಿಯಾ ಸೇರಿ ಸೇರಿ ಘಟಾನುಘಟಿ ರಾಷ್ಟ್ರಗಳು ಸಹ ಕೊರೊನಾ ಆರ್ಥಿಕ ಹಿಂಜರಿತದಿಂದ ಪಾರಾಗಲು ಆಗಲಿಲ್ಲ.

ಸೋಂಕು ತಂದ ಸಂಕಷ್ಟಕ್ಕೆ ಜಾಗತಿಕ ಜಿಡಿಪಿ ಬೆಳವಣಿಗೆ ಪಾತಾಳ ಕಂಡಿತು. ಕೈಗಾರಿಕಾ ಬೆಳವಣಿಗೆ ದರ ಕುಸಿಯಿತು. ವಸತಿ, ವಾಹನೋದ್ಯಮ, ಪ್ರವಾಸೋದ್ಯಮ, ಆತಿಥ್ಯ, ಮಾಹಿತಿ ತಂತ್ರಜ್ಞಾನ, ಚಿಲ್ಲರೆ ವ್ಯಾಪಾರ ಸೇರಿ ಹಲವು ಮೂಲಭೂತ ಸೌಕರ್ಯಗಳ ಮಾರುಕಟ್ಟೆ ಕಳಾಹೀನವಾದವು. ಪೂರೈಕೆ ಸರಪಳಿ ಕಳಚಿ ಬೇಡಿಕೆ ಕುಸಿಯಿತು. ಉತ್ಪಾದನೆ ಕುಂಠಿತಗೊಂಡು ಉದ್ಯೋಗ ಕಡಿತವಾದವು. ಪ್ರಪಾತ ಕಂಡ ಜಿಡಿಪಿ ಎಂಬ ಸುದ್ದಿಗಳು ನಿತ್ಯದ ಸಾಮಾನ್ಯ ಶೀರ್ಷಿಕೆಯಾದವು. ಲಾಕ್​ಡೌನ್​ನಿಂದ ನಗರದಲ್ಲಿ ಸಿಲುಕಿಕೊಂಡ ವಲಸೆ ಕಾರ್ಮಿಕರು ಮನೆಗೆ ತೆರಳಲು ಪರಿತಪಿಸಿದರು. ಕೆಲವರು ನಡೆದುಕೊಂಡು ಮನೆ ತಲುಪಿದರೆ, ಮತ್ತೆ ಕೆಲವರು ಪ್ರಾಣ ಕಳೆದುಕೊಂಡರು. ಕೊರೊನಾ ಆರ್ಥಿಕ ವರ್ಷದಲ್ಲಿ ಭಾರತದ ಅರ್ಥವ್ಯವಸ್ಥೆ ಸಮಗ್ರ ನೋಟ ಇಲ್ಲಿದೆ.

ಮಾರ್ಚ್​ನಿಂದ ಶುರುವಾದ ಸಾವಿನ ನೋಟ:

ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಕೇರಳ ಮೂಲದ ಭಾರತೀಯ ವಿದ್ಯಾರ್ಥಿಗೆ ಕೊರೊನಾ ವೈರಸ್ ತಗುಲಿರುವುದು 2019ರ ಜನವರಿ 30ರಂದು ದೃಢಪಟ್ಟು ಇದು ದೇಶದ ಪ್ರಥಮ ಪ್ರಕರಣ ಎನ್ನಿಸಿತು. ಸೌದಿ ಅರೇಬಿಯಾದಿಂದ ಆಗಮಿಸಿದ್ದ ಕಲಬುರಗಿಯ 76 ವರ್ಷದ ವೃದ್ಧ ಸೋಂಕಿನಿಂದ ಮಾರ್ಚ್​ 12ರಂದು ಸಾವನ್ನಪ್ಪಿದ ಮೊದಲ ಪೀಡಿತ. ಇಲ್ಲಿಂದ ಶುರುವಾದ ಕೊರೊನಾ ಸಾವು-ನೋವಿನ ವೈರಸ್​ ಆಟ 1.02 ಕೋಟಿ ಸೋಂಕಿತರು ಹಾಗೂ 1.47 ಲಕ್ಷ ಮೃತರ (ಡಿ. 28) ತನಕ ಬಂದು ನಿಂತಿದೆ.

ಕೋವಿಡ್ ಭೀಕರತೆ ಅರಿತ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 24ರಿಂದ 31ರ ತನಕ ಮೊದಲ ಹಂತದ ದೇಶವ್ಯಾಪಿ ಲಾಕ್​ಡೌನ್ ಘೋಷಿಸಿದರು. ವೈರಸ್ ಹರಡುವುದನ್ನು ತಡೆಯುವ ಪ್ರಯತ್ನದ ಭಾಗವಾಗಿ ಲಾಕ್​ಡೌನ್ ಮೊರೆ ಹೋಗಬೇಕಾಯಿತು. ಇಡೀ ಅರ್ಥ ವ್ಯವಸ್ಥೆಯನ್ನು ಬೀಗ ಹಾಕಿ ಮೂಲಗೆ ತಳ್ಳಲಾಯಿತು. ಜನರು ತುರ್ತು ಪರಿಸ್ಥಿತಿ ಹೊರತುಪಡಿಸಿ ಪ್ರಯಾಣಿಸಬಾರದು. ಅಗತ್ಯ ಕೆಲಸಗಳನ್ನು ಮಾತ್ರವೇ ಕೈಗೊಳ್ಳಿ. ಆಹಾರ, ಔಷಧ, ಮತ್ತು ಇತರ ಅಗತ್ಯ ಸರಕುಗಳನ್ನು ಖರೀದಿಸಬೇಕು, ಜನರು ಮನೆಯಲ್ಲಿಯೇ ಇರಬೇಕು. ಹೊರ ಬರಬಾರದು ಎಂದು ಆದೇಶಿಸಲಾಯಿತು.

ಭಾರತದಾದ್ಯಂತ ಹಠಾತ್ತನೆ ಘೋಷಿಸಿದ ಲಾಕ್​ಡೌನ್​ ವಿಶ್ವದಲ್ಲೇ ಅತಿ ದೊಡ್ಡ ಅವಧಿಯದ್ದಾಗಿದೆ. 1.3 ಬಿಲಿಯನ್ ಭಾರತೀಯರು ಮನೆಯಲ್ಲಿ ಕೂರಬೇಕಾಯಿತು. ಕೆಲವು ಅಗತ್ಯ ಸೇವೆಗಳು ಮತ್ತು ಚಟುವಟಿಕೆಗಳನ್ನು ಹೊರತುಪಡಿಸಿ, ಭಾರತದ 2.9 ಟ್ರಿಲಿಯನ್ ಡಾಲರ್​ ಆರ್ಥಿಕತೆಯು ಸ್ಥಗಿತಗೊಂಡಿತು.

ಪಾತಾಳ ಕಂಡ ಜಿಡಿಪಿ:

ನಿರೀಕ್ಷೆಯಂತೆ ಭಾರತದ ಆರ್ಥಿಕತೆಯು ಕೊರೊನಾ ಹಾಗೂ ಲಾಕ್​ಡೌನ್​ ಪರಿಣಾಮದಿಂದ ಸುಮಾರು 40 ವರ್ಷಗಳಲ್ಲೇ ಮೊದಲ ಬಾರಿಗೆ ಸಂಕುಚಿತಗೊಂಡಿತು. ಕೇಂದ್ರೀಯ ಸಾಂಖ್ಯಿಕ ಸಂಸ್ಥೆ (ಸಿಎಸ್‌ಒ) ಹೊರಡಿಸಿದ ಜಿಡಿಪಿಗೆ ಸಂಬಂಧಿಸಿದ ದತ್ತಾಂಶದಲ್ಲಿ 2020-21ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 23.9ರಷ್ಟು ಕುಗ್ಗಿತು. ಭಾರತೀಯ ಆರ್ಥಿಕತೆಯು 1979ರ ಬರಗಾಲದ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ದರವು ಸಾರ್ವಕಾಲಿಕ ಕನಿಷ್ಠ ಶೇ. 5.2ರಷ್ಟಕ್ಕೆ ತಲುಪಿತು. ಇದೇ ಅವಧಿಯಲ್ಲಿ ಅಮೆರಿಕ ಮತ್ತು ಇಟಲಿ ಕ್ರಮವಾಗಿ ಶೇ. 9.1ರಷ್ಟು ಹಾಗೂ 17.7ರಷ್ಟು ಕ್ಷೀಣಿಸಿದವು.

ಬ್ಯಾಲೆನ್ಸ್​ ಕಳೆದುಕೊಂಡ ಬ್ಯಾಂಕಿಂಗ್​:

ಕೋವಿಡ್​-19 ಸಾಂಕ್ರಾಮಿಕವು ಭಾರತದ ಬ್ಯಾಂಕಿಂಗ್ ಕ್ಷೇತ್ರ ಅದರಲ್ಲೂ ವಿಶೇಷವಾಗಿ ಬ್ಯಾಂಕ್​ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ದುರ್ಬಲಗೊಳಿಸಿತು. ಎನ್‌ಬಿಎಫ್‌ಸಿ ಕುಸಿದು ಬಿದ್ದಾಗ ಎನ್‌ಬಿಎಫ್‌ಸಿಗಳು 2018ರಲ್ಲಿ ದ್ರವ್ಯತೆ ಬಿಕ್ಕಟ್ಟಿನಿಂದ ಬಳಲುತ್ತಿದ್ದವು. ಅನುತ್ಪಾದಕ ಆಸ್ತಿ ಹೊರೆಯಿಂದ ಸಾರ್ವಜನಿಕ ವಲಯದ ಬ್ಯಾಂಕ್​ಗಳು ಕೂಡ ಬೆಳವಣಿಗೆಗೆ ಹಿಮ್ಮುಖವಾಗಿದ್ದವು. 2020ರ ಏಪ್ರಿಲ್​ನಿಂದ ಬ್ಯಾಂಕ್​ಗಳ ಸಾಲದ ಬೆಳವಣಿಗೆ ಕುಂಠಿತಗೊಂಡಿರುವುದು ಮಾತ್ರವಲ್ಲದೆ ಅವುಗಳ ಆಸ್ತಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟಿತು. ತತ್ಪರಿಣಾಮವಾಗಿ ಚಿಲ್ಲರೆ ಮತ್ತು ಎಂಎಸ್‌ಎಂಇ ವಿಭಾಗದ ಲಾಭ ರಹಿತ ಸಾಲದ ಪ್ರಮಾಣ ಹೆಮ್ಮರದಂತೆ ಬೆಳೆಯಿತು.

2020ರ ಜುಲೈನಲ್ಲಿ ರಿಸರ್ವ್​ ಬ್ಯಾಂಕ್​ನ ಹಣಕಾಸು ಸ್ಥಿರತೆ ವರದಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಅನುತ್ಪಾದಕ ಆಸ್ತಿಯ ಪ್ರಮಾಣ 2021ರ ಮಾರ್ಚ್ ವೇಳೆಗೆ ಶೇ. 14.7ಕ್ಕೆ ಏರಿಕೆ ಆಗಬಹುದೆಂದು ಅಂದಾಜಿಸಿತು. ಕಾರ್ಯನಿರ್ವಹಿಸದ ಸ್ವತ್ತುಗಳ ಏರಿಕೆಯು ಹೆಚ್ಚಿನ ಸಾಲ ವೆಚ್ಚಗಳಿಗೆ ಕಾರಣವಾಗುತ್ತದೆ. ಇದು ಬ್ಯಾಂಕ್​ಗಳ ನಷ್ಟ ಹೀರಿಕೊಳ್ಳುವ ತಿಗಣೆಯಂತೆ ಆಗುತ್ತದೆ. ಬ್ಯಾಂಕ್​ಗಳ ಲಾಭದಾಯಕತೆಯ ಕತ್ತು ಹಿಸುಕುತ್ತವೆ ಎಂದು ಎಚ್ಚರಿಸಿತು.

ಬ್ಯಾಂಕ್ ಸಾಲಗಾರರಿಗೆ ಉದ್ದೇಶಿತ ಪರಿಹಾರ ನೀಡಲು ಅಗತ್ಯವಿರುವ 26 ಕ್ಷೇತ್ರಗಳನ್ನು ಕೆವಿ ಕಾಮತ್ ಸಮಿತಿ ಆಯ್ಕೆ ಮಾಡಿತು. ಸಾಂಕ್ರಾಮಿಕ ಪೀಡಿತ ಸಾಲಗಳ ಪುನರ್​ ರಚನೆ ಹಣಕಾಸಿನ ಅಗತ್ಯ ಇರುವ ಉದ್ಯಮಗಳನ್ನು ಪಟ್ಟಿ ಮಾಡಿತು. ಒಟ್ಟು ಬ್ಯಾಂಕಿಂಗ್ ಸಾಲದ ಶೇ. 29.4ರಷ್ಟು ಸಾಂಕ್ರಾಮಿಕ ರೋಗದಿಂದ ಮಾತ್ರ ಪ್ರಭಾವಿತವಾಗಿದೆ. ಏಕಾಏಕಿ ಉಂಟಾದ ಭಯದಿಂದ ಜನರು ಒತ್ತಡಕ್ಕೆ ಒಳಗಾಗಿ ಶೇ. 42.1ರಷ್ಟು ಸಾಲವಿದೆ ಎಂಬ ಅಂಶ ಕಂಡುಕೊಂಡಿತು.

ಬ್ಯಾಂಕಿಂಗ್ ಕ್ಷೇತ್ರದ ಶೇ. 72ರಷ್ಟು ಸಾಲವು ಸಾಂಕ್ರಾಮಿಕದಿಂದ ಪ್ರಭಾವಿತವಾಗಿದೆ. ಆದ್ದರಿಂದ ಸಂಭಾವ್ಯ ಪರಿಹಾರದ ಅಪಾಯಗಳನ್ನು ನಿವಾರಿಸಲು ಸರ್ಕಾರವು ಸಾರ್ವಜನಿಕ ವಲಯದ ಬ್ಯಾಂಕ್​ಗಳಿಗೆ ಬಂಡವಾಳ ಬೆಂಬಲ ಒದಗಿಸುವ ಹೊರೆ ಸರ್ಕಾರದ ಮೇಲೆ ಬಿತ್ತು.

ಇದನ್ನೂ ಓದಿ: ಕೊರೊನಾ ಬಳಿಕ ಚೀನಾ ತೊರೆದು ಭಾರತಕ್ಕೆ ಬರಲಿವೆ 105 ಕಂಪನಿಗಳು

ಸಾರ್ವಜನಿಕ ವಲಯದ ಬ್ಯಾಂಕ್​ಗಳು ತಮ್ಮ ನಷ್ಟದ ಕೂಪದಿಂದ ಹೊರ ಬರಲು ಮುಂದಿನ ಎರಡು ವರ್ಷಗಳಲ್ಲಿ ಬಾಹ್ಯ ಬಂಡವಾಳದಲ್ಲಿ 1.9-2.1 ಟ್ರಿಲಿಯನ್ ಡಾಲರ್​ ಅಗತ್ಯವಾಗಿ ಒದಗಿಸಬೇಕು ಎಂದು ಮೂಡಿಸ್ ಇನ್ವೆಸ್ಟರ್ಸ್ ಸರ್ವೀಸ್ ಅಂದಾಜಿಸಿತು. ವೈರಾಣುವಿನಿಂದ ತೀವ್ರ ಹಾನಿಗೊಳಗಾದವರಿಗೆ ಸಾಲವನ್ನು ಹರಿಸಬೇಕು. ಕೃಷಿ, ಎಂಎಸ್ಎಂಇ, ಸಾಮಾಜಿಕ ಮೂಲ ಸೌಕರ್ಯ, ವಸತಿ ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ಆದ್ಯತೆಯಾಗಿ ಪೂರೈಸಲು ಸರ್ಕಾರವು ಬ್ಯಾಂಕ್​ಗಳ ಮರು ಬಂಡವಾಳೀಕರಣ ಷರತ್ತುಬದ್ಧಗೊಳಿಸಬೇಕು ಎಂದು ಸಲಹೆ ನೀಡಿತು.

ನೆಲ ಕಚ್ಚಿದ ಜಿಎಸ್​ಟಿ ಸಂಗ್ರಹ:

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಸಾಮಾಜಿಕ ರಕ್ಷಣೆಯ ಆದ್ಯತೆ ಪರಿಣಾಮ ಭಾರತವು ವಿಶ್ವದ ಇತರ ಭಾಗಗಳಂತೆ ತೆರಿಗೆಯ ಆದಾಯ ಕಡಿಮೆಯಾಯಿತು. ಏಪ್ರಿಲ್‌ನಲ್ಲಿ ಜಿಎಸ್​ಟಿ ಆದಾಯ ₹ 32,172 ಕೋಟಿ, ಮೇ ₹ 62,151 ಕೋಟಿ, ಜೂನ್ ₹ 90,917 ಕೋಟಿ, ಜುಲೈ ₹ 87,422 ಕೋಟಿ, ಆಗಸ್ಟ್ ₹ 86,449 ಕೋಟಿ, ಸೆಪ್ಟೆಂಬರ್ ₹ 95,480 ಕೋಟಿ, ಅಕ್ಟೋಬರ್ ₹ 1,05,155 ಕೋಟಿ ಮತ್ತು ನವೆಂಬರ್ ₹ 1,04,963 ಕೋಟಿಯಷ್ಟು ಹರಿದು ಬಂತು. ಬಜೆಟ್​ನಲ್ಲಿ ವಾರ್ಷಿಕ 13.8 ಲಕ್ಷ ಕೋಟಿ ರೂ. ಸಂಗ್ರಹಿಸುವ ಅಂದಾಜು ಗುರಿ ಇರಿಸಿಕೊಳ್ಳಲಾಗಿತ್ತು. ಆದರೆ, ನಿರೀಕ್ಷಿತ ಗುರಿಯನ್ನು ತಲುಪಲು ಆಗಲಿಲ್ಲ. ಹೀಗಾಗಿ, ಖರ್ಚು-ವೆಚ್ಚ ಹೆಚ್ಚವಾಗಿ ಆದಾಯ ಕೊರತೆ ಅನುಭವಿಸಿತು. ಇದರ ನಡುವೆ ವೈರಸ್ ವಿರುದ್ಧ ಹೋರಾಟಕ್ಕೆ ವಿಶ್ವ ಬ್ಯಾಂಕ್​, ಭಾರತಕ್ಕೆ 2.5 ಬಿಲಿಯನ್ ಡಾಲರ್​ (18,632 ಕೋಟಿ ರೂ.) ಮೌಲ್ಯದಷ್ಟು ಸಾಲ ನೀಡಿತು.

ದೇಶಿ ಆರೋಗ್ಯದ ಕೈಗನ್ನಡಿ ಬಹಿರಂಗ:

ಆರ್ಥಿಕ ಚೇತರಿಕೆಯು ಆರೋಗ್ಯ ಬಿಕ್ಕಟ್ಟನ್ನು ಎಷ್ಟು ಬೇಗನೆ ನಿಭಾಯಿಸುತ್ತದೆ ಎಂಬುದರ ಮೇಲೆ ದೇಶದ ಬಲ ಅವಲಂಬಿತವಾಗಿರುತ್ತದೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತದ ಆರೋಗ್ಯ ಮೂಲ ಸೌಕರ್ಯಗಳು ಸಾಣೆ ಹಿಡಿದು ಒಂದೊಂದಾಗಿ ಬೆಳಕಿಗೆ ಬಂದವು. ಸಾಂಕ್ರಾಮಿಕ ರೋಗವು ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ದುರ್ಬಲತೆ ಬಹಿರಂಗಪಡಿಸಿತು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ವಿಶ್ವದಲ್ಲಿ ಅತ್ಯಂತ ಕಡಿಮೆ ಹಣ ಖರ್ಚು ಮಾಡುವುದು ಭಾರತ ಎಂಬುದು ಜಗಜ್ಜಾಹೀರಾಯಿತು. ಆರೋಗ್ಯಕ್ಕಾಗಿ ಭಾರತದ ಸಾರ್ವಜನಿಕ ಖರ್ಚು ತನ್ನ ಜಿಡಿಪಿಯ ಶೇ. 2ಕ್ಕಿಂತ ಕಡಿಮೆಯಿದೆ.

ಕೋವಿಡ್​-19 ಸಾಂಕ್ರಾಮಿಕ ರೋಗಕ್ಕೆ ಮುಂಚೆಯೇ ಸಾರ್ವಜನಿಕ ಆಸ್ಪತ್ರೆಗಳು ಬೆಡ್​ ಮತ್ತು ಆರೋಗ್ಯ ಕಾರ್ಯಕರ್ತರ ತೀವ್ರ ಕೊರತೆ ಎದುರಿಸುತ್ತಿದ್ದವು. ಖಾಸಗಿ ಆರೋಗ್ಯ ಉದ್ಯಮವು ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದೆ. ಅವುಗಳ ಕೈಗೆಟುಕುವಿಕೆ ಮಾತು ಬಹು ದೂರವೇ ಇದೆ. ಇದೆಲ್ಲವನ್ನೂ ನೋಡಿದರೆ ಭಾರತದಲ್ಲಿ ತುರ್ತಾಗಿ ಸಾರ್ವಜನಿಕ ಆರೋಗ್ಯ ವೆಚ್ಚವನ್ನು ಹೆಚ್ಚಿಸುವ ಅವಶ್ಯಕತೆಯಿದೆ.

ಆರೋಗ್ಯ ಸವಾಲು ಎದುರಿಸಲು ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ 20 ಟ್ರಿಲಿಯನ್ ರೂ. ಪರಿಹಾರ ಪ್ಯಾಕೇಜ್​​ನಲ್ಲಿ ಸರ್ಕಾರ ಹಂಚಿಕೆ ಮಾಡಿದ ಹಣದ ಮೊತ್ತ ಅಸಮರ್ಪಕವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸಿ ಮನೆ-ಮನೆಗೆ ತೆರಳಿ ಪರೀಕ್ಷೆಗಳನ್ನು ಉಚಿತವಾಗಿ ನೀಡಬೇಕು. ಆದರೆ, ಹಾಗೆ ಆಗಲಿಲ್ಲ.

ಲಸಿಕೆ ವಿತರಣೆಯ ಕಗ್ಗಂಟು:

ವೈರಸ್ ವಿರುದ್ಧವಾಗಿ ಲಸಿಕೆಯನ್ನು ಲಕ್ಷಾಂತರ ಪ್ರಮಾಣದಲ್ಲಿ ಉತ್ಪಾದಿಸುವ ಸಾಮರ್ಥ್ಯ ಭಾರತಕ್ಕೆ ಇದೆ. ಆದರೆ, ಭಾರತದ ನಿಜವಾದ ಸವಾಲುಗಳು ಬೇರೆಯಾಗಿವೆ. 1.3 ಬಿಲಿಯನ್ ಜನರಿಗೆ ಲಸಿಕೆ ನೀಡುವುದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಲಸಿಕೆ ತಲುಪಿಸಲು ವ್ಯವಸ್ಥಾಪನೆ ಪೈಕಿ ರೆಫ್ರಿಜರೇಟರ್​ ಮತ್ತು ಸಾರಿಗೆ ಸೌಲಭ್ಯಗಳ ಕೊರತೆಯಿದೆ. ಅಲ್ಲದೆ, ದೇಶಾದ್ಯಂತ ಆರೋಗ್ಯ ಸಿಬ್ಬಂದಿಯ ತೀವ್ರ ಅಭಾವ ಮತ್ತೊಂದು ತಲೆನೋವಾಗಿದೆ. ಪ್ರತಿ ಭಾರತೀಯ ಲಸಿಕೆ ಪಡೆಯಲು ಒಂದು ವರ್ಷಕ್ಕಿಂತ ಹೆಚ್ಚು ಸಮಯ ಕಾಯಬೇಕಾಗಬಹುದು.

ತರಾತುರಿಯಲ್ಲಿ ಹೇರಿದ ಲಾಕ್‌ಡೌನ್ ಪರಿಣಾಮ ಕೋಟ್ಯಂತರ ಜನ ತಮ್ಮ ಉದ್ಯೋಗ ಕಳೆದುಕೊಂಡರು. ಆರಂಭಿಕ ದಿನಗಳಲ್ಲಿ ಸಾರಿಗೆ ವ್ಯವಸ್ಥೆಯಿಲ್ಲದೆ ನಗರಗಳಲ್ಲಿ ಸಿಲುಕಿಕೊಂಡಿದ್ದ ಗ್ರಾಮೀಣ ಪ್ರದೇಶಗಳ ಕೂಲಿ ಕಾರ್ಮಿಕರು ಸಾಮೂಹಿಕವಾಗಿ ನಡೆದು ಸಾಗಿದರು. ಸ್ವಾತಂತ್ರ್ಯ ನಂತರದ ಭಾರತದಲ್ಲಿ ಕೋವಿಡ್​-19 ಸಾಂಕ್ರಾಮಿಕ ತಂದೊಡ್ಡಿದ ಉದ್ಯೋಗ ಕೊರತೆ ಹಿಂದೆಂದೂ ಸಂಭವಿಸಿರಲಿಲ್ಲ.

ನಿರುದ್ಯೋಗದ ನರ್ತನ:

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ನಡೆಸಿದ ಗ್ರಾಹಕ ಪಿರಮಿಡ್ಸ್ ಸಮೀಕ್ಷೆ ಅನ್ವಯ, 2020ರ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಶೇ. 8.35ರಿಂದ ಶೇ 23.52ರ ತನಕ ನಿರುದ್ಯೋಗ ದರದಲ್ಲಿ ತೀವ್ರ ಏರಿಕೆ ಕಂಡಿದೆ ಎಂಬುದನ್ನು ತೋರಿಸಿದೆ. ಲಾಕ್‌ಡೌನ್ ಹೇರಿದ ಬಳಿಕ ಅಂದಾಜು 10 ಮಿಲಿಯನ್ ವಲಸೆ ಕಾರ್ಮಿಕರು ತಮ್ಮ ತವರಿಗೆ ಮರಳಿದರು. ಆಘಾತಕಾರಿ ಸಂಗತಿಯೆಂದರೆ, ಲಾಕ್​ಡೌನ್ ಸಮಯದಲ್ಲಿ ಉದ್ಯೋಗ ಅಥವಾ ಪ್ರಾಣ ಕಳೆದುಕೊಂಡ ವಲಸೆ ಕಾರ್ಮಿಕರ ಮಾಹಿತಿಯೇ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರಗಳ ಬಳಿಯೂ ಇಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.