ETV Bharat / business

ಶತಮಾನದ ಶೂನ್ಯಕಾಲ: 1930ರ ಆರ್ಥಿಕ ಕುಸಿತಕ್ಕಿಂತಲೂ 2020 ಭೀಕರ ವಿತ್ತೀಯ ಹಿಂಜರಿತ: IMF

1930ರ ಮಹಾ ಆರ್ಥಿಕ ಕುಸಿತದ ನಂತರ 2020ರ ವರ್ಷವು ಅತ್ಯಂತ ಭೀಕರವಾದ ಜಾಗತಿಕ ಆರ್ಥಿಕ ಕುಸಿತ ಕಾಣಬಹುದು. ಕೋವಿಡ್​-19 ನಮ್ಮ ಸಾಮಾಜಿಕ ಮತ್ತು ಆರ್ಥಿಕ ಕ್ರಮವನ್ನು ಮಿಂಚಿನ ವೇಗದಲ್ಲಿ ಮತ್ತು ಜೀವಿತದ ಅವಧಿಯಲ್ಲಿ ನಾವು ನೋಡಿರದ ಪ್ರಮಾಣದಲ್ಲಿ ಅಡ್ಡಿಪಡಿಸಿದೆ ಎಂದು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಹೇಳಿದ್ದಾರೆ.

International Monetary Fund
ಅಂತಾರಾಷ್ಟ್ರೀಯ ಹಣಕಾಸು ನಿಧಿ
author img

By

Published : Apr 9, 2020, 7:39 PM IST

ವಾಷಿಂಗ್ಟನ್: ದಿನದಿಂದ ದಿನಕ್ಕೆ ಹೆಚ್ಚು ಉಲ್ಬಣಗೊಳ್ಳುವ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ 170ಕ್ಕೂ ಅಧಿಕ ದೇಶಗಳ ತಲಾ ಆದಾಯದ ಬೆಳವಣಿಗೆ ಋಣಾತ್ಮಕವಾಗುವ ಸಾಧ್ಯತೆಯಿದೆ. 1930ರ ಮಹಾ ಆರ್ಥಿಕ ಕುಸಿತದ ನಂತರ 2020ರ ವರ್ಷವು ಅತ್ಯಂತ ಭೀಕರವಾದ ಜಾಗತಿಕ ಆರ್ಥಿಕ ಕುಸಿತ ಕಾಣಬಹುದು ಎಂದು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಎಚ್ಚರಿಸಿದ್ದಾರೆ.

ಮುಂದಿನ ವಾರ ನಡೆಯುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಗೂ ಮುನ್ನ ಜಾರ್ಜೀವಾ, ಜಾಗತಿಕ ಆರ್ಥಿಕ ಸಮಸ್ಯೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಇಂದು ಪ್ರಪಂಚವು ಬೇರೆ ಯಾವುದೇ ರೀತಿಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೋವಿಡ್​-19 ನಮ್ಮ ಸಾಮಾಜಿಕ ಮತ್ತು ಆರ್ಥಿಕ ಕ್ರಮವನ್ನು ಮಿಂಚಿನ ವೇಗದಲ್ಲಿ ಮತ್ತು ಜೀವಿತದ ಅವಧಿಯಲ್ಲಿ ನಾವು ನೋಡಿರದ ಪ್ರಮಾಣದಲ್ಲಿ ಅಡ್ಡಿಪಡಿಸಿದೆ ಎಂದರು.

ವೈರಸ್ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಜೀವಹಾನಿ ಉಂಟುಮಾಡುತ್ತಿದೆ. ಅದರ ವಿರುದ್ಧ ಹೋರಾಡಲು ಲಾಕ್‌ಡೌನ್ ಘೋಷಿಸಲಾಗಿದ್ದು, ಇದು ಶತಕೋಟಿ ಜನರ ಮೇಲೆ ಪರಿಣಾಮ ಬೀರಿದೆ. ಶಾಲೆಗೆ ಹೋಗುವುದು, ಕೆಲಸದಲ್ಲಿ ತೊಡಗಿಸಿಕೊಳ್ಳುವುದು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಸೇರುವುದು ಈಗ ದೊಡ್ಡ ಅಪಾಯವಾಗಿದೆ ಎಂದು ಹೇಳಿದರು.

ಈ ಬಿಕ್ಕಟ್ಟಿನ ಆಳ ಮತ್ತು ಅವಧಿಯ ಬಗ್ಗೆ ಜಗತ್ತು ಅಸಾಧಾರಣ ಅನಿಶ್ಚಿತತೆಯನ್ನು ಎದುರಿಸುತ್ತಿದೆ ಎಂದು ಗಮನಿಸಿದ ಅವರು, 2020 ರಲ್ಲಿ ಜಾಗತಿಕ ಬೆಳವಣಿಗೆಯು ತೀವ್ರವಾಗಿ ನಕಾರಾತ್ಮಕವಾಗಲಿದೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ ಎಂದು ಹೇಳಿದರು.

ಐಎಂಎಫ್ ಮುಂದಿನ ವರ್ಷ ಅಲ್ಪ ಪ್ರಮಾಣ ಚೇತರಿಕೆ ಮಾತ್ರ ನಿರೀಕ್ಷಿಸುತ್ತದೆ. ಈ ಚೇತರಿಕೆ ತುಂಬಾ ಕಷ್ಟಕರವಾಗಿಸುವ ಆರ್ಥಿಕತೆಯ ಗುರುತು ತಪ್ಪಿಸಲು ವ್ಯವಹಾರ ಮತ್ತು ಮನೆಗಳಿಗೆ ಜೀವಸೆಲೆಗಳನ್ನು ಒದಗಿಸುವಂತೆ ಜಾಗತಿಕ ಸರ್ಕಾರಗಳಿಗೆ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.