ETV Bharat / business

ಉಚಿತ ಅಕ್ಕಿ ನಿರ್ಧಾರದ ಬಳಿಕ ಮತ್ತೊಂದು ಪ್ಯಾಕೇಜ್​ಗೆ ಸೀತಾರಾಮನ್ ಸಿದ್ಧತೆ - ನಿರ್ಮಲಾ ಸೀತಾರಾನ್

ಲಾಕ್‌ಡೌನ್‌ನಿಂದ ಉಂಟಾಗುವ ಕಷ್ಟಗಳನ್ನು ಎದುರಿಸಲು ಸಹಾಯ ಮಾಡಲು ಸಮಾಜದ ಬಡ ಮತ್ತು ದುರ್ಬಲ ವರ್ಗದವರಿಗೆ ಆಹಾರ ಧಾನ್ಯಗಳು ಮತ್ತು ನಗದು ವರ್ಗಾವಣೆ ರೂಪದಲ್ಲಿ ಕಳೆದ ತಿಂಗಳು ಸರ್ಕಾರ 1.70 ಲಕ್ಷ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಿಸಿತ್ತು.

FinMin
ಹಣಕಾಸು ಸಚಿವಾಲಯ
author img

By

Published : Apr 6, 2020, 7:03 PM IST

ನವದೆಹಲಿ: ಕೊರೊನಾ ವೈರಸ್ ಹರಡುವಿಕೆಯಿಂದ ತೀವ್ರವಾಗಿ ತತ್ತರಿಸಿರುವ ಭಾರತೀಯ ಆರ್ಥಿಕತೆಗಾಗಿ ಎರಡನೇ ಪರಿಹಾರ ಪ್ಯಾಕೇಜ್‌ ಘೋಷಿಸಲು ಹಣಕಾಸು ಸಚಿವಾಲಯ ಕಾರ್ಯನಿರ್ವಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಲಾಕ್‌ಡೌನ್‌ನಿಂದ ಉಂಟಾಗುವ ಕಷ್ಟಗಳನ್ನು ಎದುರಿಸಲು ಸಹಾಯ ಮಾಡಲು ಸಮಾಜದ ಬಡ ಮತ್ತು ದುರ್ಬಲ ವರ್ಗದವರಿಗೆ ಆಹಾರ ಧಾನ್ಯಗಳು ಮತ್ತು ನಗದು ವರ್ಗಾವಣೆಯ ರೂಪದಲ್ಲಿ ಕಳೆದ ತಿಂಗಳು ಸರ್ಕಾರ 1.70 ಲಕ್ಷ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಿಸಿತ್ತು.

21 ದಿನಗಳ ಕಾಲ ವಿಧಿಸಿದ ಲಾಕ್​ಡೌನ್ ಅನ್ನು ತೆಗೆದುಹಾಕಿದ ನಂತರ, ಆರ್ಥಿಕತೆಯ ಸಂಕಷ್ಟದ ಕ್ಷೇತ್ರಗಳಿಗೆ ನೀಡಬೇಕಾದ ಉತ್ತೇಜನ ಪ್ಯಾಕೇಜ್​ಗಾಗಿ ಸರ್ಕಾರ ಪ್ರಸ್ತುತ ತೊಡಗಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಸಾಂಕ್ರಾಮಿಕ ರೋಗದ ತೀವ್ರತೆಗೆ ಅನುಗುಣವಾಗಿ ಮುಂದಿನ ಕೆಲವು ದಿನಗಳಲ್ಲಿ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ.

ನಾಗರಿಕರು, ವಿಶೇಷವಾಗಿ ಸಮಾಜದ ಬಡ ಮತ್ತು ದುರ್ಬಲ ವರ್ಗದವರು ಎದುರಿಸುತ್ತಿರುವ ಕಷ್ಟಗಳನ್ನು ತಗ್ಗಿಸಲು ಮತ್ತಷ್ಟು ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಕಳೆದ ವಾರ ಪ್ರಧಾನ ಮಂತ್ರಿಗಳ ಕಚೇರಿಯು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅತಾನು ಚಕ್ರವರ್ತಿ ನೇತೃತ್ವದ ಏಳು ಸದಸ್ಯರ ಸಬಲೀಕೃತ ಸಮಿತಿಯ ಗುಂಪು ರಚಿಸಿತು. ಈ ತಂಡದ ಸದಸ್ಯರು ದಿನವೂ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಸಶಕ್ತ ತಂಡವು ಆರ್ಥಿಕತೆಯ ಹಾನಿಯ ಕ್ಷೇತ್ರಗಳನ್ನು ನೋಡುವುದಲ್ಲದೇ ಏಕಾಏಕಿ ಕಾರಣದಿಂದಾಗಿ ನಿರುದ್ಯೋಗಿಗಳಾಗಿರುವ ಸಮಾಜದ ದೊಡ್ಡ ಭಾಗವು ಎದುರಿಸುತ್ತಿರುವ ಯಾತನೆ ಮತ್ತು ದುಃಖವನ್ನು ಸಹ ಅರ್ಥೈಸಿಕೊಳ್ಳಲಿದೆ.

ಚಕ್ರವರ್ತಿಯಲ್ಲದೇ ಸಮಿತಿಯ ಇತರ ಸದಸ್ಯರಾಗಿ ಖರ್ಚು ಕಾರ್ಯದರ್ಶಿ ಟಿ.ವಿ.ಸೋಮನಾಥನ್, ಕಾರ್ಮಿಕ ಕಾರ್ಯದರ್ಶಿ ಹಿರಾಲಾಲ್ ಸಮರಿಯಾ, ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ರಾಜೇಶ್ ಭೂಷಣ್, ಹಣಕಾಸು ಸೇವೆಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಪಂಕಜ್ ಜೈನ್, ಪ್ರಧಾನ ಮಂತ್ರಿ ಕಚೇರಿಯಲ್ಲಿ ಜಂಟಿ ಕಾರ್ಯದರ್ಶಿ ಅರವಿಂದ್ ಶ್ರೀವಾಸ್ತವ ಮತ್ತು ಕ್ಯಾಬಿನೆಟ್ ಸಚಿವಾಲಯದ ಉಪ ಕಾರ್ಯದರ್ಶಿ ಅಮ್ರಪಾಲಿ ಕಟಾ ಇದ್ದಾರೆ.

ಹಣಕಾಸು ಸಚಿವಾಲಯದ ಮೂರು ವಿಭಾಗಗಳ ಉನ್ನತ ಅಧಿಕಾರಿಗಳು ಸಮಿತಿಯ ಭಾಗವಾಗಿರುವುದರಿಂದ ಇದನ್ನು ಹಣಕಾಸು ಸಚಿವಾಲಯವೇ ಎಂದು ನಿರ್ಣಯಿಸಬಹುದು.

ಮೂಲಗಳ ಪ್ರಕಾರ, ಎಂಎಸ್‌ಎಂಇ, ಆತಿಥ್ಯ, ನಾಗರಿಕ ವಿಮಾನಯಾನ, ಕೃಷಿ ಮತ್ತು ಇತರ ಸಂಬಂಧಿತ ವಲಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಒತ್ತಡವನ್ನು ಗಮನಿಸುತ್ತಿದೆ. ಉತ್ತೇಜಕ ಪ್ಯಾಕೇಜ್‌ನಲ್ಲಿ ಕಾರ್ಯನಿರ್ವಹಿಸುವ ಒಳ ಹರಿವಿನ ಆಧಾರದ ಮೇಲೆ. ಪ್ಯಾಕೇಜ್ ಘೋಷಣೆ ಆಗಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.